ಬೆಂಗಳೂರು: ವಿಶ್ವಾದ್ಯಂತ ಹೃದಯಾಘಾತ (Heart attack) ಹೆಚ್ಚುತ್ತಿದೆ. ಅದರಲ್ಲೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯ ಸ್ತಂಭನ, ಹೃದಯಾಘಾತ, ಹೃದಯ ವೈಫಲ್ಯ, ಸಡನ್ ಕಾರ್ಡಿಯಾಕ್ ಅರೆಸ್ಟ್ (Sudden Cardiac Arrest) ಹೀಗೆ ಹೃದಯ ಹಿಂಡಲು ಹಲವು ಕಾರಣಗಳು ಕೇಳಿಬರುತ್ತಿವೆ. ಇತ್ತೀಚೆಗೆ ಕಂಡುಬರುತ್ತಿರುವ ಗಮನಾರ್ಹ ಸಂಗತಿ ಎಂದರೆ ಈ ಆಘಾತ ಮತ್ತು ಸಾವುಗಳು ಸೋಮವಾರವೇ ಹೆಚ್ಚಾಗಿ ನಡೆಯುತ್ತಿವೆ. ಇದನ್ನು ಬ್ರಿಟಿಷ್ ಹಾರ್ಟ್ ಫೌಂಡೇಷನ್ (British Heart Foundation) ದೃಢಪಡಿಸಿದೆ.
ಹೃದಯಾಘಾತ ವಾರದ ಯಾವುದೇ ದಿನವೂ ಸಂಭವಿಸಬಹುದು. ಆದರೆ ಸೋಮವಾರವೇ ಹೆಚ್ಚು ಎನ್ನುವುದು ಅಂಕಿ ಅಂಶಗಳಿದ ಸಾಬೀತಾಗಿರುವ ಸಂಗತಿ. ಈ ವಿದ್ಯಮಾನವನ್ನು ಬ್ಲೂ ಮಂಡೇ (Blue Monday) ಎಂದು ಕರೆಯಲಾಗುತ್ತದೆ. ವಾರದ ಇತರ ದಿನಗಳಿಗಿಂತ ಸೋಮವಾರ ಶೇಕಡಾ 13ರಷ್ಟು ಹೆಚ್ಚು ಹೃದಯಾಘಾತಗಳು ಸಂಭವಿಸುತ್ತಿರುವುದು ದಾಖಲಾಗಿದೆ. ಅದರಲ್ಲೂ ಈ ಸಾವುಗಳು ಬೆಳಗ್ಗೆ 6ರಿಂದ 10 ಗಂಟೆಯ ನಡುವೆ ಸಂಭವಿಸುತ್ತಿರುವುದು ಕಂಡುಬಂದಿದೆ.
ಬ್ಲೂ ಮಂಡೇ ಅಂದರೆ ಏನಾಗುತ್ತದೆ?
- ವ್ಯಕ್ತಿಯಲ್ಲಿ ಹೃದಯ ರಕ್ತ ನಾಳದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ರಕ್ತದಲ್ಲಿನ ಕಾರ್ಟಿಸೋಲ್ ಮತ್ತು ಇತರ ಹಾರ್ಮೋನುಗಳು ಹೆಚ್ಚಾಗುವುದು ಒಂದು ಕಾರಣ.
- ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದಾಗ ಹಾರ್ಮೋನ್ ಮಟ್ಟವು ನಮ್ಮ ದೇಹದಲ್ಲಿ ನಡೆಯುವ ಲಯಬದ್ಧ ಕಾರ್ಯಾಚರಣೆ (ಸರ್ಕಾಡಿಯನ್) ಮೇಲೆ ಪರಿಣಾಮ ಬೀರುತ್ತದೆ. ಇದು ಹೃದಯಾಘಾತ ಅಥವಾ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸೋಮವಾರದ ಹೃದಯಾಘಾತಕ್ಕೆ ಆರು ಕಾರಣ
- ಹೆಚ್ಚಿನವರು ಭಾನುವಾರ ವಾರಾಂತ್ಯದ ಮೂಡ್‌ನಲ್ಲಿರುತ್ತಾರೆ. ನಿತ್ಯದ ದಿನಚರಿಗಳಿಂದ ದೂರ ಇರುತ್ತಾರೆ. ಆಹಾರ ಪದ್ಧತಿ ಕೂಡಾ ಬದಲಾಗುತ್ತದೆ. ಹೀಗೆ ವಿರಾಮದಲ್ಲಿದ್ದವರು ಸೋಮವಾರ ಒಮ್ಮಿಂದೊಮ್ಮೆಗೆ ಆಕ್ಟಿವ್ ಆದಾಗ ಹೃದಯದ ಮೇಲೆ ಒತ್ತಡ ಬೀಳುವುದರಿಂದ ಹೀಗಾಗಬಹುದು.
- ಭಾನುವಾರ ಕೆಲವರು ಮದ್ಯ ಕುಡಿಯಬಹುದು, ವಿಪರೀತ ಆಹಾರ ಸೇವನೆ ಮಾಡುತ್ತಿರಬಹುದು. ಇದರಿಂದ ಒಟ್ಟಾರೆ ಜೀವನ ಪದ್ಧತಿಯೇ ಬದಲಾಗುತ್ತದೆ.
- ಕೆಲವರು ವಾರದ ಎಲ್ಲ ದಿನಗಳಲ್ಲಿ ಒಂದು ಸಾಮಾನ್ಯ ಚಟುವಟಿಕೆಯಲ್ಲಿರುತ್ತಾರೆ. ಆದರೆ, ಭಾನುವಾರ ಒಮ್ಮಿಂದೊಮ್ಮೆಗೇ ವಿಪರೀತ ಚಟುವಟಿಕೆಗೆ ಇಳಿದುಬಿಡುವುದರಿಂದ ಒತ್ತಡ ಬೀಳುತ್ತದೆ. ಇದು ಕೂಡಾ ಕಾರಣ ಆಗಿರಬಹುದು.
- ಭಾನುವಾರದ ವಿರಾಮ ಮತ್ತು ಸೋಮವಾರದ ವಿಪರೀತ ಒತ್ತಡಕ್ಕೆ ಒಳಗಾಗುವ ಸನ್ನಿವೇಶಗಳು ಅವರ ಹೃದಯದಲ್ಲಿ ಒತ್ತಡ ಸೃಷ್ಟಿಸಬಹುದು.
- ವಾರದ ಆರಂಭ ದಿನದ ಒತ್ತಡಗಳನ್ನು ನಿಭಾಯಿಸುವುದೇ ಕೆಲವರಿಗೆ ಕಷ್ಟವಾಗುತ್ತದೆ. ಇದು ಹೃದಯದ ಮೇಲಿನ ಒತ್ತಡ ವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Heart Attack : ಸ್ಪಂದನಾ ಅವರನ್ನು ಬಲಿ ಪಡೆದ ಹೃದಯಾಘಾತ; ಏನಿದು Sudden Cardiac Death?