Site icon Vistara News

VISTARA TOP 10 NEWS: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲ, ರಾಜ್ಯ ಸರ್ಕಾರದಲ್ಲಿ ಮತ್ತೆ ಅಸಮಾಧಾನ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Vistara To10 news

1. ತೆಲಂಗಾಣ, ಛತ್ತೀಸ್‌ಗಢ ‘ಕೈ’ವಶ, ರಾಜಸ್ಥಾನಕ್ಕೆ ಬಿಜೆಪಿ, ಎಂಪಿಯಲ್ಲಿ ಸಮಬಲ!
ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ (Lok Sabha Election) ಮುಂಚೆ ನಡೆಯುತ್ತಿರುವ ಐದು ರಾಜ್ಯಗಳ ಎಲೆಕ್ಷನ್ ಭಾರೀ ಕುತೂಹಲ ಮೂಡಿಸಿವೆ(Assembly Election 2023). ಈ ಕಾತರವನ್ನು ಮತಗಟ್ಟೆ ಸಮೀಕ್ಷೆಗಳು ಕೊಂಚ ಮಟ್ಟಿಗೆ ತಗ್ಗಿಸಿದ್ದು(Exit Polls Result 2023), ಮಧ್ಯ ಪ್ರದೇಶದಲ್ಲಿ (Madhya Pradesh) ಬಿಜೆಪಿ ಮತ್ತು ಕಾಂಗ್ರೆಸ್ (Congress Party) ಮಧ್ಯೆ ಫೋಟೋ ಫಿನಿಸ್ ರಿಸಲ್ಡ್ ನಿರೀಕ್ಷಿಸಲಾಗುತ್ತಿದೆ. ಛತ್ತೀಸ್‌ಗಢದಲ್ಲಿ (Chhattisgarh) ಅಧಿಕಾರ ಉಳಿಸಿಕೊಳ್ಳುವ ಕಾಂಗ್ರೆಸ್, ಹೆಚ್ಚುವರಿಯಾಗಿ ತೆಲಂಗಾಣದಲ್ಲಿ (Telangana) ಪವರ್ ಪಡೆಯಲಿದೆ ಎಂಬುದು ಸಮೀಕ್ಷೆಗಳ ಸಾರಾಂಶ. ಇನ್ನು ರಾಜಸ್ಥಾನದಲ್ಲಿ (Rajasthan) ಇತಿಹಾಸ ಮರುಕಳಿಸಲಿದ್ದು, ಈ ಬಾರಿ ಬಿಜೆಪಿಗೆ (BJP Party) ಆಶೀರ್ವಾದ ಮಾಡಿದ್ದಾರೆ. ಹಾಗೆಯೇ, ಈಶಾನ್ಯ ರಾಜ್ಯದ ಮಿಜೋರಾಮ್‌ನಲ್ಲಿ (Mizoram) ಆಡಿತಾರೂಢ ಎಂಎನ್ಎಫ್‌ ಕಡೆಗೆ ಮತದಾರರ ಒಲವು ಕಂಡು ಬಂದಿದ್ದು, ಅತಂತ್ರ ವಿಧಾನಸಭೆಯನ್ನು ಅಲ್ಲಗಳೆಯುಂತಿಲ್ಲ ಎನ್ನುತ್ತಿವೆ ಎಕ್ಸಿಟ್ ಪೋಲ್‌ಗಳು. ಡಿಸೆಂಬರ್ 3ರಂದು ರಿಸಲ್ಟ್ ಪ್ರಕಟವಾಗಲಿದ್ದು, ನಿಜವಾದ ಫಲಿತಾಂಶ ಗೊತ್ತಾಗಲಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

2. ನಿಗಮ-ಮಂಡಳಿ ನೇಮಕದಲ್ಲಿ ಸಿಎಂ, ಡಿಸಿಎಂ ಏಕಪಕ್ಷೀಯ ನಿರ್ಧಾರ; ಜಾರಕಿಹೊಳಿ ಬೇಸರ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ನಿಗಮ-ಮಂಡಳಿ ನೇಮಕ (Appointment of Corporation Board) ವಿಚಾರ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ ಬರುತ್ತಿದ್ದಾರೆ. ಈಗಾಗಲೇ ತಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ನೇರವಾಗಿ ಬೇಸರವನ್ನು ಹೇಳಿಕೊಂಡಿದ್ದರು. ಈಗ ಅದನ್ನು ಪುಷ್ಟೀಕರಿಸಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿದ್ದು, ಪರಮೇಶ್ವರ್‌ ಅವರ ಅಭಿಪ್ರಾಯವನ್ನು ಕೇಳಬೇಕಿತ್ತು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ಏಕಪಕ್ಷೀಯ ನಿರ್ಧಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

3. ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ (Congress Government) ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ (Congress Guarantee) ಬಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Infosys Narayana Murthy) ಅವರಿಂದ ಆಕ್ಷೇಪ ಕೇಳಿಬಂದಿದೆ. ಯಾವುದನ್ನೂ ಉಚಿತವಾಗಿ ನೀಡಬಾರದು. ನಾನು ಹೆಚ್ಚು ತೆರಿಗೆ ಕಟ್ಟುತ್ತೇನೆ ಎಂಬ ಕಾರಣದಿಂದ ಇದನ್ನು ಹೇಳುತ್ತಿಲ್ಲ. ಯಾವ ಉತ್ತಮ ಸೌಲಭ್ಯ ಕೊಟ್ಟರೆ ಅದು ಹೇಗೆ ಸಮಾಜಕ್ಕೆ ವಾಪಸ್ ಬರುತ್ತದೆ ಅನ್ನೋದನ್ನು ನೋಡಬೇಕು ಎಂದು ಸಲಹೆ ನೀಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

4. INDIA GDP : 2ನೇ ತ್ರೈಮಾಸಿಕದ GDP ಶೇ. 7.6 ; ಕಳೆದ ಬಾರಿಗಿಂತ ಹೆಚ್ಚಾ, ಕಡಿಮೆನಾ?
ನವದೆಹಲಿ: 2023-24ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ (2023-24 Financial Year) ಭಾರತದ ಒಟ್ಟು ದೇಶೀಯ ಉತ್ಪನ್ನ (INDIA GDP Growth) ಅಂಕಿ ಅಂಶಗಳು ಘೋಷಣೆಯಾಗಿವೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistical Office – NSO) ಗುರುವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಎರಡನೇ ತ್ರೈಮಾಸಿಕದ ಜಿಡಿಪಿ ಶೇ. 7.6ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ಜುಲೈನಿಂದ ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗಿನ ಚಿತ್ರಣ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ. 6.2ರಷ್ಟಿತ್ತು. ಇನ್ನೊಂದು ಮಹತ್ವದ ಸಂಗತಿ ಎಂದರೆ, ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣ ಶೇ. 7.8ರಷ್ಟಿತ್ತು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

5. ಪನ್ನುನ್‌ ಹತ್ಯೆಗೆ ಸ್ಕೆಚ್‌; ಅಮೆರಿಕ ಆರೋಪಕ್ಕೆ ಭಾರತ ಪ್ರತಿಕ್ರಿಯೆ, ಉನ್ನತ ಸಮಿತಿ ರಚನೆ
ನವದೆಹಲಿ: ಖಲಿಸ್ತಾನಿ ಉಗ್ರ, ಕೆನಡಾ, ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳಲ್ಲಿ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್‌ ಸಿಂಗ್‌ ಪನ್ನುನ್‌ನನ್ನು (Gurpatwant Singh Pannun) ಅಮೆರಿಕದಲ್ಲಿಯೇ ಹತ್ಯೆ ಮಾಡಲು ಭಾರತದ ಪ್ರಜೆ ನಿಖಿಲ್‌ ಗುಪ್ತಾ (Nikhil Gupta) ಎಂಬುವರು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದ ಬೆನ್ನಲ್ಲೇ ಭಾರತ ಪ್ರತಿಕ್ರಿಯೆ ನೀಡಿದೆ. “ಇದೊಂದು ಕಳವಳಕಾರಿ ವಿಷಯವಾಗಿದೆ. ಅಲ್ಲದೆ, ಭಾರತದ ನೀತಿಗೆ ಇದು ವಿರುದ್ಧವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ (Arindam Bagchi) ಹೇಳಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

6. Ind vs Aus : ತಪ್ಪುಗಳನ್ನು ತಿದ್ದಿಕೊಂಡು ಸರಣಿ ಗೆಲ್ಲುವುದೇ ಭಾರತ?
ರಾಯ್ಪುರ: ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಡಿಸೆಂಬರ್ 1) ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ 4ನೇ ಟಿ 20 ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗ ಸವಾಲು ಎದುರಿಸಲಿದೆ. ಹಿಂದಿನ ಪಂದ್ಯದಲ್ಲಿ 223 ರನ್​ಗಳ ಗುರಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾದ ನಂತರ ಭಾರತ ಬೌಲರ್​ಗಳ ಬಗ್ಗೆ ಆತಂಕ ಶುರುವಾಗಿದೆ. ಅನಗತ್ಯ ರನ್ ಸೋರಿಕೆ ಸೇರಿದಂತೆ ಹಿಡಿತವಿಲ್ಲದ ಬೌಲಿಂಗ್​ನಲ್ಲಿ ಭಾರತ ಮುಂದಿನ ಪಂದ್ಯಗಳನ್ನು ಹೇಗೆ ನಿಭಾಯಿಸಲಿದೆ ಎಂಬುದು ಚರ್ಚೆಯ ವಿಷಯವಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

