ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಳೆಯಿಂದ (Heavy Rain) ನಾನಾ ಅವಾಂತರ ಸೃಷ್ಟಿಯಾಗಿದ್ದು, ಮಳೆಗೆ ರಸ್ತೆ ಕಾಣದೆ ಆಲ್ಟೊ ಕಾರೊಂದು ಆಯತಪ್ಪಿ ಮಗುಚಿ ಬಿದ್ದಿದೆ. ಧರ್ಮಸ್ಥಳದ ಪ್ರವಾಸ ಮುಗಿಸಿ ಬರುವಾಗ ಮೂಡಿಗೆರೆ ತಾಲೂಕಿನ ಕಬ್ಬಿಣ ಸೇತುವೆ ಗ್ರಾಮದ ಬಳಿ ಎದುರುಗಡೆಯಿಂದ ಬಂದ ವಾಹನವನ್ನು ತಪ್ಪಿಸಲು ಹೋಗಿ, ಮಳೆಯಿಂದ ರಸ್ತೆ ಕಾಣದೆ ಕಾರು ಮಗುಚಿ ಬಿದ್ದಿದೆ.
ಚಿಕ್ಕಮಗಳೂರಿನವರೇ ಆದ ಯಾದವ್ ಎಂಬುವರಿಗೆ ಸೇರಿದ ಕಾರು ಪಲ್ಟಿಯಾಗಿದ್ದು, ಕೂಡಲೇ ಸ್ಥಳೀಯರೆಲ್ಲ ಸೇರಿ ಕಾರನ್ನು ಮೇಲಕ್ಕೆತ್ತಿ ಕಾರಿನೊಳಗೆ ಇದ್ದವರ ರಕ್ಷಣೆ ಮಾಡಲಾಗಿದೆ. ಕಾರಿನಲ್ಲಿ ಇದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ | Heavy Rain | ಉಕ್ಕಿ ಹರಿಯುತ್ತಿರುವ ಕಾವೇರಿಯಿಂದ ಮುತ್ತತ್ತಿಗೆ ಜಲದಿಗ್ಭಂಧನ!