Site icon Vistara News

Vistara Top10 News : ಗಣತಿ ವಿರುದ್ಧ ಲಿಂಗಾಯತರ ನಿರ್ಣಯ , ವಿವಾದ ಸೃಷ್ಟಿಸಿದ ಹರಿಪ್ರಸಾದ್ ಹೇಳಿಕೆ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Top 10 news

1. ವೀರಶೈವ ಲಿಂಗಾಯತ ಮಹಾಸಭಾದಿಂದ 8 ನಿರ್ಣಯ; ಜಾತಿ ಗಣತಿ ವರದಿ ತಿರಸ್ಕಾರಕ್ಕೆ ಆಗ್ರಹ
ದಾವಣಗೆರೆ: ದಾವಣಗೆರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ (All India Veerashaiva Lingayat Mahasabha) 24ನೇ ಮಹಾ ಅಧಿವೇಶನದಲ್ಲಿ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಎಂಟು ನಿರ್ಣಯಗಳನ್ನು ಮಂಡನೆ ಮಾಡಿದ್ದಾರೆ. ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ ಕಟಿಬದ್ಧವಾಗಿರುವುದು, ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸುವುದು, ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು (Veerashaiva Lingayat) ಸೇರಿಸುವುದು, ಜಾತಿ ಗಣತಿಗೆ (Caste Census) ಸಂಬಂಧಪಟ್ಟಂತೆ ಕಾಂತರಾಜ ವರದಿಯನ್ನು ತಿರಸ್ಕಾರ ಮಾಡುವುದು ಸೇರಿದಂತೆ ಇನ್ನಿತರ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ವೇದಿಕೆಯಲ್ಲಿದ್ದ ಹಾಗೂ ವೇದಿಕೆ ಮುಂಭಾಗದಲ್ಲಿದ್ದ ವೀರಶೈವ ಲಿಂಗಾಯತ ಸಮುದಾಯ ಜನರು ಎದ್ದು ನಿಂತು ಈ ನಿರ್ಣಯಗಳನ್ನು ಅಂಗೀಕರಿಸಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಯಾವುದೇ ಧರ್ಮದ ಅತಿ ಓಲೈಕೆ ಬೇಡ; ಲಿಂಗಾಯತ ಅಧಿಕಾರಿಗಳಿಗೆ ಸ್ಥಾನ ನೀಡಿ: ಸಚಿವರಿಗೆ ಬಿಎಸ್‌ವೈ ತಾಕೀತು

2. ಬಿ.ಎಸ್.‌ ಯಡಿಯೂರಪ್ಪ ಮಾದರಿಯಲ್ಲಿ ಸಮಾಜದ ಕಣ್ಣಿನಂತೆ ಕೆಲಸ ‌ಮಾಡುತ್ತೇನೆ: ವಿಜಯೇಂದ್ರ
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರ ಮಾದರಿಯಲ್ಲಿ ಸಮಾಜದ ಕಣ್ಣಿನಂತೆ ಕೆಲಸ ‌ಮಾಡುತ್ತೇನೆ. ಯಡಿಯೂರಪ್ಪ ಅವರು ನಾಲ್ಕು ಭಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ‌. ಎಲ್ಲ ಸಮುದಾಯದವರನ್ನು ಜತೆಗೆ ತೆಗೆದುಕೊಂಡು ಹೋಗಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರ ರಾಜಕೀಯ ಜೀವನ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಅವರನ್ನು ರಾಜಕೀಯದಿಂದ ಮುಗಿಸುವ ಷಡ್ಯಂತ್ರ ನಡೆಯಿತು. ಆದರೆ, ಅವರು ಬೆನ್ನು ತೋರಿಸಿ ಓಡಿಹೋಗಿಲ್ಲ. ಧೈರ್ಯವಾಗಿ ‌ಎದುರಿಸಿದರು. ಹಾಗೆಯೇ ನಾನು ಕೆಲಸ ಮಾಡುತ್ತೇನೆ. ಸಮಾಜದ ಕಣ್ಣಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Karnataka BJP: ವಿಜಯೇಂದ್ರ ನೇತೃತ್ವದ ಯುವ ತಂಡ, ಪಕ್ಷ ನಿಷ್ಠೆ ಇಲ್ಲದವರಿಗೆ ಕಠಿಣ ಸಂದೇಶ

