ಬೆಂಗಳೂರು: ಮಂಡ್ಯ ಜಿಲ್ಲೆಯಾದ್ಯಂತ ಭಾರಿ ಮಳೆ (Heavy Rain) ಸುರಿಯುತ್ತಿರುವುದರಿಂದ ಸೇತುವೆಗಳು ಮುಳುಗಿದ್ದು, ಬುಧವಾರ ಬೆಳಿಗ್ಗೆಯಿಂದ ಬೆಂಗಳೂರು – ಮೈಸೂರು ನಡುವಿನ ಸುಮಾರು 10 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಬಹುತೇಕ ಮೆಮೂ ಹಾಗೂ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತಗೊಂಡಿದೆ. ಎಕ್ಸ್ಪ್ರೆಸ್ ರೈಲುಗಳ ಸಂಚಾರದ ಸಮಯದಲ್ಲಿಯೂ ಭಾರಿ ವ್ಯತ್ಯಾಸಗಳಾಗಿ, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮದ್ದೂರು ಹಾಗೂ ಹನಕೆರೆ ಬಳಿಯ 627 ನೇ ಬ್ರಿಡ್ಜ್ ನಲ್ಲಿ ಡೆಂಜರ್ ಜೋನ್ ನಲ್ಲಿ ನೀರು ಹರಿಯುತ್ತಿದೆ. ಇದೇ ಕಾರಣದಿಂದ ರೈಲು ಸಂಚಾರ ವ್ಯತ್ಯಯಗೊಂಡಿದೆ. ಗುರುವಾರದಿಂದ ಪರಿಸ್ಥಿತಿ ನೋಡಿಕೊಂಡು ರೈಲು ಸಂಚಾರ ಆರಂಭಿಸಲಾಗುವುದು ಎಂದು ರೈಲ್ವೇ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಮಂಡ್ಯ-ಮದ್ದೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಮಂಗಳವಾರದಿಂದಲೇ ಬಂದ್ ಆಗಿದೆ. ಹೊಳೆಯಲ್ಲಿ ನೀರಿನ ಮಟ್ಟ ಕಡಿಮೆಯಾಗದೇ ಇರುವುದರಿಂದ ಗುರುವಾರ ಕೂಡ ರಸ್ತೆ ಸಂಚಾರ ಆರಂಭಗೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಈ ಹೆದ್ದಾರಿಯಲ್ಲಿ ಓಡಾಡಬೇಕಾಗಿದ್ದ ವಾಹನಗಳು ಬದಲಿ ಮಾರ್ಗದ ಮೂಲಕ ಸದ್ಯ ಸಂಚರಿಸುತ್ತಿವೆ.
ಇದನ್ನೂ ಓದಿ | Heavy Rain | ಮಳೆಯಿಂದ ಮುಂದುವರಿದ ಸಾವು-ನೋವು; ಪ್ರತ್ಯೇಕ ಕಡೆ ನಾಲ್ವರ ಸಾವು