7. Rules Change: ನಾಳೆಯಿಂದ ನಿಮ್ಮ ಜಿಮೇಲ್‌ ಅಕೌಂಟ್ ರದ್ದಾಗಬಹುದು ಎಚ್ಚರ!; ಮತ್ತೆ ಯಾವ ಸೇವೆಗಳಲ್ಲಿ ಬದಲಾವಣೆ?
ನವದೆಹಲಿ: ವರ್ಷದ ಕೊನೆಯ ಹಂತದಲ್ಲಿ ನಿಂತಿದ್ದೇವೆ. ನಾಳೆಯಿಂದ ಡಿಸೆಂಬರ್‌ ಆರಂಭ. ದೇಶಾದ್ಯಂತದ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ವಿವಿಧ ಬದಲಾವಣೆಗಳು ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಆರಂಭದಲ್ಲಿ ಜಾರಿಗೆ ಬರಲಿವೆ. ಬಳಸದ ಜಿಮೇಲ್‌ ಖಾತೆಗಳ ಡಿಲೀಟ್‌ ಆಗುವುದರಿಂದ ಹಿಡಿದು ಮಲೇಷ್ಯಾಕ್ಕೆ ವೀಸಾರಹಿತ ಪ್ರಯಾಣದವರೆಗೆ ವಿವಿಧ ಬದಲಾವಣೆಗಳಿಗೆ ಡಿಸೆಂಬರ್‌ ಸಾಕ್ಷಿಯಾಗಲಿದೆ. ಹಾಗಾದರೆ ಡಿಸೆಂಬರ್‌ನಲ್ಲಿ ಜಾರಿಗೆ ಬರಲಿರುವ ದೊಡ್ಡ ಬದಲಾವಣೆಗಳು ಯಾವುವು ಎನ್ನುವ ವಿವರ ಇಲ್ಲಿದೆ (Rules Change) ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

8. Tata Tech: ‘ಟಾಟಾ’ ಐಪಿಒ ಖರೀದಿಸಿದವರಿಗೆ ಧಮಾಕಾ; ಷೇರುಗಳ ಮೌಲ್ಯ ಡಬಲ್!
ಮುಂಬೈ: ಟಾಟಾ ಗ್ರೂಪ್‌ನ (Tata Group) ಟಾಟಾ ಟೆಕ್ನಾಲಜೀಸ್‌ ಕಂಪನಿಯು ಷೇರು ಪೇಟೆ ಪ್ರವೇಶಿಸಿದ ಮೊದಲ ದಿನವೇ ಹೂಡಿಕೆದಾರರ ಖುಷಿಯನ್ನು ಹೆಚ್ಚಿಸಿದೆ. ಟಾಟಾ ಟೆಕ್‌ (Tata Tech) ಆರಂಭಿಕ ಸಾರ್ವಜನಿಕ ಕೊಡುಗೆ (IPO) ಆರಂಭಿಸಿದ ಮೊದಲ ದಿನವೇ ಹೂಡಿಕೆದಾರರ ಷೇರುಗಳ ಮೌಲ್ಯವು ಖರೀದಿಗಿಂತ (Premium) ಎರಡು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ, ಟಾಟಾ ಐಪಿಒ (Tata IPO) ಆರಂಭಿಸಿದ ಕೂಡಲೇ ಷೇರುಗಳನ್ನು ಖರೀದಿಸಿದವರಿಗೆ ಭರ್ಜರಿ ಲಾಭವಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

9. IMDB ಬಿಡುಗಡೆ ಮಾಡಿದ 2023ರ ಅತ್ಯಂತ ಜನಪ್ರಿಯ ಚಿತ್ರಗಳು, ವೆಬ್‌ಸಿರೀಸ್‌ಗಳಿವು!
ಬೆಂಗಳೂರು: ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ, (www.imdb.com)ಇಂದು 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾಗಳು ಹಾಗೂ ಸ್ಟ್ರೀಮಿಂಗ್‌ ವೇದಿಕೆಗಳಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾಗಳು ಮತ್ತು ಅತ್ಯಂತ ಜನಪ್ರಿಯ 10 ವೆಬ್‌ ಸಿರೀಸ್‌ಗಳನ್ನು ಘೋಷಿಸಿದೆ. ಐಎಂಡಿಬಿಯ ವರ್ಷಾಂತ್ಯದ ಈ ಪಟ್ಟಿಯನ್ನು ತಿಂಗಳಿಗೆ 200 ದಶಲಕ್ಷಕ್ಕೂ ಹೆಚ್ಚು ಬಾರಿ ಐಎಂಡಿಬಿ ತಾಣಕ್ಕೆ ಭೇಟಿ ನೀಡುವ ಬಳಕೆದಾರರ ಪೇಜ್‌ ವೀಕ್ಷಣೆಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

10. ಶಾಲೆಗೆ ಹೊರಟಿದ್ದ ಟೀಚರ್‌ ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್‌
ಹಾಸನ: ಶಾಲೆಗೆ ಹೊರಟಿದ್ದ ಶಿಕ್ಷಕಿಯೊಬ್ಬರನ್ನು ಸಿನಿಮಾ ಸ್ಟೈಲಿನಲ್ಲಿ ಅಪಹರಿಸಿದ (School teacher Kidnap) ಘಟನೆ ಹಾಸನದ (Hasana News) ಹೊರವಲಯದಲ್ಲಿ ನಡೆದಿದೆ. ಮದುವೆಗೆ ಒಪ್ಪದ ಕಾರಣಕ್ಕಾಗಿ (kidnapped for not obliging Marriage) ದ್ವೇಷದಿಂದ ಯುವತಿಯನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ:

Exit mobile version