3. ಬಿಜೆಪಿಗರು ಬ್ರಿಟಿಷರ ಬೂಟು ನೆಕ್ಕೋರು ಎಂದ ಹರಿಪ್ರಸಾದ್;‌ ನೀವು ಇಟಲಿಯವರ ಬೂಟು ನೆಕ್ಕುತ್ತಿದ್ದೀರಾ ಎಂದ ಬಿಜೆಪಿ!
ಬೆಂಗಳೂರು/ಹುಬ್ಬಳ್ಳಿ/ದಾವಣಗೆರೆ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ನಮ್ಮನ್ನು ಟಿಪ್ಪು ಸುಲ್ತಾನ್‌ (Tipu Sultan) ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ನೀಡಿರುವ ಹೇಳಿಕೆಗೆ ಬಿಜೆಪಿ ಕೆಂಡವಾಗಿದೆ. ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬೂಟ್‌ ಕದನ (Boot battle) ಶುರುವಾಗಿದೆ. ಈ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (Opposition leader R Ashok) ಸೇರಿ ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ನಿಮ್ಮ ದುರಹಂಕಾರದ ನಡವಳಿಕೆಗೆ ಯಾವ ರೀತಿ ಶಾಸ್ತಿ ಆಗಲಿದೆ ಕಾದು ನೋಡಿ. ನೀವು ಇಟಲಿಯವರ ಬೂಟು ನೆಕ್ಕುತ್ತಿದ್ದೀರಾ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಾರ್ಟಿ ಟಿಪ್ಪು ಪಾರ್ಟಿ ಆಗದೇ ಇದ್ದಿದ್ದರೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ಕೊಡುತ್ತಿದ್ದರಾ ಎಂದು ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

4. ಡಿಎಂಕೆ ನಾಯಕನ ಹಿಂದಿ ವಿರೋಧಿ ಹೇಳಿಕೆ; ಇಂಡಿಯಾ ಬ್ಲಾಕ್​ನಲ್ಲಿ ಒಡಕು?
ನವದೆಹಲಿ: ಹಿಂದಿ ಮಾತ್ರ ಕಲಿತವರು ತಮಿಳುನಾಡಲ್ಲಿ ಟಾಯ್ಲೆಟ್​ ತೊಳೆಯುತ್ತಾರೆ ಎಂದು ಡಿಎಂಕೆ ನಾಯಕ ದಯಾನಿಧಿ ಮಾರನ್ (Dayanidhi Maran) ನೀಡಿದ ಹೇಳಿಕೆ ಇಂಡಿಯಾ ಬ್ಲಾಕ್​ನೊಳಗಿನ ಒಡಕಿಗೆ ಕಾರಣವಾಗಿದೆ. ವೀಡಿಯೊ ಹಳೆಯದು ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆದರೂ ಈ ವಿಷಯ ದೊಡ್ಡ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಸಮಯದಲ್ಲಿ ಭಾರತೀಯ ಬಣದ ಏಕತೆಗೆ ತೊಂದರೆಯನ್ನುಂಟು ಮಾಡುತ್ತದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

5. ಜನವರಿಯಿಂದ ಪ್ರತಿದಿನ 10 ಸಾವಿರ ಕೇಸ್!‌ ಜ್ವರ ಇದ್ದವರಿಗೆ ಕಡ್ಡಾಯ ಟೆಸ್ಟ್
ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ (Coronavirus News) ಆತಂಕ ಶುರುವಾಗಿದೆ. ಜನವರಿಯಿಂದ ರಾಜ್ಯದಲ್ಲಿ ಸೋಂಕಿತರ ಪ್ರಮಾಣ (covid cases in karnataka) ನಿತ್ಯ 10 ಸಾವಿರ ಗಡಿ ದಾಟುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

6. ಮಸೀದಿಗೆ ನುಗ್ಗಿ ನಿವೃತ್ತ ಪೊಲೀಸ್‌ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಉಗ್ರರು
ಶ್ರೀನಗರ: ಭಾನುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಸೀದಿಗೆ ನುಗ್ಗಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ (Terror Attack) ಕೊಂದಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Terror Attack: ಸೈನಿಕರು ವಿಚಾರಣೆಗೆ ಕರೆದೊಯ್ದ 3 ನಾಗರಿಕರು ಶವವಾಗಿ ಪತ್ತೆ

7. ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಸಿಕ್ಕಿದ್ದು ಮೋದಿಯಿಂದಾಗಿ: ಕಲ್ಲಡ್ಕ ಪ್ರಭಾಕರ್‌ ಭಟ್
ಮಂಡ್ಯ: ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ (Triple Talaq) ಹೇಳುವ ಅವಕಾಶ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸರ್ಕಾರದಿಂದಾಗಿ ತ್ರಿವಳಿ ತಲಾಕ್ ರದ್ದಾಗಿದೆ. ಬಹು ಪತ್ನಿತ್ವ ಪಿಡುಗು ಮತ್ತು ತ್ರಿವಳಿ ತಲಾಕ್‌ ಕಾಟದಿಂದಾಗಿ ಈ ಹಿಂದೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ (Permanent Husband) ಇರಲಿಲ್ಲ. ತ್ರಿವಳಿ ತಲಾಕ್‌ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವಾಗಿದೆ ಎಂದು ಹಿಂದು ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಸ್ಥಳದಲ್ಲೇ ಮಂದಿರ ಕಟ್ತೇವೆ; ಹನುಮ ಭಕ್ತರ ಶಪಥ

