ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಉದ್ದನೂರು ಗ್ರಾಮದ ಅಂಗನವಾಡಿಯ (Anganawadi) ಪುಟ್ಟ ಕಂದಮ್ಮನ ಆರೋಗ್ಯ ಸ್ಥಿತಿಯಲ್ಲಿ (Health problem) ಏರುಪೇರಾಗಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆ ನೀಡಿದ ಅವಧಿ ಮೀರಿದ ಸಿರಪ್ (Expired syrup) ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.
ಮಲ್ಲೇಶ್ ಮತ್ತು ಜ್ಯೋತಿ ದಂಪತಿ ಪುತ್ರ ಮಿಥುನ್ ಎಂಬ ಒಂದುವರೆ ವರ್ಷದ ಮಗುವಿಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ವಿಟಮಿನ್ ಎ ಸಿರಪ್ ನೀಡಿದ್ದರು. ಅದನ್ನು ಕುಡಿದ ಬಳಿಕ ಒಂದೂವರೆ ವರ್ಷದ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು.
ಹೀಗೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಿರಪ್ ಪಡೆದ ದಿನದಿಂದ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಮಗುವಿನ ಕಣ್ಣು ಹಳದಿ ಬಣ್ಣಕ್ಕೆ ತಿರುಗಿದ್ದು, ನಿರಂತರವಾಗಿ ನೀರು ಸುರಿಯುತ್ತಿದೆ ಎಂದು ಮಲ್ಲೇಶ್ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ : Cough Syrup: ಭಾರತದ 7 ಕಫ್ ಸಿರಪ್‌ಗಳು ವಿಷಪೂರಿತ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಅವಧಿ ಮೀರಿದ ಸಿರಪ್
ಅಂಗನವಾಡಿ ಕಾರ್ಯಕರ್ತೆ ನೀಡಿದ ವಿಟಮಿನ್ ಡಿ ಸಿರಪ್ ಅವಧಿ ಮುಗಿದಿತ್ತು. ಜೂನ್ 2022ಕ್ಕೆ ಅವಧಿ ಮುಗಿದ ವಿಟಮಿನ್ ಸಿರಪ್ ಸೇವಿಸಿದ್ದರಿಂದಲೇ ಮಗುವಿಗೆ ಅನಾರೋಗ್ಯ ಕಾಡಿರಬಹುದು ಎನ್ನುವುದು ಮನೆಯವರ ಸಂಶಯ.
ಆದರೆ, ಈ ಬಗ್ಗೆ ದೂರು ನೀಡಿದರೂ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮನೆಯವರು ದೂರಿದ್ದಾರೆ.
ಇದನ್ನೂ ಓದಿ: Master Anand: ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್‌ಗೆ ರಿಯಲ್ ಎಸ್ಟೇಟ್ ವಂಚನೆ
ಚಾಲಕನ ನಿಯಂತ್ರಣ ತಪ್ಪಿ ಹೈಡ್ರಾಲಿಕ್ ಕ್ರೇನ್ ಪಲ್ಟಿ; ಒಬ್ಬ ಸಾವು
ಬೆಳಗಾವಿ: ಚಿಕ್ಕೋಡಿ ಪಟ್ಟಣದ ಹೊರವಲಯದ ಘಟ್ಟಿ ಬಸವಣ್ಣ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಹೈಡ್ರಾಲಿಕ್ ಕ್ರೈನ್ ಪಲ್ಟಿಯಾಗಿ (Crane Overturns) ಒಬ್ಬರು ಮೃತಪಟ್ಟಿದ್ದಾರೆ.
ಚಿಕ್ಕೋಡಿ- ಹುಕ್ಕೇರಿ ರಾಜ್ಯ ಹೆದ್ದಾರಿ ಮೇಲೆ ದುರ್ಘಟನೆ (Road accident) ನಡೆದಿದೆ. ಚಿಕ್ಕೋಡಿ ತಾಲೂಕಿನ ಜೋಡಕುರಳಿ ನಿವಾಸಿಯಾಗಿರುವ ಸತ್ಯಪ್ಪಾ ಖದ್ದಿ (27) ಮೃತಪಟ್ಟ ಯುವಕ.
ಸತ್ಯಪ್ಪಾ ಖದ್ದಿ ಕರೋಶ್ ಗ್ರಾಮದ ಕ್ರೇನನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗ ಅದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಸತ್ಯಪ್ಪಾ ಖದ್ದಿ ಮೃತಪಟ್ಟಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ವಿಜಯ್ ನಿಕಮ್ ಮತ್ತು ವಿಕಾಸ್ ಪವಾರ್ ಅವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಚಿಕ್ಕೋಡಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.