ಪನ್ನುನ್‌ ಹತ್ಯೆಗೆ ಸ್ಕೆಚ್‌; ಅಮೆರಿಕ ಆರೋಪಕ್ಕೆ ಭಾರತ ಪ್ರತಿಕ್ರಿಯೆ, ಉನ್ನತ ಸಮಿತಿ ರಚನೆ - Vistara News

ದೇಶ

ಪನ್ನುನ್‌ ಹತ್ಯೆಗೆ ಸ್ಕೆಚ್‌; ಅಮೆರಿಕ ಆರೋಪಕ್ಕೆ ಭಾರತ ಪ್ರತಿಕ್ರಿಯೆ, ಉನ್ನತ ಸಮಿತಿ ರಚನೆ

ಅಮೆರಿಕ ನೆಲದಲ್ಲಿಯೇ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಭಾರತದ ಪ್ರಜೆ ಸಂಚು ರೂಪಿಸಿದ್ದಾನೆ ಎಂದು ಅಮೆರಿಕ ಹೇಳಿಕೆ ಬಿಡುಗಡೆ ಮಾಡಿದೆ. ಇದಕ್ಕೆ ಭಾರತವು ಪ್ರತಿಕ್ರಿಯೆ ನೀಡಿದ್ದು, ತನಿಖೆಗೆ ಉನ್ನತ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದೆ.

VISTARANEWS.COM


on

Khalistani Separatist Gurpatwant Singh Pannun
ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್.‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಖಲಿಸ್ತಾನಿ ಉಗ್ರ, ಕೆನಡಾ, ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳಲ್ಲಿ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್‌ ಸಿಂಗ್‌ ಪನ್ನುನ್‌ನನ್ನು (Gurpatwant Singh Pannun) ಅಮೆರಿಕದಲ್ಲಿಯೇ ಹತ್ಯೆ ಮಾಡಲು ಭಾರತದ ಪ್ರಜೆ ನಿಖಿಲ್‌ ಗುಪ್ತಾ (Nikhil Gupta) ಎಂಬುವರು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದ ಬೆನ್ನಲ್ಲೇ ಭಾರತ ಪ್ರತಿಕ್ರಿಯೆ ನೀಡಿದೆ. “ಇದೊಂದು ಕಳವಳಕಾರಿ ವಿಷಯವಾಗಿದೆ. ಅಲ್ಲದೆ, ಭಾರತದ ನೀತಿಗೆ ಇದು ವಿರುದ್ಧವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ (Arindam Bagchi) ಹೇಳಿದ್ದಾರೆ.

“ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಭಾರತದ ಪ್ರಜೆ ಸಂಚು ರೂಪಿಸಿದ್ದಾರೆ ಎಂಬ ವಿಷಯವಳು ಆತಂಕ ಹುಟ್ಟಿಸುವಂತಿದೆ. ಇಂತಹ ಪ್ರಕರಣಗಳು ಭಾರತದ ನೀತಿಗೆ ವಿರುದ್ಧವಾಗಿವೆ. ಅಲ್ಲದೆ, ಭದ್ರತೆ ವಿಷಯದಲ್ಲಿ ಭಾರತವು ಅಮೆರಿಕಕ್ಕೆ ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ. ಸಹಕಾರ ತತ್ವದಲ್ಲಿ ಅಮೆರಿಕವು ಭಾರತಕ್ಕೆ ಅಪರಾಧಿಗಳು, ಉಗ್ರರು, ಶಾರ್ಪ್‌ಶೂಟರ್‌ಗಳ ಕುರಿತು ಮಾಹಿತಿ ನೀಡಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಲ್ಲದೆ, ಸಮಗ್ರ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ್ದೇವೆ” ಎಂದು ಸುದ್ದಿಗೋಷ್ಠಿ ಮೂಲಕ ಅರಿಂದಮ್‌ ಬಾಗ್ಚಿ ಸ್ಪಷ್ಟನೆ ನೀಡಿದ್ದಾರೆ.

“ಭದ್ರತೆ ಹಾಗೂ ಸ್ಥಿರತೆ ವಿಚಾರದಲ್ಲಿ ಅಮೆರಿಕಕ್ಕೆ ಭಾರತವು ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ. ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿಯ ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದು ಭದ್ರತೆಗೆ ಸಂಬಂಧಿಸಿದ ವಿಚಾರವಾದ ಕಾರಣ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಆಗುವುದಿಲ್ಲ” ಎಂದು ತಿಳಿಸಿದ್ದಾರೆ.

