Site icon Vistara News

ಕಾರ್‌ ಚೇಸ್‌ ಮಾಡಿದ ಹಾನಗಲ್‌ ಪೊಲೀಸ್‌, ದಾಖಲೆ ಇಲ್ಲದ 85 ಲಕ್ಷ ರೂ. ವಶ, ನಾಲ್ವರ ಸೆರೆ

car chase hanagal

ಹಾವೇರಿ: ಪೊಲೀಸರಿಗೆ ಆ ಕಾರಿನ ಮೇಲೆ ಯಾಕೋ ಸಂಶಯ ಬಂದಿತ್ತು. ನಿಲ್ಲಿಸಿದರೂ ನಿಲ್ಲದೆ ಓಡಿದ ಕಾರನ್ನು ಅವರು ಚೇಸ್‌ ಮಾಡಿದರು. ಬಹು ದೂರದವರೆಗೆ ಚೇಸ್‌ ಮಾಡಿ ತಡೆದು ನಿಲ್ಲಿಸಿದಾಗ ಅದರಲ್ಲಿ ಕಂಡದ್ದು ನಾಲ್ಕು ಜನ ಮತ್ತು ಕಂತೆ ಕಂತೆ ನೋಟು. ಆಗಷ್ಟೇ ಪ್ರಿಂಟಿಂಗ್‌ ಪ್ರೆಸ್‌ನಿಂದ ಬಂದಿದೆಯೋ ಏನೋ ಎನ್ನುವಷ್ಟು ಗರಿ ಗರಿ ನೋಟು. ಎಣಿಸಿ ನೋಡಿದರೆ ಬರೋಬ್ಬರಿ ೮೫ ಲಕ್ಷ ರೂ.!

ಇದು ಮಂಗಳವಾರ ಹಾನಗಲ್‌ನಲ್ಲಿ ನಡೆದ ಘಟನೆ. ಹುಬ್ಬಳ್ಳಿಯಿಂದ ಸಾಗರಕ್ಕೆ ಹೋಗುವ ದಾರಿಯಲ್ಲಿ ಹಾನಗಲ್‌ ಪೊಲೀಸರು ತಡೆ ನಿಲ್ಲಿಸಿದರು. ಆದರೆ, ಟೊಯೊಟೊ ಕಾರು ನಿಲ್ಲಲಿಲ್ಲ. ಹೀಗಾಗಿ ಬೆನ್ನಟ್ಟಿದರು. ನಾಲ್ಕು ಜನರನ್ನು ಹಿಡಿದು ಹಣವನ್ನು ವಶಪಡಿಸಿಕೊಂಡವರು. ಇದು ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಎಂದು ಬಳಿಕ ವಿಚಾರಣೆ ವೇಳೆ ತಿಳಿದುಬಂತು.

ಯಾರಿವರು ಬಂಧಿತರು?
ಬಂಧಿತರನ್ನು ಫಯಾಜ್ ಖಾನ್ (೩೧), ಇಮ್ರಾನ್ ಖಾನ್ (೨೭), ಸದ್ದಾಂ ಖಾನ್ (೨೩), ಸಯ್ಯದ್ ಅಮೀನ್ (೨೯) ಅವರು ಬಂಧಿತರು. ಇವರಲ್ಲಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯವರು ಮತ್ತು ಇನ್ನಿಬ್ಬರು ಶಿವಮೊಗ್ಗ ಜಿಲ್ಲೆಯ ಸಾಗರದವರು. ಇವರೆಲ್ಲರೂ ಅಡಕೆ ವ್ಯಾಪಾರಿಗಳು. ಇವರು ಹುಬ್ಬಳ್ಳಿಯಿಂದ ಈ ಹಣವನ್ನು ತರುತ್ತಿದ್ದರು, ಸಾಗರಕ್ಕೆ ಹೋಗುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಬಂಧಿತರು ಮತ್ತು ಹಣದೊಂದಿಗೆ ಹಾನಗಲ್‌ ಪೊಲೀಸರು

ಇದು ಅಡಕೆ ಮಾರಿ ಬಂದ ಹಣವೇ ಎನ್ನುವುದಕ್ಕೆ ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ ಎಂದು ತಿಳಿದುಬಂದಿದೆ. ಈಗ ಅವರು ದಾಖಲೆಗಳನ್ನು ನೀಡಿ ಕೋರ್ಟ್‌ಗೆ ಹಣದ ಮೂಲ ತಿಳಿಸಿ ಅದನ್ನು ಮರಳಿ ಪಡೆಯಬಹುದಾಗಿದೆ.
ದೊಡ್ಡ ಮೊತ್ತದ ಹಣವನ್ನು ಸಾಗಿಸುವಾಗ ಹಣದ ಮೂಲ ಯಾವುದು ಎನ್ನುವುದನ್ನು ತಿಳಿಸುವ ದಾಖಲೆ ಹೊಂದಿರಬೇಕಾಗುತ್ತದೆ. ಅಥವಾ ಪೊಲೀಸರಿಗೆ ಕನಿಷ್ಠ ನಂಬಲರ್ಹ ಮಾಹಿತಿಯನ್ನು ನೀಡಬೇಕು. ಹಾಗಿಲ್ಲದಿದ್ದರೆ ಇದು ದಾಖಲೆ ಇಲ್ಲದ ಹಣ ಎಂದಾಗುತ್ತದೆ.

ಇದನ್ನೂ ಓದಿ | ಲಕ್ಷಾಂತರ ರೂಪಾಯಿ ಮೌಲ್ಯದ 8 ಹುಲಿ ಉಗುರು ವಶ; ಸೆನ್ (CEN) ಪೊಲೀಸರ ಭರ್ಜರಿ ಕಾರ್ಯಾಚರಣೆ

Exit mobile version