Site icon Vistara News

Pralhad Joshi : ಕಲ್ಲಿದ್ದಲು ಅನಿಲೀಕರಣಕ್ಕೆ ಶೀಘ್ರ ಅನುಮತಿ; ಭೂಗತ ಯೋಜನೆಗೆ 50% ರಿಯಾಯಿತಿ

Coal Mining Pralhad Joshi

ನವ ದೆಹಲಿ: ಮಹತ್ವಾಕಾಂಕ್ಷಿ ಕಲ್ಲಿದ್ದಲು ಅನಿಲೀಕರಣ (Coal oxification) ಯೋಜನೆಯನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮುಂದಿಡಲಾಗುವುದು. ನಂತರ ಔಪಚಾರಿಕವಾಗಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ ಜೋಶಿ (Pralhad Joshi) ಹೇಳಿದ್ದಾರೆ.

ಭೂಗತ ಕಲ್ಲಿದ್ದಲು ಅನೀಲಿಕರಣ ಯೋಜನೆಗೆ (Underground coal Oxification) ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು ಎಂದೂ ತಿಳಿಸಿದ್ದಾರೆ. ವಾಣಿಜ್ಯ ಗಣಿಗಳಲ್ಲಿ ಭೂಗತ ಗಣಿಗಾರಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯಗಳೊಂದಿಗೆ ಆದಾಯ ಹಂಚಿಕೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡುತ್ತದೆ ಎಂದಿದ್ದಾರೆ.

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಮೂಲಕ ಭೂಗತ ಗಣಿಗಾರಿಕೆಗೆ ಪ್ರವೇಶಿಸುವವರಿಗೆ ಈ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಮೇಲ್ಮೈ ಗಣಿಗಾರಿಕೆಗೆ ಹೋಲಿಸಿದರೆ ಭೂಗತ ಗಣಿಗಾರಿಕೆ ಕಡಿಮೆ ಮಾಲಿನ್ಯಕಾರಕವಾಗಿದೆ. ಹಾಗಾಗಿ ಇದನ್ನು ಪ್ರೋತ್ಸಾಹಿಸಲು ಭವಿಷ್ಯದಲ್ಲಿ ಈ ಸಬ್ಸಿಡಿ ಹೆಚ್ಚಿಸಲೂ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಕಲ್ಲಿದ್ದಲು ಸಚಿವಾಲಯದ ಪಿಎಸ್‌ಯುಗಳು ಒಟ್ಟಾಗಿ 2030ರ ವೇಳೆಗೆ 12 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಲು ಯೋಜಿಸಲಾಗಿದೆ ಎಂದು ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ಏನಿದು ಭೂಗತ ಗಣಿಗಾರಿಕೆ? ಅನಿಲೀಕರಣ ಯೋಜನೆ

ಭಾರತವು ಪ್ರಸ್ತುತ ತೆರೆದ ಗಣಿಗಾರಿಕೆ ವಿಧಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭೂಗತ ಗಣಿಗಾರಿಕೆ ಪ್ರಸ್ತುತ ಭಾರತದ ಒಟ್ಟು ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆಯಲ್ಲಿ ಕೇವಲ 4 ಪ್ರತಿಶತದಷ್ಟಿದ್ದು ಇದನ್ನು ಹೆಚ್ಚಿಸಲು ಯೋಜಿಸಲಾಗುತ್ತಿದೆ. ಮೇಲ್ಮೈ ಕಲ್ಲಿದ್ದಲು ಗಣಿಗಾರಿಕೆ ವಿಧಾನದಲ್ಲಿ ಉತ್ತಮ ಗುಣಮಟ್ಟದ ಹಾಗೂ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹೊರ ತೆಗೆಯಲಿದ್ದು, ಅಷ್ಟೇ ಅನಾನುಕೂಲತೆ ಹೊಂದಿದೆ. ಅತಿಯಾದ ಹೊರೆ ತೆಗೆಯುವಿಕೆಯಿಂದಾಗಿ ಹೆಚ್ಚಿನ ಮಾಲಿನ್ಯ, ಪುನರ್ವಸತಿ ಮತ್ತು ಭೂ ಸ್ವಾಧೀನದ ವೆಚ್ಚಗಳು ಹಾಗೂ ಅರಣ್ಯದ ಸ್ಥಳಾಂತರ ಸಮಸ್ಯೆಗಳು ಅಧಿಕವಾಗಿವೆ ಎಂದು ಸಚಿವ ಜೋಶಿ ವಿವರಿಸಿದ್ದಾರೆ.