ಭಾರತ ವಿರೋಧಿ ಹೇಳಿಕೆ, ಬೆದರಿಕೆಗಳಿಂದ ಸುದ್ದಿಯಾಗುತ್ತಿರುವ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ನನ್ನು ಅಮೆರಿಕದ ನೆಲದಲ್ಲಿಯೇ ಹತ್ಯೆ ಮಾಡಲು ನಿಖಿಲ್‌ ಗುಪ್ತಾ ಎಂಬ ಭಾರತದ ಪ್ರಜೆಯು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ. ಜೆಕ್ ಅಧಿಕಾರಿಗಳು ಕಳೆದ ಜೂನ್‌ನಲ್ಲಿ ನಿಖಿಲ್ ಗುಪ್ತಾ ಎಂಬಾತನನ್ನು ಬಂಧಿಸಿದ್ದಾರೆ. ಇದರ ಕುರಿತು ಮ್ಯಾನ್‌ಹಟನ್‌ ಉನ್ನತ ಫೆಡರಲ್ ಪ್ರಾಸಿಕ್ಯೂಟರ್ ಡಾಮಿಯನ್ ವಿಲಿಯಮ್ಸ್ ಅವರು ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಗುರುಪತ್ವಂತ್ ಪನ್ನುನ್ ಕೊಲೆಗೆ ಸ್ಕೆಚ್, ಭಾರತದ ಪ್ರಜೆ ವಿರುದ್ಧ ಅಮೆರಿಕ ಆರೋಪ

ಅಮೆರಿಕ ಹೇಳಿಕೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಅಮೆರಿಕಕ್ಕೆ ಸ್ಪಷ್ಟನೆ ನೀಡಿದೆ. ಇನ್ನು, ನಿಖಿಲ್‌ ಗುಪ್ತಾ ಕುರಿತು ಅಮೆರಿಕ ಹೇಳಿಕೆ ಬಿಡುಗಡೆ ಮಾಡುತ್ತಲೇ, “ಇದನ್ನು ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು” ಎಂದು ಕೆನಡಾ ಸರ್ಕಾರ ಆಗ್ರಹಿಸಿದೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಇದಕ್ಕೂ ಮೊದಲು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Rameshwaram Cafe: ಗ್ರಾಹಕರ ಕ್ಷಮೆ ಕೋರಿದರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮೇಶ್ವರಂ ಕೆಫೆ ಮಾಲೀಕ; ಕಾರಣ ಇದು

Rameshwaram Cafe: ವಾರದ ಹಿಂದೆ ಹೈದರಾಬಾದ್‌ನಲ್ಲಿರುವ ರಾಮೇಶ್ವರಂ ಕೆಫೆ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅವಧಿ ಮೀರಿದ 100 ಕೆ.ಜಿ. ಉದ್ದು, 10 ಕೆ.ಜಿ. ಮೊಸರು ಮತ್ತು 8 ಲೀಟರ್ ಹಾಲು ಪತ್ತೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮಾಲೀಕ ರಾಘವೇಂದ್ರ ರಾವ್‌ ಗ್ರಾಹಕರಲ್ಲಿ ಕ್ಷಮೆ ಕೋರಿ ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊ ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಅದಕ್ಕೇನು ಕಾರಣ? ಇಲ್ಲಿದೆ ಉತ್ತರ.

