Site icon Vistara News

ದುರಂತ ಅಂತ್ಯ‌ ಕಂಡ ಲವ್‌ ಸ್ಟೋರಿ : ಫ್ಲೆಕ್ಸ್ ಹಾಕಿಸಿ ಆಕ್ರೋಶ ತೋರಿದ Friends

ಲವ್‌ ಸ್ಟೋರಿ

ಹಾಸನ: ಹುಡುಗಿ ಮನೆಯವರು ಮದುವೆ ನಿರಾಕರಿಸಿದ್ದಕ್ಕೆ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು ಗ್ರಾಮದ ಅನಿಲ್ (24) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ.

ಎಂಟು ವರ್ಷಗಳಿಂದ ಅನಿಲ್ ಹಾಗೂ ಭಾವನ ಪರಸ್ಪರ ಪ್ರೀತಿಸುತ್ತಿದ್ದರು. ಕಾಫಿ ಬೆಳೆಗಾರ ಶಿವರಾಂ-ಸವಿತಾ ಪುತ್ರಿ ಭಾವನಾ. ಪೋಷಕರು ಇವರಿಬ್ಬರ ಮದುವೆಯನ್ನು ನಿರಾಕರಿಸಿದ್ದರು. ಇದರಿಂದ ಮನನೊಂದು ಶುಕ್ರವಾರ ಬೆಳಗ್ಗೆ ಭಾವನ ಮನೆ ಮುಂದೆಯೇ‌ ಅನಿಲ್ ವಿಷ ಸೇವಿಸಿದ್ದ. ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನಿಲ್‌ ಸಾವನಪ್ಪಿದ್ದಾನೆ.

ಇದನ್ನೂ ಓದಿ | ಆಸ್ತಿ ವಿವಾದ: ಅಳಿಯನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ!

ಲವ್‌ ಸ್ಟೋರಿ

ಇದೀಗ ಗ್ರಾಮದಲ್ಲಿ ಯುವಕರನ ಸ್ನೇಹಿತರು ಫ್ಲೆಕ್ಸ್ ಹಾಕಿಸಿದ್ದಾರೆ. ಯುವತಿ ಹಾಗೂ ಆಕೆಯ ಪೋಷಕರ ಮೇಲೆ ಮೃತನ ಸ್ನೇಹಿತರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕುಂದಾಪುರ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ, ಜ್ಯುವೆಲ್ಲರಿ ಮಾಲೀಕನ ಸೆರೆ

Exit mobile version