Site icon Vistara News

Hassan Accident | ಹಾಸನದಲ್ಲಿ 9 ಮಂದಿಯನ್ನು ಬಲಿ ತೆಗೆದುಕೊಂಡ ಭೀಕರ ಸರಣಿ ಅಪಘಾತ ಸಂಭವಿಸಿದ್ದು ಹೇಗೆ?

ಅಪಘಾತ

ಹಾಸನ: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಾಂಧಿ ನಗರದ ಬಳಿ ಶನಿವಾರ ತಡ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. (Hassan Accident) ಬಾಳಿ ಬದುಕಬೇಕಿದ್ದ ನಾಲ್ವರು ಮಕ್ಕಳು, ನಾಲ್ವರು ಮಹಿಳೆಯರು ಹಾಗೂ ಪುರುಷರೊಬ್ಬರು ದಾರುಣವಾಗಿ ಸಾವಿಗೀಡಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟವರೆಲ್ಲರೂ ಒಂದೇ ಕುಟುಂಬದ ಸಂಬಂಧಿಕರಾಗಿದ್ದಾರೆ.

ಕೆಎಂಎಪ್ ಹಾಲಿನ ಲಾರಿ, ಟಿಟಿ ವಾಹನ (ಟೆಂಪೊ) ಮತ್ತು ಸಾರಿಗೆ ಬಸ್ ನಡುವೆ ಸಂಭವಿಸಿದ ಸರಣಿ ಅಪಘಾತದ ಭೀಕರ ದೃಶ್ಯಕ್ಕೆ ಜನ ಬೆಚ್ಚಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ತೆರಳಿ ಮರಳುತ್ತಿದ್ದಾಗ, ಊರಿಗೆ ಸಮೀಪದಲ್ಲೇ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇವರೆಲ್ಲರೂ ಬಲಿಯಾಗಿದ್ದಾರೆ. ಅರಸೀಕೆರೆ ಶವಾಗಾರದ ಬಳಿ ಸಂಬಂಧಿಕರು ನೆರೆದಿದ್ದು, ಶೋಕ ವ್ಯಕ್ತಪಡಿಸಿದ್ದಾರೆ.

ಒಂದೇ ಗ್ರಾಮದ ಏಳು ಜನರು ಹಾಗು ಮತ್ತೊಂದು ಗ್ರಾಮದ ಇಬ್ಬರ ಸಾವಿಗೀಡಾಗಿದ್ದಾರೆ. ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತಪಟ್ಟವರು. ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದಾಗ, ಊರಿಗೆ ಐದಾರು ಕಿ.ಮೀ ಸಮೀಪದಲ್ಲೇ ಅಪಘಾತ ಉಂಟಾಯಿತು.

ಶುಕ್ರವಾರ ಹಿರಿಯರ ಪೂಜಾದಿಗಳನ್ನು ಮುಗಿಸಿ ಧರ್ಮಸ್ಥಳಕ್ಕೆ ಹೋಗಿದ್ದರು. ತೀರ್ಥ ಕ್ಷೇತ್ರಗಳ ಸಂದರ್ಶನವನ್ನು ಪೂರ್ಣಗೊಳಿಸಿ ಹಿಂತಿರುಗುವಾಗ ದುರ್ಮರಣಕ್ಕೀಡಾಗಿದ್ದಾರೆ.

” ಮೃತಪಟ್ಟಿರುವ ಬಾಲಕ ಸಮರ್ಥನಿಗೆ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಟ್ಟಿದ್ದೆವು. ನನ್ನ ತಮ್ಮ ಎರಡು ವರ್ಷದ ಹಿಂದೆ ಕೋವಿಡ್ ನಿಂದ ತೀರಿಕೊಂಡಿದ್ದ. ಇವತ್ತು ಅವನ ಮಕ್ಕಳು ತೀರಿಕೊಂಡಿದ್ದಾರೆ. ಇಂಥ ಸಾವು ಯಾವ ಕುಟುಂಬಕ್ಕೂ ಬರಬಾರದು‌ʼʼ ಎಂದು ಸಂಬಂಧಿಕರು ರೋದಿಸಿದರು.

ಹಾಸನದಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದ ದೃಶ್ಯಾವಳಿ

” ಮೃತಪಟ್ಟಿರುವ ಬಾಲಕ ಸಮರ್ಥನಿಗೆ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಟ್ಟಿದ್ದೇವು. ನನ್ನ ತಮ್ಮ ಎರಡು ವರ್ಷದ ಹಿಂದೆ ಕೋವಿಡ್ ನಿಂದ ತೀರಿಕೊಂಡಿದ್ದ. ಇವತ್ತು ಅವನ ಮಕ್ಕಳು ತೀರಿಕೊಂಡಿದ್ದಾರೆ. ಇಂಥ ಸಾವು ಯಾವ ಕುಟುಂಬಕ್ಕೂ ಬರಬಾರದು‌ʼʼ ಎಂದು ಸಂಬಂಧಿಕರೊಬ್ಬರು ದುಃಖತಪ್ತರಾಗಿ ನುಡಿದರು.

ಲಾರಿ ಚಾಲಕನ ನಿರ್ಲ್ಯಕ್ಷದ ಚಾಲನೆ ಕಾರಣ? : ಹಾಸನದಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ಹಾಲಿನ ಲಾರಿಯನ್ನು ಚಾಲಕನ ನಿರ್ಲ್ಯಕ್ಷದ ಚಾಲನೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಒನ್‌ ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹಾಲಿನ ಲಾರಿಯನ್ನು ಚಲಾಯಿಸಿದ್ದರಿಂದ ಸರಣಿ ಅಪಘಾತ ಉಂಟಾಗಿದೆ. ಲಾರಿ ಮೊದಲಿಗೆ ಟೆಂಪೊಗೆ ಢಿಕ್ಕಿ ಹೊಡೆಯಿತು. ಆಗ ಹಿಂದಿನಿಂದ ಬರುತ್ತಿದ್ದ ಸಾರಿಗೆ ಬಸ್‌ ಕೂಡ ಢಿಕ್ಕಿ ಹೊಡೆಯಿತು. ಹೀಗಾಗಿ ಟೆಂಪೊದಲ್ಲಿದ್ದವರು ಪ್ರಾಣ ಕಳೆದುಕೊಳ್ಳುವಂತಾಯಿತು. ಬಸ್ಸಿನಲ್ಲಿದ್ದ ಕೆಲವರಿಗೆ ಗಾಯಗಳಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Exit mobile version