VISTARANEWS.COM


on

Rameshwaram Cafe
Koo

ಹೈದರಾಬಾದ್‌: ಹೈಟೆಕ್​ ಮಾದರಿಯಲ್ಲಿ ಆಹಾರ ತಯಾರಿಸುವ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ (Rameshwaram Cafe) ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ತಿಂಗಳುಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಗೊಂಡ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು. ಬೆಂಗಳೂರಿನ ವೈಟ್​ಫೀಲ್ಡ್​ ಶಾಖೆಯ ಮೇಲೆ ನಡೆದ ಬಾಂಬ್​ ದಾಳಿಯ ತನಿಖೆ ಈಗಲೂ ನಡೆಯುತ್ತಿದೆ. ಈ ಮಧ್ಯೆ ವಾರದ ಹಿಂದೆ ಹೈದರಾಬಾದ್‌ನಲ್ಲಿರುವ ರಾಮೇಶ್ವರಂ ಕೆಫೆ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವಧಿ ಮೀರಿದ 100 ಕೆ.ಜಿ. ಉದ್ದು, 10 ಕೆ.ಜಿ. ಮೊಸರು ಮತ್ತು 8 ಲೀಟರ್ ಹಾಲು ಪತ್ತೆಯಾಗಿತ್ತು. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ಕೆಫೆ ಮಾಲೀಕ ರಾಘವೇಂದ್ರ ರಾವ್‌ ಗ್ರಾಹಕರಲ್ಲಿ ಕ್ಷಮೆ ಕೋರಿ ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅದಕ್ಕೇನು ಕಾರಣ? ಇಲ್ಲಿದೆ ವಿವರ (Viral Video).

ರಾಘವೇಂದ್ರ ರಾವ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡ ಅವರು ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ʼʼನಾವು ಇಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನಷ್ಟೇ ಗ್ರಾಹಕರಿಗೆ ನೀಡುತ್ತಿದ್ದೇವೆ. ಆಹಾರ ತಯಾರಿಗೆ ಉತ್ಕೃಷ್ಟ ವಸ್ತುಗಳನ್ನು ಬಳಸಲಾಗುತ್ತಿದೆ. ಹೌದು, ನಮ್ಮಿಂದ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳಾಗಿವೆ. ಅದಕ್ಕಾಗಿ ಕ್ಷಮೆ ಕೋರುತ್ತಿದ್ದೇನೆ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಹಾದಿಯಲ್ಲೇ ನಾವೂ ಸಾಗುತ್ತೇವೆ ಎಂದು ಎಲ್ಲ ಗ್ರಾಹಕರಿಗೆ ಈ ಮೂಲಕ ಭರವಸೆ ನೀಡುತ್ತಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ.

ಮುಂದುವರಿದು, “ನೀವು ಪರೀಕ್ಷೆಗಾಗಿ ನಮ್ಮಲ್ಲಿನ ಯಾವುದೇ ಬೇಳೆಕಾಳುಗಳು ಮತ್ತು ಮಸಾಲೆಗಳನ್ನು ತೆಗೆದುಕೊಳ್ಳಬಹುದು. ಉತ್ತಮ ಗುಣಮಟ್ಟದ್ದನ್ನೇ ಬಳಸುತ್ತಿದ್ದೇವೆ. ನಾವು ಬಳಸುವ ತರಕಾರಿ ಕೂಡ ಪ್ರೀಮಿಯಂ ಗುಣಮಟ್ಟದ್ದಾಗಿವೆ. ನಾವು ಯಾವ ರೀತಿಯ ತರಕಾರಿಗಳನ್ನು ಬಳಸುತ್ತೇವೆ ಎಂಬುದನ್ನು ತಪಾಸಣೆ ನಡೆಸುವಂತೆ ನಾನು ಆಹಾರ ಸುರಕ್ಷತಾ ಇಲಾಖೆಗೆ ಮನವಿ ಮಾಡುತ್ತೇನೆ. ನಮ್ಮಿಂದಾದ ತಪ್ಪುಗಳನ್ನು ತಿದ್ದಿದ್ದೇವೆʼʼ ಎಂದು ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

ಟೀಕೆ ಯಾಕೆ?

ಕ್ಷಮೆ ಕೋರಿದ್ದೇನೋ ಸರಿ. ಇದರಲ್ಲೇನು ತಪ್ಪು? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಕ್ಷಮೆ ಕೋರುವಾಗ ರಾಘವೇಂದ್ರ ರಾವ್‌ ವರ್ತಿಸಿದ ರೀತಿ ಮತ್ತು ಬಾಡಿ ಲಾಂಗ್ವೇಜ್‌ಗೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಕ್ಷಮೆ ಕೋರುವ ಹಾಗಿಲ್ಲ, ಬದಲಾಗಿ ಬೆದರಿಕೆ ಹಾಕುವಂತಿದೆ. ಅವರ ಮಾತಿನ ಶೈಲಿ ಮತ್ತು ಬೆರಳನ್ನು ಮುಂದೆ ಮಾಡಿರುವ ರೀತಿ ನೋಡಿದರೆ ಅವರು ಬೆದರಿಸುವಂತೆ ಭಾಸವಾಗುತ್ತದೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ನೆಟ್ಟಿಗರ ಪ್ರತಿಕ್ರಿಯೆ