ದೇಶದ ಅತಿದೊಡ್ಡ ಕಲ್ಲಿದ್ದಲು ಗಣಿಗಾರ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ತನ್ನ ಭೂಗತ ಗಣಿಗಾರಿಕೆ ಉತ್ಪಾದನೆಯನ್ನು 2030ರ ವೇಳೆಗೆ 100 ಮಿಲಿಯನ್ ಟನ್‌ಗಳಿಗೆ (ಎಂಟಿ) ನಾಲ್ಕು ಪಟ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. ಕಲ್ಲಿದ್ದಲು ಅನಿಲೀಕರಣಕ್ಕಾಗಿ ಅನಿಯಂತ್ರಿತ ವಲಯಕ್ಕೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗಾಗಿ ಹೊಸ ಉಪವಿಭಾಗವನ್ನು ಸೇರಿಸಿದೆ ಎಂದಿದ್ದಾರೆ.

ಇದನ್ನೂ ಓದಿ: Coal India disinvestment | ಕೋಲ್‌ ಇಂಡಿಯಾದಿಂದ 5-10% ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಚಿಂತನೆ

ಭೂಗತ ಗಣಿಗಾರಿಕೆಯಲ್ಲಿ ಅನಿಲೀಕರಣ ನಡೆಯುತ್ತದೆ. ಅನಿಲೀಕರಣ ಎಂದರೆ ನಿಯಂತ್ರಿತ ಪರಿಸ್ಥಿತಿಯಲ್ಲಿ ಕಲ್ಲಿದ್ದಲನ್ನು ಗಾಳಿ, ಆಮ್ಲಜನಕ, ಹಬೆ ಇಲ್ಲವೇ ಕಾರ್ಬನ್‌ ಡೈ ಆಕ್ಸೈಡ್‌ ಬಳಸಿ ಉತ್ಕರ್ಷಣಗೊಳಿಸುವುದು (Oxidation). ಹೀಗೆ ಆಕ್ಸಿಡೇಷನ್‌ ಮಾಡಿದಾಗ ಅದು ಸಿನ್‌ ಗ್ಯಾಸ್‌ ಆಗುತ್ತದೆ. ಇದನ್ನು ಸಿಂಥೆಟಿಕ್‌ ಗ್ಯಾಸ್‌ ಎಂದೂ ಹೇಳುತ್ತಾರೆ. ಇದನ್ನು ವಿದ್ಯುತ್‌ ಉತ್ಪಾದನೆ ಮತ್ತು ಮೆಥನಾಲ್‌ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಭಾರೀ ಗಣಿಗಾರಿಕೆ ಉಪಕರಣಗಳಿಗೆ ಯಾವುದೇ PLI ಯೋಜಿಸಿಲ್ಲ

ಭಾರಿ ಗಣಿಗಾರಿಕೆ ಮತ್ತು ನಿರ್ಮಾಣ ಉಪಕರಣಗಳ ಉತ್ಪಾದನೆಗೆ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹವನ್ನು (Production related incentive-PLI) ನೀಡಲು ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ. ನಮ್ಮ PSU ಗಳಿಗೆ ಮತ್ತು ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಭಾಗವಹಿಸುವ ಖಾಸಗಿ ಕಂಪನಿಗಳಿಗೆ ಖನಿಜ ಹರಾಜಿನಲ್ಲಿ ಖರೀದಿಸಲು ಹೇಳುತ್ತಿದ್ದೇವೆ ಎಂದಿದ್ದಾರೆ. ಎನ್‌ಎಲ್‌ಸಿ ಇಂಡಿಯಾ ಮತ್ತು ಕೋಲ್ ಇಂಡಿಯಾದ ಮಾಲೀಕತ್ವವನ್ನು ಸರ್ಕಾರ ಯಾವಾಗಲೂ ಉಳಿಸಿಕೊಳ್ಳುತ್ತದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

Exit mobile version