ಹಾಸನ: ಹಾಸನದ ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಸ್ಫೋಟಗೊಡ ಪ್ರಕರಣದಲ್ಲಿ ಆರೋಪಿಯಾಗಿರುವ ಮಿಕ್ಸಿ ಬಾಂಬರ್‌ನ ಇನ್ನೊಂದು ಕರಾಳ ಮುಖವೂ ಈಗ ಬಯಲಾಗಿದೆ. ತನ್ನಲ್ಲಿ ಕೆಜಿಗಟ್ಟಲೆ ಚಿನ್ನ ಇದೆ, ಹಣವಿದೆ ಎಂದು ನಂಬಿಸಲು ವಿಡಿಯೋ ಮಾಡಿ ಈತ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದುದು ಬಯಲಿಗೆ ಬಂದಿದೆ.
ಮಿಕ್ಸಿಯಲ್ಲಿ ಡಿಟೊನೇಟರ್ ಇಟ್ಟು ಬ್ಲಾಸ್ಟ್ ಮಾಡಿದ ಕಿರಾತಕ ಅನೂಪ್ ಕುಮಾರ್‌ನ ಮುಖವಾಡವನ್ನು ಪೊಲೀಸರು ಈಗ ಕಳಚಿದ್ದಾರೆ. ಈತ ಮ್ಯಾಟ್ರಿಮೊನಿ ಸೈಟ್‌ಗಳಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮಹಿಳೆಯರು, ಯುವತಿಯರಿಗೆ ಗಾಳ ಹಾಕುತ್ತಿದ್ದ. ತನ್ನ ಬಳಿ ಕೆಜಿಗಟ್ಟಲೆ ಬಂಗಾರ ಇದೆ, ಬಂಗಾರದ ಬಿಸ್ಕೆಟ್ ಇದೆ, ಕೋಟಿ ಕೋಟಿ ಹಣ ಇದೆ ಎಂದು ತೋರಿಸುವಂತೆ ಫೇಕ್ ವೀಡಿಯೊ ಕ್ರಿಯೇಟ್ ಮಾಡಿ, ನಕಲಿ ಬಂಗಾರದ ಜೊತೆ ವಿಡಿಯೋ ಮಾಡಿ ಮಹಿಳೆಯರನ್ನು ನಂಬಿಸಿ ವಂಚಸುತ್ತಿದ್ದ.
ಇದನ್ನೂ ಓದಿ | Hassan Blast | ಆಂಟಿ ಪ್ರೀತ್ಸೆ ಎಂದವನಿಗೆ NO ಅಂದಿದ್ದಕ್ಕೆ ಉಗ್ರ ಪ್ಲ್ಯಾನ್; ಮಿಕ್ಸಿ ಬಾಂಬ್ ಕಳಿಸಿದ್ದ ಪಾಗಲ್ ಪ್ರೇಮಿ!
ಈತನಿಗೆ ಮದುವೆಯಾಗಿ ಮಕ್ಕಳಿದ್ದರೂ, ಇತರ ಮಹಿಳೆಯರಿಗೆ ವಂಚಿಸಿ ಅವರಿಂದ ಹಣ ಸೆಳೆಯಲು ಖತರ್ನಾಕ್ ಪ್ಲಾನ್‌ಗಳನ್ನು ಮಾಡುತ್ತಿದ್ದ. ಯಾರ್ಯಾರದೋ ಫಾರ್ಮ್‌ಗಳನ್ನು ತನ್ನದೆಂದು ತೋರಿಸುತ್ತಿದ್ದ. ಇದು 20 ಲೀಟರ್ ಕುಕ್ಕರ್‌ನಲ್ಲಿರೊ 40 ಕೆಜಿ ಬಂಗಾರ, ಇದು 12 ಲೀಟರ್ ಕುಕ್ಕರ್‌ನಲ್ಲಿರೊ 36 ಕೆಜಿ ಬಂಗಾರ ಎಂದು ಸೆಲ್ಫಿ ವೀಡಿಯೋ ಮಾಡಿ, ಸೂಟ್‌ಕೇಸ್‌ನಲ್ಲಿ ಕೋಟಿ ಮೌಲ್ಯದ ಗೋಲ್ಡ್ ಬಿಸ್ಕೆಟ್, ಹಂಡೆಯಲ್ಲಿ ಕಂತೆ ಕಂತೆ ನೋಟು ಇವೆ, ಇದೆಲ್ಲಾ ನನ್ನ ಚಿನ್ನ, ನನ್ನ ಬಂಗಾರಿ ವಸಂತಾಗೆ ಎಂದು ವೀಡಿಯೋ ಮಾಡಿ ಕಳಿಸಿದ್ದ.