ʼʼಮಾತನಾಡುವ ರೀತಿ ಕ್ಷಮೆ ಕೋರುವ ಹಾಗೆ ಕಾಣಿಸುತ್ತಿಲ್ಲ. ರಾಮೇಶ್ವರಂ ಕೆಫೆಯಲ್ಲಿ ದೋಸೆಗೆ ಸುಮಾರು 200 ರೂ. ನಿಗದಿ ಪಡಿಸಲಾಗಿದೆ. ದರ ದುಬಾರಿಯಾದರೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದನ್ನು ಯಾರಾದರೂ ಕ್ಷಮೆ ಕೋರುವುದು ಎಂದು ಕರೆಯುತ್ತಾರಾ? ಅವರ ಧ್ವನಿ, ಬಾಡಿ ಲಾಂಗ್ವೇಜ್‌ ನೋಡಿದರೆ ಬೆದರಿಕೆ ಹಾಕುವಂತಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅವರು ಗ್ರಾಹಕರನ್ನು ಬೆದರಿಸುತ್ತಿದ್ದಾರೆʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ರಾಮೇಶ್ವರಂ ಕೆಫೆ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ.

Continue Reading

ದೇಶ

Gold Smuggling: ಗುದನಾಳದಲ್ಲಿ 1ಕೆಜಿ ಚಿನ್ನ; ಕೇರಳದಲ್ಲಿ ಗಗನಸಖಿ ಅರೆಸ್ಟ್‌

Gold Smuggling:ಬಂಧಿತ ಗಗನಸಖಿಯನ್ನು ಕೋಲ್ಕತ್ತಾ ಮೂಲದ ಸುರಭಿ ಖತುನ್‌ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಗುದನಾಳದಲ್ಲಿ ಬರೋಬ್ಬರಿ 960 ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತಂದಿದ್ದಾಳೆ. ಆಕೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಕ್ಯಾಬಿನ್‌ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಮಸ್ಕತ್‌ನಿಂದ ಕಣ್ಣೂರಿಗೆ ಮೇ 28ರಂದು ಬಂದಿದ್ದ ವಿಮಾನದಲ್ಲಿ ಆಕೆ ಬಂದಿದ್ದಳು.

VISTARANEWS.COM


on

Gold Smuggling
Koo

ಕೇರಳ: ಅಕ್ರಮ ಚಿನ್ನ ಸಾಗಾಟ(Gold Smuggling) ಮಾಡುತ್ತಿದ್ದ ಗಗನಸಖಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಅಚ್ಚರಿಯ ವಿಚಾರವೆಂದರೆ 960 ಗ್ರಾಂ ಚಿನ್ನವನ್ನು ಆಕೆ ತನ್ನ ಗುದನಾಳದಲ್ಲಿಟ್ಟುಕೊಂಡು ಬಂದಿದ್ದಳು ಎನ್ನಲಾಗಿದೆ. ಇದೀಗ ಆಕೆಯನ್ನು ಅರೆಸ್ಟ್‌ ಮಾಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ಆಕೆಯನ್ನು 14 ದಿನಗಳ ಕಾಲ ತನ್ನ ವಶಕ್ಕೆ ಪಡೆದಿದೆ.

ಬಂಧಿತ ಗಗನಸಖಿಯನ್ನು ಕೋಲ್ಕತ್ತಾ ಮೂಲದ ಸುರಭಿ ಖತುನ್‌ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಗುದನಾಳದಲ್ಲಿ ಬರೋಬ್ಬರಿ 960 ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತಂದಿದ್ದಾಳೆ. ಆಕೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಕ್ಯಾಬಿನ್‌ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಮಸ್ಕತ್‌ನಿಂದ ಕಣ್ಣೂರಿಗೆ ಮೇ 28ರಂದು ಬಂದಿದ್ದ ವಿಮಾನದಲ್ಲಿ ಆಕೆ ಬಂದಿದ್ದಳು. DRI ಅಧಿಕಾರಿಗಳು ಚೆಕ್ಕಿಂಗ್‌ ಮಾಡುವಾಗ ಆಕೆಯ ಬಳಿಕ ಚಿನ್ನ ಇರುವ ವಿಚಾರ ಬಯಲಾಗಿದೆ. ತಕ್ಷಣ ಆಕೆಯನ್ನು ಅರಸ್ಟ್‌ ಮಾಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಾದ ಬಳಿಕ ಆಕೆಯನ್ನು ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲಾಗಿದ್ದು, ಆಕೆಯನ್ನು 14 ದಿನಗಳ ಕಾಲ DRI ಕಸ್ಟಡಿಗೆ ಒಪ್ಪಿಸಲಾಗಿದೆ.

