Site icon Vistara News

Vistara Top 10 News : ಬ್ರಿಟಿಷ್ ಕಾಲದ ಕಾನೂನು ಬದಲು, ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ ಇತ್ಯಾದಿ ಪ್ರಮುಖ ಸುದ್ದಿಗಳಿವು

Top 10 news

1. Criminal Laws: ಬ್ರಿಟಿಷ್ ಕಾಲದ ಕಾನೂನು ಬದಲು; ರೇಪಿಸ್ಟ್‌ಗಳಿಗೆ 20 ವರ್ಷ ಜೈಲು, ‘ದೇಶದ್ರೋಹ’ ಮಾರ್ಪಾಡು, ಬಿಲ್‌ಗಳಲ್ಲಿ ಇನ್ನೇನಿದೆ?
ನವದೆಹಲಿ: ದೇಶದಲ್ಲಿ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಿ, ಹೊಸ ಹೆಸರುಗಳೊಂದಿಗೆ ಕಾಯ್ದೆಯಾಗಿ ಜಾರಿಗೆ ತರುವ ದಿಸೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೂರು ವಿಧೇಯಕಗಳನ್ನು ಸಂಸತ್‌ನಲ್ಲಿ ಮಂಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : Criminal Laws: ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ರಾಕ್ಷಸರಿಗೆ ಗಲ್ಲು; ಸ್ತ್ರೀಯರ ರಕ್ಷಣೆಗೆ ಹೊಸ ಕಾನೂನು ಬಲ

2. Fire Accident: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ; 9 ಮಂದಿಗೆ ಗಾಯ, ನಾಲ್ವರು ಗಂಭೀರ
ಬೆಂಗಳೂರು: ನಗರದ ಬಿಬಿಎಂಪಿ ಮುಖ್ಯ ಕಚೇರಿಯ ಅಗ್ನಿ ಅವಘಡ ಸಂಭವಿಸಿದ್ದರಿಂದ 9 ಮಂದಿ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಬಿಬಿಎಂಪಿ ಗುಣ ನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ (Fire Accident) ಹೊತ್ತಿಕೊಂಡಿದೆ. ಮತ್ತೊಂದೆಡೆ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವ್ಲ, ಷಡ್ಯಂತ್ರ. ಇದು ಬಿಜೆಪಿ ಕೃತ್ಯ, ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್‌ ಹೇಳಿರುವುದು ಕಂಡುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3 .Karnataka Politics : ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್‌; ಇದು ಬಿಜೆಪಿ ಟಕ್ಕರ್!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಸಮರ ತಾರಕಕ್ಕೇರಿದೆ. ರಾಜ್ಯ ಸರ್ಕಾರದ ವಿರುದ್ಧ ಸವಾರಿ ಮಾಡಲು ಬಿಜೆಪಿ (BJP Karnataka) ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿದೆ. “ಎಟಿಎಂ ಸರ್ಕಾರ” (ATM Sarkar) ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಈ ಮೂಲಕ ರಾಜ್ಯದಲ್ಲಷ್ಟೇ ಅಲ್ಲದೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಇರಿಸುಮುರಿಸು ಮಾಡಲು ನಿರ್ಧರಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿಯು, ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್‌ (‌Karnataka Congress ATM Sarkar) ಎಂಬ ಪೋಸ್ಟರ್‌ ಅನ್ನು ಪ್ರದರ್ಶನಕ್ಕಿಟ್ಟಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಮ್ ಮಾಡಿ.

4. Lal krishna Advani: ಬಿಜೆಪಿಯನ್ನು ಟೀಕಿಸಲು ಆಡ್ವಾಣಿ ಬರೆದ ಪತ್ರವನ್ನೇ ಬಳಸಿಕೊಂಡ ಕಾಂಗ್ರೆಸ್!‌ ಏನಿದೆ ಅದರಲ್ಲಿ?
ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತರ (chief election commissioner) ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (chief justice of India) ಹೊರಗಿಡುವ ಕುರಿತು ಬಿಜೆಪಿ ಮಂಡಿಸಿರುವ ವಿಧೇಯಕವನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದ್ದು, ಹಿಂದೊಮ್ಮೆ ಭಾಜಪ ಮುಖಂಡ ಲಾಲ್‌ಕೃಷ್ಣ ಆಡ್ವಾಣಿಯವರೇ (lal krishna advani) ಬರೆದಿದ್ದ ಪತ್ರವನ್ನು ಸಮರ್ಥನೆಗೆ ಬಳಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

