ಬೆಂಗಳೂರು: ನಗರದ ಮಹಾಲಕ್ಷ್ಮಿಪುರದ ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ ವತಿಯಿಂದ ವಿಶ್ವ ಕಾಮಾಲೆ ದಿನದ (Hepatitis Day)ಅಂಗವಾಗಿ ಹೆಪಟೈಟಿಸ್ ಬಿ, ಸಿ ಜಾಗೃತ್ತಿ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಇದೇ ವೇಳೆ ಕಾಮಾಲೆ ಬಿ ಮತ್ತು ಸಿ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ. ಲಯನ್ಸ್ ಇಂಟರ್ನ್ಯಾಷನಲ್, ಗೌತಮ್ ನರ್ಸಿಂಗ್ ಕಾಲೇಜು ಹಾಗೂ ಸರ್ವೋದಯ ಕಾಲೇಜ್ ಆಫ್ ನರ್ಸಿಂಗ್ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಲಿದೆ.
ಜುಲೈ 28ರಂದು ವಿಶ್ವಾದ್ಯಂತ ಕಾಮಾಲೆ ದಿನವನ್ನು ಆಚರಿಸಲಾಗುತ್ತದೆ. ಹೆಪಟೈಟಿಸ್ಗೆ ಸಂಬಂಧಪಟ್ಟಂತೆ ಜನಜಾಗೃತ್ತಿ ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ. ಅದೇ ರೀತಿ ಬೆಂಗಳೂರಿನ ಮಹಾಲಕ್ಷ್ಮಿಪುರದ ಗ್ಯಾಸ್ಟ್ರೊ ಸೆಂಟರ್ ಕೂಡ ಜಾಗೃತಿ ಜಾಥಾ ಆಯೋಜಿಸಿದೆ. ಕಾಲ್ನಡಿಗೆ ಜಾಥಾ ಬೆಳಗ್ಗೆ 7 ಗಂಟೆಗೆ ಆರಂಭಗೊಂಡು 8 ಗಂಟೆಯ ತನಕ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಪಾಸಣಾ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಇದನ್ನೂ ಓದಿ : Monsoon Health Tips: ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ದೂರವಿರಲು ಸುಲಭ ಸೂತ್ರಗಳು!
ಕರ್ನಾಟಕ ಸರಕಾರದ ವೈದ್ಯಕೀಯ ಸಚಿವರಾಗಿರುವ ಶರಣಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಮಹಾಲಕ್ಷ್ಮಿಪುರ ಶಾಸಕ ಗೋಪಾಲಯ್ಯ, ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ, ಲಯನ್ ಸುರೇಶ್ ರಾಮು, ಲಯನ್ ಮೋಹನ್ ಕುಮಾರ್ ಎನ್, ಲಯನ್ ಜಿ ಮೋಹನ್ ಅವರು ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ನ ನಿರ್ದೇಶಕ ಡಾ. ಉಮೇಶ್ ಜಾಲಿಹಾಳ್ ಹಾಗೂ ಡಾ ಇರ್ಷದ್ ಅಲಿ ಎಚ್ ಅವರು ಜಾಗೃತಿ ಭಾಷಣ ಮಾಡಲಿದ್ದಾರೆ. ಮಾಹಿತಿಗಾಗಿ 080- 23493080 ಸಂಖ್ಯೆಗೆ ಕರೆ ಮಾಡಬಹುದು.