ಇನ್ನು ಗಗನಸಖಿಯೊಬ್ಬಳು ತನ್ನ ಗುದನಾಳದಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಅಕ್ರಮ ಸಾಗಾಟ ಮಾಡಿರುವುದು ಇದೇ ಮೊದಲ ಪ್ರಕರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ನಿನ್ನೆಯಷ್ಟೇ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರ ಆಪ್ತ ಸಹಾಯಕನನ್ನು ಅರೆಸ್ಟ್‌ ಮಾಡಲಾಗಿತ್ತು. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ(IGI Airport)ದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಶಶಿ ತರೂರ್‌ ಅವರ ಪಿಎ ಶಿವ ಪ್ರಸಾದ್‌ ಅವರನ್ನು ವಶಕ್ಕೆ ಪಡೆಸಿದ್ದಾರೆ. ಶಿವ ಕುಮಾರ್‌ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಕಸ್ಟಮ್ಸ್‌ ಅಧಿಕಾರಿಗಳು ಟರ್ಮಿನಲ್‌ 3ರಲ್ಲಿ ಅವರನ್ನು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದು, ದುಬೈನಿಂದ ತಮ್ಮ ಸಹಾಯಕನ ಮೂಲಕ ಅಕ್ರಮವಾಗಿ ಚಿನ್ನವನ್ನು ಶಿವಕುಮಾರ್‌ ತರಿಸಿದ್ದರು. ಇದನ್ನು ಪಡೆಯುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು 30ಲಕ್ಷ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Huligemma Temple : ಹುಲಿಗೆಮ್ಮ ದೇವಿ ಜಾತ್ರೆಗೆ ಹೊರಟಿದ್ದ ಪಾದಯಾತ್ರಿ ಮೇಲೆ ಹರಿದ ಲಾರಿ; ಓರ್ವ ಸಾವು, ಮತ್ತೋರ್ವ ಗಂಭೀರ

ಕುಮಾರ್‌ ದುಬೈನಿಂದ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಕಸ್ಟಮ್ಸ್‌ ಆದಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದು, ಚಿನ್ನ ಎಲ್ಲಿಂದ ಬಂತು ಹೇಗೆ ಬಂದು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಕುಮಾರ್‌ ಅಧಿಕಾರಿಗಳ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡಿಲ್ಲ. ಹೀಗಾಗಿ ಅವರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Continue Reading

ದೇಶ

Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

Air India Flight: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಗುರುವಾರ ಮಧ್ಯಾಹ್ನ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ 20 ಗಂಟೆಗಳ ಕಾಲ ವಿಳಂಬವಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದೆ ವಿಮಾನದೊಳಗೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪ್ರಯಾಣಿಕರು ಕಾಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

VISTARANEWS.COM


on

Air India Flight
Koo

ನವದೆಹಲಿ: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಗುರುವಾರ ಮಧ್ಯಾಹ್ನ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ (Air India Flight) 20 ಗಂಟೆಗಳ ಕಾಲ ವಿಳಂಬವಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದೆ ವಿಮಾನದೊಳಗೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಮಾನ ಇಂದು (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ಹೊರಡಲಿದೆ.