5.Commission Politics : ನ್ಯಾಯಾಂಗ ತನಿಖಾ ಆಯೋಗಕ್ಕೆ ಬಿಜೆಪಿಯ 40% ಕಮಿಷನ್‌ ದಾಖಲೆ ಕೊಡುವೆ: ಕೆಂಪಣ್ಣ
ಬೆಂಗಳೂರು: ರಾಜ್ಯದಲ್ಲೀಗ ಕಮಿಷನ್‌ ಪಾಲಿಟಿಕ್ಸ್‌ (Commission Politics) ಶುರುವಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಕಾಮಗಾರಿಗಳ ಕಮಿಷನ್‌ ವಾರ್‌ (Commission war) ನಡೆಯುತ್ತಿದೆ. ಬಿಬಿಎಂಪಿ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು 15% ಕಮಿಷನ್ ಕೇಳಿದ್ದಾರೆ ಎಂಬ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಅವರ ಬಳಿ ಇದಕ್ಕೆ ದಾಖಲೆ ಇದ್ದರೆ ಕೊಡಲಿ. ಆಗ ನಾನು ಅವರ ಪರವಾಗಿ ನಿಲ್ಲುತ್ತೇನೆ. ಆದರೆ, ಬಿಜೆಪಿ ಸರ್ಕಾರದ (BJP Government) 40% ಕಮಿಷನ್‌ ಬಗ್ಗೆ ನನ್ನ ಬಳಿ ದಾಖಲೆ ಇದೆ. ಈ ದಾಖಲೆಯನ್ನು ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನ್ಯಾಯಾಂಗ ಸಮಿತಿಗೆ ಕೊಡುತ್ತೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Karnataka State Contractors Association President Kempanna) ಹೇಳಿದರು. ಈ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರದ ಪರವಾಗಿ ಮಾತನಾಡಿದ್ದಾರೆ. ಆದರೆ, ಸರ್ಕಾರಕ್ಕೆ ಆಗಸ್ಟ್ 31ರ ಗಡುವು ನೀಡಿದ್ದು, ಅಷ್ಟೊರಳಗೆ ಬಾಕಿ ಹಣ ಬಿಡುಗಡೆ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : Commission Politics : ನ್ಯಾಯಾಂಗ ಆಯೋಗಕ್ಕೆ ಕೊಠಡಿಯನ್ನೇ ಕೊಡದ ಸರ್ಕಾರ; ಇನ್ನೂ ಶುರುವಾಗದ ತನಿಖೆ!

6. Weather Report : ದಕ್ಷಿಣ ಒಳನಾಡಲ್ಲಿ ನಾಳೆ ಮಳೆ; ಬೆಂಗಳೂರಲ್ಲೂ ಬರುತ್ತಾ?

7. Jailer Movie: ʻತಲೈವಾʼ ರಜನಿಯನ್ನೇ ಓವರ್ ಟೇಕ್ ಮಾಡಿದ ʻಶಿವಣ್ಣʼ! ತಮಿಳು ಪ್ರೇಕ್ಷಕರಿಂದ ಜೈಕಾರ!

8. Truecaller App: ಕರೆಗಳಿಗೆ ಉತ್ತರಿಸುವ ಎಐ ಆಧರಿತ ಹೊಸ ಫೀಚರ್ ಲಾಂಚ್ ಮಾಡಿದ ಟ್ರೂಕಾಲರ್!

9. Anju Love Story: ತಪ್ಪಾಗಿದೆ, ಭಾರತಕ್ಕೆ ಬರುವೆ; ನಸ್ರುಲ್ಲಾನಿಗಾಗಿ ಪಾಕ್‌ಗೆ ಹೋದ ಅಂಜು ಯುಟರ್ನ್

10. Theft Case : ಕಳ್ಳನಿಂದ ತಪ್ಪಿಸಿಕೊಂಡು ಮರಳಿ ಮಾಲೀಕನ ಮನೆ ಸೇರಿದ `ಜಾಣ ಎತ್ತುಗಳು’
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version