Site icon Vistara News

Heavy Rain | ಉಕ್ಕಿ ಹರಿಯುತ್ತಿರುವ ಕಾವೇರಿಯಿಂದ ಮುತ್ತತ್ತಿಗೆ ಜಲದಿಗ್ಭಂಧನ!

heavy rain

ಮಂಡ್ಯ: ಮಳೆ ನಿಂತರೂ (Heavy Rain) ಮಳೆಯಿಂದ ಆಗುತ್ತಿರುವ ಸಮಸ್ಯೆ ಮಾತ್ರ ನಿಲ್ಲುತ್ತಿಲ್ಲ. ಇಲ್ಲಿನ ಮಳವಳ್ಳಿ ತಾಲೂಕಿನಲ್ಲಿರುವ ಮುತ್ತತ್ತಿಗೆ ಉಕ್ಕಿ ಹರಿಯುತ್ತಿರುವ ಕಾವೇರಿ ಜಲದಿಗ್ಭಂಧನ ಹಾಕಿದ್ದಾಳೆ.

ಕೆಆರ್‌ಎಸ್ ಮತ್ತು ಕಬಿನಿಯಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಪರಿಣಾಮ ಮುತ್ತತ್ತಿಯ ಮುತ್ತೆತ್ತರಾಯಸ್ವಾಮಿ ದೇಗುಲ ಮತ್ತು ನದಿ ಪಾತ್ರದ ಗ್ರಾಮಕ್ಕೆ ನೀರು ನುಗ್ಗಿದೆ. ಪ್ರವಾಹದಿಂದ ಭಕ್ತರು ಮತ್ತು ಪ್ರವಾಸಿಗರು ಪರದಾಡುತ್ತಿದ್ದು, ಹಲಗೂರಿನಿಂದ ಸಂಪರ್ಕ ಕಲ್ಪಿಸುವ ಕೆಸರಕ್ಕಿ ಹಳ್ಳದಲ್ಲೂ ನೀರಿನ ಹರಿವು ಹೆಚ್ಚಾಗಿ, ಸೇತುವೆ ಮೇಲೆ ನೀರು ನಿಂತಿದೆ.

ಸೇತುವೆ ಮೇಲೆ ದ್ವಿಚಕ್ರ ಮತ್ತು ಲಘು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸೇತುವೆಯನ್ನು ಎತ್ತರಿಸದೆ, ಕೆಳ ಮಟ್ಟದಲ್ಲಿ ನಿರ್ಮಾಣ ಮಾಡಿದ್ದರಿಂದ ಈ ಅವಾಂತರಕ್ಕೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ.

ಶ್ರೀರಂಗಪಟ್ಟಣ ಕೋಟೆಗೆ ಜಲಕಂಟಕ

ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಗೂ ಜಲಕಂಟಕ ಇದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕೋಟೆ ಕುಸಿಯುವ ಭೀತಿ ಇದೆ. ನೂರಾರು ವರ್ಷ ಹಳೆಯದಾದ ಶ್ರೀರಂಗಪಟ್ಟಣದ ಕೋಟೆಯವರೆಗೂ ನದಿ ನೀರು ನುಗ್ಗಿದೆ.

ಸಮರ್ಪಕ ನಿರ್ವಹಣೆ ಇಲ್ಲದೆ ಗಿಡಗಂಟಿ ಬೆಳೆದು ಶ್ರೀರಂಗಪಟ್ಟಣ ಕೋಟೆ ಶಿಥಿಲವಾಗಿದೆ. ಈಗ ನೀರಿನ ರಭಸದಿಂದಾಗಿ ಮತ್ತಷ್ಟು ಶಿಥಿಲಗೊಳ್ಳುವ ಆತಂಕ ಇದ್ದು, ಕೋಟೆಗೆ ಹೊಂದಿಕೊಂಡಂತಿರುವ ಸ್ಮಾರಕಗಳಿಗೂ ನೀರು ತುಂಬಿದೆ. ಕೋಟೆಗೆ ಹೊಂದಿಕೊಂಡಂತಿರುವ ಕೋಟೆ ಗಣಪತಿ ದೇಗುಲ ಸಂಪೂರ್ಣ ಜಲಾವೃತಗೊಂಡಿದೆ.

ಇದನ್ನೂ ಓದಿ | Shivamogga Rain | ಮಳೆಗೆ ಮನೆಯ ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯ

 
 
Exit mobile version