ಗುರುವಾರ ಪತ್ರಕರ್ತೆ ಶ್ವೇತಾ ಪುಂಜ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಸಿ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ. ʼʼಫ್ಲೈಟ್ ನಂ. ಎಐ 183 ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಲಾಯಿತು. ಹವಾ ನಿಯಂತ್ರಣವಿಲ್ಲದೆ ಹಲವರು ಪರದಾಡಿದರು. ಈ ವೇಳೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಪ್ರಯಾಣಿಕರಿಗೆ ವಿಮಾನದಿಂದ ನಿರ್ಗಮಿಸಲು ತಿಳಿಸಲಾಯಿತುʼʼ ಎಂದು ಅವರು ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ಉಷ್ಣಾಂಶ ದಾಖಲೆಯ ಮಟ್ಟಕ್ಕೆ ಏರಿದೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ 52.9 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಕಂಡು ಬಂದಿತ್ತು. ʼʼಇದು ಖಾಸಗೀಕರಣ ವಿಫಲವಾಗಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಎಐ 183 ವಿಮಾನವು ಎಂಟು ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿದೆ. ಪ್ರಯಾಣಿಕರನ್ನು ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ವಿಮಾನವನ್ನು ಹತ್ತಿಸಿದ್ದು ಅಮಾನವೀಯ” ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಟ್ಯಾಗ್ ಮಾಡಿ ಶ್ವೇತಾ ಪುಂಜ್ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಏರ್‌ ಇಂಡಿಯಾ ಹೇಳಿದ್ದೇನು?

ಶ್ವೇತಾ ಪುಂಜ್ ಅವರ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಏರ್‌ ಇಂಡಿಯಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ʼʼಈ ಘಟನೆಗಾಗಿ ವಿಷಾಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ತಂಡದವರು ಸೂಕ್ತವಾಗಿ ಸ್ಪಂದಿಸಲಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆʼʼ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಪ್ರಯಾಣಿಕ ಅಭಿಷೇಕ್ ಶರ್ಮಾ ತ್ವರಿತ ಕ್ರಮಕ್ಕಾಗಿ ವಿಮಾನಯಾನ ಸಂಸ್ಥೆಗೆ ಮನವಿ ಮಾಡಿದ್ದಾರೆ. ಬೋರ್ಡಿಂಗ್ ಪ್ರದೇಶದಲ್ಲಿ ಸಿಲುಕಿರುವ ಹಿರಿಯ ನಾಗರಿಕರಿಗೆ ಮನೆಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ. ಅನೇಕ ಪ್ರಯಾಣಿಕರು ಪೋಸ್ಟ್ ಮಾಡಿದ ದೃಶ್ಯಗಳಲ್ಲಿ ಮಕ್ಕಳು ಸೇರಿದಂತೆ ಹಿರಿಯ ನಾಗರಿಕರು ನೆಲದ ಮೇಲೆ ಕುಳಿತಿರುವುದನ್ನು ಕಂಡು ಬಂದಿದೆ.

ಇದನ್ನೂ ಓದಿ: Air India: ನಿಯಮ ಉಲ್ಲಂಘಿಸಿದ ಏರ್‌ ಇಂಡಿಯಾಕ್ಕೆ ಬಿತ್ತು ಭಾರೀ ದಂಡ

ಕೆಲವು ತಿಂಗಳ ಹಿಂದೆ ಇಂತಹದ್ದೇ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಬೆಂಗಳೂರಿಗೆ ಡಿ. 23ರ ರಾತ್ರಿ 8.15ಕ್ಕೆ ಮಂಗಳೂರಿನಿಂದ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೇ ಕ್ಷಣದಲ್ಲಿ ರದ್ದಾಗಿತ್ತು. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 8.15ಕ್ಕೆ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ವಿಮಾನ ಬಾರದ ಕಾರಣದಿಂದ ಆಕ್ರೋಶಗೊಂಡಿದ್ದರು. ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿದ್ದವರು, ಪರೀಕ್ಷೆ ಬರೆಯಲು ಹೊರಟವರು ಹಾಗೂ ಕ್ರಿಸ್ಮಸ್ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ವಿಮಾನ ಬಾರದ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿ ಆಗಿದ್ದರು. ರಾತ್ರಿ 8.15ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ಬಂದಿದ್ದ ಪ್ರಯಾಣಿಕರು ಬದಲಿ ವ್ಯವಸ್ಥೆಗಾಗಿ ವಿಮಾನ ನಿಲ್ದಾಣದಲ್ಲಿಯೇ ನಡುರಾತ್ರಿಯವರೆಗೆ ಕಾದು ಕುಳಿತು ಬಳಿಕ ಪ್ರಯಾಣಿಸಿದ್ದರು.