8. ಟೆಸ್ಟ್​​ನಲ್ಲಿ ಆಸೀಸ್​ ವಿರುದ್ಧ ಜಯ; ಭಾರತೀಯ ಮಹಿಳೆಯರ ಚಾರಿತ್ರಿಕ ಸಾಧನೆ
ಮುಂಬಯಿ: ಭಾರತದ ಕ್ರಿಕೆಟ್​ ಕ್ಷೇತ್ರದಲ್ಲಿ ಇತಿಹಾಸವೊಂದು ಸೃಷ್ಟಿಯಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ (Ind vs Aus ) ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದೆ. ಭಾರತದ ಪಾಲಿಗೆ ಇದು ಮೊದಲ ಸರಣಿ ಗೆಲವು ಕೂಡ ಹೌದು. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ದಿನವಾಗಲಿದೆ. ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾವು ಅಲಿಸಾ ಹೀಲಿ ನೇತೃತ್ವದ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಸೋಲಿಸುವ ಮೂಲಕ ಈ ಕೀರ್ತಿ ತನ್ನದಾಗಿಸಿಕೊಂಡಿದೆ. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿಕೊಂಡು ಬಂದಿದ್ದ ಭಾರತೀಯ ಪಡೆ ಪಂದ್ಯದ ನಾಲ್ಕನೇ ದಿನ ಗೆಲುವ ಸಾಧಿಸಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

9. ಹೊಸ ಕುಸ್ತಿ ಒಕ್ಕೂಟವೇ ರದ್ದು; ಕುಸ್ತಿಪಟುಗಳ ಬಿಗಿಪಟ್ಟಿಗೆ ಚಿತ್‌ ಆದ ಕೇಂದ್ರ
ಹೊಸದಿಲ್ಲಿ: ಹೊಸ ಅಧ್ಯಕ್ಷ ಸಂಜಯ ಸಿಂಗ್‌ (Sanjay Singh) ಸೇರಿದಂತೆ ಇತ್ತೀಚೆಗೆ ಆಯ್ಕೆಯಾದ ನೂತನ ಭಾರತೀಯ ಕುಸ್ತಿ ಒಕ್ಕೂಟವನ್ನೇ (Wrestling Federation of India – WFI) ಭಾರತದ ಕ್ರೀಡಾ ಸಚಿವಾಲಯ ರದ್ದುಗೊಳಿಸಿದೆ. ಇತ್ತೀಚೆಗೆ ಸಾಕ್ಷಿ ಮಲಿಕ್‌ (Sakshi Malik) ಸೇರಿದಂತೆ ವಿಶ್ವಖ್ಯಾತಿಯ ಹಲವು ಕುಸ್ತಿಪಟುಗಳು ಸಂಜಯ್‌ ಆಯ್ಕೆಯ ಬಗ್ಗೆ (WFI Polls Row) ಆಕ್ರೋಶ ವ್ಯಕ್ತಪಡಿಸಿದ್ದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

10. ಆರೋಗ್ಯದ ಬಗ್ಗೆ ಕಾಳಜಿ ವಹಿಸಿʼ ಎನ್ನುತ್ತಾ ವೇದಿಕೆ ಮೇಲೆ ಕುಸಿದು ಪ್ರೊಫೆಸರ್‌ ಸಾವು
ಹೊಸದಿಲ್ಲಿ: ಕಾನ್ಪುರ ಐಐಟಿ (IIT Kanpur) ಪ್ರೊಫೆಸರ್‌ ಒಬ್ಬರು ವೇದಿಕೆ ಮೇಲೆ ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದು (Heart Failure) ಮೃತಪಟ್ಟಿದ್ದಾರೆ. ಐಐಟಿಯ ವಿದ್ಯಾರ್ಥಿ ವ್ಯವಹಾರಗಳ ಡೀನ್ ಆಗಿರುವ ಸಮೀರ್ ಖಾಂಡೇಕರ್ ಅವರು ಸಾಯುವ ಹೊತ್ತಿನಲ್ಲಿ ʼಉತ್ತಮ ಆರೋಗ್ಯʼದ ಕುರಿತು ಉಪನ್ಯಾಸ ನೀಡುತ್ತಿದ್ದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version