ಹಳಿಯಾಳ: ಇಂದಿಗೂ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶ (Haliyal Election Results) ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಆರ್.ವಿ. ದೇಶಪಾಂಡೆ ಅವರು ಜಯ ಸಾಧಿಸುವ ಮೂಲಕ ತಮ್ಮ ಜಯದ ನಗಾಲೋಟವನ್ನು ಮುಂದುವರಿಸಿದ್ದಾರೆ.
ಪಾರುಪತ್ಯ ಮೆರೆದ ಆರ್.ವಿ. ದೇಶಪಾಂಡೆ
ಹಿಂದೆ ಈ ಕ್ಷೇತ್ರ ಹಳಿಯಾಳ ಮತ್ತು ಮುಂಡಗೋಡ ತಾಲೂಕುಗಳನ್ನು ಒಳಗೊಂಡಿತ್ತು. 2008ರಲ್ಲಿ ಕ್ಷೇತ್ರಗಳ ಮರುವಿಂಗಡನೆಯಾದಾಗ ಹಳಿಯಾಳ ಕ್ಷೇತ್ರದಿಂದ ಮುಂಡಗೋಡ ತಾಲೂಕು ಬೇರ್ಪಟ್ಟು ಜೋಯಿಡಾ ತಾಲೂಕು ಹೊಸದಾಗಿ ಸೇರ್ಪಡೆಯಾಯಿತು. ಆದರೆ, ಇಲ್ಲಿ ಸದಾ ಆರಿಸಿಬರುವಂತೆ ಈ ಬಾರಿಯೂ ಆರ್.ವಿ. ದೇಶಪಾಂಡೆ ಅವರು ಗೆಲುವು ಸಾಧಿಸಿದ್ದು, ತಮ್ಮ ಪಾರುಪತ್ಯವನ್ನು ಮೆರೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಒಂದು ಬಾರಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿ ಆಯ್ಕೆಯಾದವರು. ಈ ಕ್ಷೇತ್ರದಲ್ಲಿ ಇರುವ ಮರಾಠರು, ಕುಣಬಿಗಳು, ಮುಸ್ಲಿಮರು ಮತಗಳು ನಿರ್ಣಾಯಕ ಪಾತ್ರ ವಹಿಸಿವೆ. ಬಿಜೆಪಿ ಎಷ್ಟೇ ಕಷ್ಟಪಟ್ಟರೂ ದೇಶಪಾಂಡೆ ಅವರನ್ನು ಹಿಂದಿಕ್ಕಲು ಸಾಧ್ಯವಾಗಲೇ ಇಲ್ಲ.
ಸ್ಪರ್ಧೆಯೊಡ್ಡಿದ ಎಸ್.ಎಲ್. ಘೋಟ್ನೆಕರ್
ಸೋಲೇ ಕಾಣದ ದೇಶಪಾಂಡೆ ವಿರುದ್ಧ ಅವರ ಶಿಷ್ಯರೆಂದು ಗುರುತಿಸಿಕೊಂಡಿದ್ದ ಎಸ್.ಎಲ್ ಘೋಟ್ನೆಕರ್ ಜೆಡಿಎಸ್ ಅಭ್ಯರ್ಥಿಯಾಗಿ ಗುರು ವಿರುದ್ಧವೇ ಸ್ಪರ್ಧೆಗೆ ಇಳಿದಿದ್ದರು. ದೇಶಪಾಂಡೆ ಅವರ ಸಾಂಪ್ರದಾಯಿಕ ಮತಗಳನ್ನು ಸೆಳೆದರಾದರೂ ಜಯಗಳಿಸುವಲ್ಲಿ ಯಶ ಕಾಣಲಿಲ್ಲ.
ಸುನೀಲ್ ಹೆಗಡೆ ಪ್ರಬಲ ಪೈಪೋಟಿ
ಎಸ್.ಎಲ್. ಘೋಟ್ನೆಕರ್ ಅವರು ದೇಶಪಾಂಡೆ ಅವರ ಸಾಂಪ್ರದಾಯಿಕ ಮತಗಳನ್ನು ಸೆಳೆದರಾದರೂ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಕ್ಷೇತ್ರದಲ್ಲಿ ದೇಶಪಾಂಡೆ ಮಾಡಿದ ಅಭಿವೃದ್ಧಿ ಕಾರ್ಯಗಳು ಅವರುಗೆ ಕೈಹಿಡಿದರೆ, ಅಭಿವೃದ್ಧಿ ಮಾಡಲು ಅವಕಾಶ ಕೊಡಿ ಎಂಬ ಸುನೀಲ್ ಹೆಗಡೆ ಅವರಿಗೆ ಅವಕಾಶ ಸಿಗದಂತೆ ಆಗಿದೆ.
ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ
ಕಳೆದ ಬಾರಿಯ ಫಲಿತಾಂಶ ಏನು?
ಆರ್.ವಿ. ದೇಶಪಾಂಡೆ(ಕಾಂಗ್ರೆಸ್): 61,577 | ಸುನಿಲ್ ಹೆಗಡೆ(ಬಿಜೆಪಿ): 56,437 | ಗೆಲುವಿನ ಅಂತರ: 5,140
ಈ ಬಾರಿಯ ಫಲಿತಾಂಶ ಇಂತಿದೆ
ಆರ್.ವಿ. ದೇಶಪಾಂಡೆ (ಕಾಂಗ್ರೆಸ್): 57,240 | ಸುನೀಲ್ ಹೆಗಡೆ (ಬಿಜೆಪಿ): 53,617 | ಎಸ್.ಎಲ್. ಘೋಟ್ನೇಕರ್ (ಜೆಡಿಎಸ್): 26775 | ನೋಟಾ: 884 | ಗೆಲುವಿನ ಅಂತರ: 3,623
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