Continue Reading

ದೇಶ

PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

PM Narendra Modi:ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಬಂದಿಳಿಯುತ್ತಿದ್ದಂತೆ ಅವರ ಹಳೆಯ ಫೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 1991ರಲ್ಲಿ ನರೇಂದ್ರ ಮೋದಿ, ಅಂದಿನ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಷಿ(MM Joshi) ಕನ್ಯಾಕುಮಾರಿಗೆ ಭೇಟಿ ನೀಡಿದ್ದ ಫೋಟೋ ವೈರಲ್‌ ಆಗಿದೆ. ಈ 33 ವರ್ಷ ಹಳೆಯದಾದ ಈ ಅದ್ಭುತ ಚಿತ್ರಕ್ಕೆ ನೆಟ್ಟಿಗರಿಂದ ನಾನಾ ರೀತಿಯ ಕಮೆಂಟ್‌ಗಳು ಬಂದಿವೆ.

VISTARANEWS.COM


on

PM Narendra Modi
Koo

ತಮಿಳುನಾಡು: ಲೋಕಸಭೆ ಚುನಾವಣೆ(Lok Sabha Election 2024)ಯ ಕೊನೆಯ ಹಂತ ಮತದಾನದ ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ವಾಡಿಕೆಯಂತೆ ಪ್ರಯಾಣವನ್ನು ಕೈಗೊಂಡಿದ್ದು, ನಿನ್ನೆ ಸಂಜೆಯಿಂದಲೇ ಕನ್ಯಾಕುಮಾರಿ(Kanyakumari)ಯ ವಿವೇಕಾನಂದ ಕಲ್ಲಿನ ಸ್ಮಾರಕ(Vivekananda Rock Memorial)ದಲ್ಲಿ ಧ್ಯಾನ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಬಂದಿಳಿಯುತ್ತಿದ್ದಂತೆ ಅವರ ಹಳೆಯ ಫೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 1991ರಲ್ಲಿ ನರೇಂದ್ರ ಮೋದಿ, ಅಂದಿನ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಷಿ(MM Joshi) ಕನ್ಯಾಕುಮಾರಿಗೆ ಭೇಟಿ ನೀಡಿದ್ದ ಫೋಟೋ ವೈರಲ್‌ ಆಗಿದೆ.

ಈ 33 ವರ್ಷ ಹಳೆಯದಾದ ಈ ಅದ್ಭುತ ಚಿತ್ರಕ್ಕೆ ನೆಟ್ಟಿಗರಿಂದ ನಾನಾ ರೀತಿಯ ಕಮೆಂಟ್‌ಗಳು ಬಂದಿವೆ. ಡಿ. 11, 1991 ರಂದು ಬಿಜೆಪಿ ಕೈಗೊಂಡಿದ್ದ ಏಕತಾ ಯಾತ್ರೆ ಕನ್ಯಾಕುಮಾರಿಯಿಂದ ಶುರುವಾಗಿ ಕಾಶ್ಮೀರದಲ್ಲಿ ಮುಕ್ತಾಗೊಂಡಿತ್ತು. ಈ ಯಾತ್ರೆಯಲ್ಲಿ ನರೇಂದ್ರ ಮೋದಿ, ಮುರಳಿ ಮನೋಹರ್‌ ಜೋಷಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ಪ್ರತಿಮೆ ಎದುರು ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಏನಿದು ಏಕತಾ ಯಾತ್ರೆ?

ಭಯೋತ್ಪಾದನೆ ವಿರುದ್ಧ ಭಾರತ ಬಲಿಷ್ಟವಾಗಿ ನಿಂತಿದೆ ಎಂಬ ಸಂದೇಶವನ್ನು ಪ್ರಪಂಚಕ್ಕೆ ಸಾರುವ ಉದ್ದೇಶದಿಂದ ಬಿಜೆಪಿ ಡಿ. 11, 1991 ರಂದು ಏಕತಾ ಯಾತ್ರೆಯನ್ನು ಆರಂಭಿಸಿತ್ತು. ಈ ಯಾತ್ರೆ ಜ. 26, 1992ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಮಾಪ್ತಿಯಾಗಿತ್ತು. ಈ ಯಾತ್ರೆಯೂ ಸುಮಾರು 14 ರಾಜ್ಯಗಳಲ್ಲಿ ಸಾಗಿ, ಜನರಲ್ಲಿ ಜಾಗೃತಿ ಮೂಡಿಸಿತ್ತು.