ಹಾಸನದ ಕುವೆಂಪು ನಗರದ ಮಹಿಳೆ ವಸಂತಾರನ್ನು ತನ್ನ ಮೋಸದ ಬಲೆಗೆ ಕೆಡವಲು ಪ್ಲಾನ್ ಮಾಡಿಕೊಂಡಿದ್ದ ಈತ ಫಾರ್ಮ್ ಹೌಸ್, ಕೆಜಿ ಗಟ್ಟಲೆ ಚಿನ್ನ, ಗೋಲ್ಡ್ ಬಿಸ್ಕೆಟ್ ಎಲ್ಲಾ ನನ್ನ ಬಳಿ ಇದೆ, ನನ್ನ ಬಳಿ ಇರೋದೆಲ್ಲಾ ನಿನಗಾಗಿ ಎಂದು ನಂಬಿಸಿ ವೀಡಿಯೋ ಮಾಡಿ ಕಳಿಸಿದ್ದ. ಈತನ ವರ್ತನೆ ನೋಡಿ ಅನುಮಾನಗೊಂಡು ಮಹಿಳೆ ಆತನಿಂದ ಅಂತರ ಕಾಯ್ದುಕೊಂಡಿದ್ದರು. ವಸಂತ ತನ್ನ ಬಲೆಗೆ ಬೀಳಲಿಲ್ಲ ಎಂದು ಆಕೆ ಮೇಲೆ ಸಿಟ್ಟಾಗಿ ಆಕೆಯನ್ನೇ ಮುಗಿಸಲು ಸ್ಕೆಚ್ ಹಾಕಿದ್ದ.
ಅದಕ್ಕಾಗಿ ಮಿಕ್ಸಿಯಲ್ಲಿ ಡಿಟೊನೇಟರ್ ಇಟ್ಟು ಕೊಲೆ ಮಾಡಲು ಯತ್ನಿಸಿದ್ದ. ಆತನ ಪಾರ್ಸೆಲ್ ಎಂದು ತಿಳಿದಾಗ ವಾಪಸ್ ಕೊರಿಯರ್ ಶಾಪ್‌ಗೆ ಮಹಿಳೆ ನೀಡಿದ್ದರು. ಡಿಸೆಂಬರ್ 26ರಂದು ಕುವೆಂಪು ನಗರದ ಎರಡನೆ ಹಂತ ಬಡಾವಣೆಯ ಮುಖ್ಯ ರಸ್ತೆಯ ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡು ಮಿಕ್ಸಿ ಬಾಂಬರ್, ಬೆಂಗಳೂರು ಮೂಲದ ಅನೂಪ್ ಕುಮಾರ್‌ನನ್ನು ವಶಕ್ಕೆ ಪಡೆದ ಪೊಲೀಸರು ಆತನ ರಹಸ್ಯ ಬಯಲು ಮಾಡಿದ್ದಾರೆ.
ಇದನ್ನೂ ಓದಿ | Hassan Blast | ಹಾಸನ ಮಿಕ್ಸಿ ಸ್ಫೋಟಕ್ಕೂ, ಉಗ್ರ ಸಂಘಟನೆಗೂ ಸಂಬಂಧ ಇಲ್ಲ: ಎಸ್‌ಪಿ ಹರಿರಾಂ ಶಂಕರ್