Site icon Vistara News

ಹಾವೇರಿಯಲ್ಲಿ ಕಂಟ್ರೀಮೇಡ್‌ ಗನ್‌ ಸಪ್ಲೈ ಮಾಡುತ್ತಿದ್ದವರ ಬಂಧನ!

ಹಾವೇರಿ: ಶೂಟೌಟ್‌ ಮಾಡಲು ದುಷ್ಕರ್ಮಿಗಳಿಗೆ ಪಿಸ್ತೂಲ್ ಸಪ್ಲೈ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಹಡೆಮುರಿ ಕಟ್ಟಿದ್ದಾರೆ. ಈ ಹಿಂದೆ ಹಾವೇರಿ ಜಿಲ್ಲೆಯ ಚಿತ್ರಮಂದಿರದಲ್ಲಿ ಶೂಟೌಟ್‌ ನಡೆದಿತ್ತು. ಶೂಟೌಟ್‌ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ, ಆರೋಪಿಗಳಿಗೆ ಗನ್‌ ಸಪ್ಲೈ ಮಾಡಿರುವವರನ್ನು ಈಗ ಪತ್ತೆಹಚ್ಚಿ ಬಂಧಿಸಿದ್ದಾರೆ.

ಈ ಹಿಂದೆ ಕನ್ನಡದ ಹಿಟ್ ಫಿಲ್ಮ್ ಕೆಜಿಎಫ್ ಚಾಪ್ಟರ್ 2 ಚಿತ್ರ ವೀಕ್ಷಣೆ ವೇಳೆ ಈ ಶೂಟೌಟ್ ನಡೆದಿತ್ತು. ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲಿ ಈ ಗುಂಡಿನ ಸದ್ದು ಕೇಳಿ ಬಂದಿದ್ದು, ಸಾರ್ವಜನಿಕರು ಇದರಿಂದ ಬೆಚ್ಚಿಬಿದ್ದಿದ್ದರು. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ, ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಹಾಗೂ ಈ ಅರೋಪಿಗಳಿಗೆ ಕಂಟ್ರಿಮೇಡ್‌ ಪಿಸ್ತೂಲ್‌ ಸಪ್ಲೈ ಮಾಡಿದ್ದು ಯಾರು? ಎಂದು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದರು.

ಈ ಬೆನ್ನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಗಳಿಗೆ ಕಂಟ್ರಿಮೇಡ್‌ ಪಿಸ್ತೂಲ್‌ ನೀಡಿದ್ದು ಯಾರು ಎಂಬುದರ ಬಗ್ಗೆ ಓರ್ವ ಆರೋಪಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಮಾಹಿತಿಯಿಂದ ಪೊಲೀಸರಿಗೆ ಬಿಹಾರ್‌ ಮೂಲದ ಮೂವರು ಕಂಟ್ರಿಮೇಡ್‌ ಗನ್‌ ಸಪ್ಲೈ ಮಾಡಿದ್ದರೆಂದು ತಿಳಿದುಬಂದಿತ್ತು. ಪೊಲೀಸರು ಆ ಮೂವರನ್ನು ಬಂಧಿಸಿದ್ದಾರೆ.

ಶಾಹಿದ್ ಚಾಂದ್, ಆಸೀಪ್ ಅಲಾಮ್ ಹಾಗೂ ಈ ಜಾಲದ ಕಿಂಗ್ ಪಿನ್ ಸಂಶದ ಅಲಾಮ್ ಎಂಬ ಮೂವರನ್ನು ಬಂಧಿಸಲಾಗಿದೆ. ಇವರು ಬಿಹಾರ ರಾಜ್ಯದ ಕಟ್ಟಿಮುಂಗೇರ್ ಜಿಲ್ಲೆಯ ಮಿರ್ಜಾಪುರ ಗ್ರಾಮದವರು. ಅಲ್ಲಿ ಕಂಟ್ರಿಮೇಡ್ ಪಿಸ್ತೂಲ್ ತಯಾರಿಸಿ ತಮ್ಮ ಪರಿಚಯದವರಿಗೆ ಸಪ್ಲೈ ಮಾಡುತ್ತಿದ್ದರು.

ಇದನ್ನೂ ಓದಿ: ಮಹಿಳೆ ಮೇಲೆ ಗುಂಡುಹಾರಿಸಿದ ಮುಸುಕುಧಾರಿಗಳು

Exit mobile version