ನಿಗದಿತ ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಧ್ಯಾನ ಮಾಡಲಿದ್ದಾರೆ. ಈ ಎರಡು ದಿನ ಪ್ರವಾಸಿಗರಿಗೆ ಬೀಚ್‌ಗೆ ಹೋಗಲು ಅವಕಾಶವಿಲ್ಲ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಗುರುವಾರದಿಂದ ಶನಿವಾರದವರೆಗೆ ಪ್ರವಾಸಿಗರಿಗೆ ಬೀಚ್ ಮುಚ್ಚಲಾಗುತ್ತದೆ. ಖಾಸಗಿ ದೋಣಿಗಳಿಗೆ ಅಲ್ಲಿಗೆ ಹೋಗಲು ಅನುಮತಿ ಇಲ್ಲ.

ಇದನ್ನೂ ಓದಿ:Prajwal Revanna Case: ಮೇ 31ರಂದೇ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ

Continue Reading
Advertisement
Nivetha Pethuraj heated argument video with cops
ಟಾಲಿವುಡ್3 mins ago

Nivetha Pethuraj: ಪೊಲೀಸ್ ಅಧಿಕಾರಿಯೊಂದಿಗೆ ಬಹುಭಾಷಾ ನಟಿ ಕಿರಿಕ್‌; ವಿಡಿಯೊ ವೈರಲ್‌!

T20 World Cup 2024
ಕ್ರಿಕೆಟ್7 mins ago

T20 World Cup 2024: ಟಿ20 ವಿಶ್ವಕಪ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

Rameshwaram Cafe
ವೈರಲ್ ನ್ಯೂಸ್26 mins ago

Rameshwaram Cafe: ಗ್ರಾಹಕರ ಕ್ಷಮೆ ಕೋರಿದರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮೇಶ್ವರಂ ಕೆಫೆ ಮಾಲೀಕ; ಕಾರಣ ಇದು

Kannada Serials TRP Colors Kannada serials not in top 5 Shravani Subramanya is back on track
ಕಿರುತೆರೆ31 mins ago

Kannada Serials TRP: ಟಾಪ್‌ 5ನಲ್ಲಿಲ್ಲ ಕಲರ್ಸ್‌ ಕನ್ನಡ ಧಾರಾವಾಹಿಗಳು: ಟ್ರ್ಯಾಕ್‌ಗೆ ಮರಳಿದ ʻಶ್ರಾವಣಿ ಸುಬ್ರಮಣ್ಯʼ!

theft Case
ಕ್ರೈಂ34 mins ago

Theft Case : ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು; ಸೂಪರ್‌ ಮಾರ್ಕೆಟ್‌ಗಳಲ್ಲಿ ಖದೀಮರ ಕೈಚಳಕ

bhavani revanna sit notice
ಕ್ರೈಂ37 mins ago

Bhavani Revanna: ʼತನಿಖೆ ಬೇಕಿದ್ರೆ ಮನೆಗೇ ಬನ್ನಿʼ ಎಂದ ಭವಾನಿ ರೇವಣ್ಣ; ʼಆಯ್ತು ಅಲ್ಲಿಗೇ ಬರ್ತೀವಿʼ ಎಂದ ಎಸ್‌ಐಟಿ!

Gold Smuggling
ದೇಶ43 mins ago

Gold Smuggling: ಗುದನಾಳದಲ್ಲಿ 1ಕೆಜಿ ಚಿನ್ನ; ಕೇರಳದಲ್ಲಿ ಗಗನಸಖಿ ಅರೆಸ್ಟ್‌

prajwal Revanna Case
ಪ್ರಮುಖ ಸುದ್ದಿ43 mins ago

Prajwal Revanna Case : ಪ್ರಜ್ವಲ್​ನನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೇ ಬಂಧಿಸಿದ್ದು ಯಾಕೆ?

India women’s squad
ಕ್ರೀಡೆ51 mins ago

India women’s squad: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ; ತಂಡಕ್ಕೆ ಮರಳಿದ ಪ್ರಿಯಾ ಪೂನಿಯಾ

Maharaja trailer released Vijay Sethupathi has a secret
ಟಾಲಿವುಡ್53 mins ago

Maharaja Trailer: ವಿಜಯ್‌ ಸೇತುಪತಿ 50ನೇ ಚಿತ್ರದ ʻಮಹಾರಾಜʼ ಟ್ರೈಲರ್‌ ಔಟ್‌: ಫ್ಯಾನ್ಸ್‌ ಫಿದಾ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ23 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