Site icon Vistara News

VISTARA TOP 10 NEWS : ಮಂಡ್ಯದಲ್ಲಿ ಕಾವೇರಿ ಕಿಚ್ಚು, ಚಂದ್ರಯಾನವನ್ನು ಲೇವಡಿ ಮಾಡಿದ ಪ್ರಕಾಶ್​ ರಾಜ್ ಬೆಂಡೆತ್ತಿದ ನೆಟ್ಟಿಗರು ಇತ್ಯಾದಿ ಪ್ರಮುಖ ಸುದ್ದಿಗಳು

Top 10 Aug 21

1. Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy – NEP) ಅಧಿಕೃತವಾಗಿ ರದ್ದು ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ಸೋಮವಾರ (ಆಗಸ್ಟ್‌ 21) ಪ್ರಕಟಿಸಿದೆ. ಅಲ್ಲದೆ, ನೂತನ ರಾಜ್ಯ ಶಿಕ್ಷಣ ನೀತಿಯನ್ನು (State Education Policy -SEP) ಕರ್ನಾಟಕದಲ್ಲಿ ಅಳವಡಿಸುವುದಾಗಿಯೂ ಘೋಷಣೆ ಮಾಡಿದೆ. ಆದರೆ, ರಾಜ್ಯ ಶಿಕ್ಷಣ ನೀತಿಯು ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗೆ (CBSE, ICSE Board)ಅನ್ವಯ ಆಗುವುದಿಲ್ಲ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ರಾಜ್ಯಕ್ಕೆ ಅಧಿಕಾರ ಇಲ್ಲ. ಇದರ ಜತೆಗೆ ಕೇಂದ್ರೀಯ ವಿವಿಗಳು, ಖಾಸಗಿ ವಿವಿಗಳಿಗೂ ಈ ನೀತಿ ಅನ್ವಯ ಆಗುವುದಿಲ್ಲ. ಹಾಗಾಗಿ ನೂತನ ಶೈಕ್ಷಣಿಕ ನೀತಿ (Education Policy) ಬಗ್ಗೆ ಎಲ್ಲರೂ ಭಯ ಬೀಳಬೇಕಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Education Policy : ರಾಜ್ಯದಲ್ಲಿ NEP ಇನ್ನಿಲ್ಲ, SEP ಜಾರಿ ಎಂದ ಸರ್ಕಾರ; ಸಿಡಿದೆದ್ದ ಬಿಜೆಪಿಯಿಂದ ಪ್ರತಿತಂತ್ರ

2. Cauvery Water Dispute: ಮಂಡ್ಯದಲ್ಲಿ ಧಗಧಗಿಸಿದ ಕಾವೇರಿ ಕಿಚ್ಚು; ಹೆದ್ದಾರಿ ತಡೆದು ಬಿಜೆಪಿ ಕಾರ್ಯಕರ್ತರ ಆಕ್ರೋಶ
ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯದಿಂದ (ಕೆಆರ್‌ಎಸ್‌) ತಮಿಳುನಾಡಿಗೆ ಕಾವೇರಿ ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ನಗರದಲ್ಲಿ ಬಿಜೆಪಿಯಿಂದ ಸೋಮವಾರ ಬೃಹತ್‌ ಪ್ರತಿಭಟನೆ (Cauvery Water Dispute) ನಡೆಸಲಾಯಿತು. ಸಂಜಯ್‌ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3. Prakash Raj: ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥನೆ ಬೆನ್ನಲ್ಲೇ ಪ್ರಕಾಶ್‌ ರಾಜ್‌ ವ್ಯಂಗ್ಯ; ರೋಗಿಷ್ಟ ಮನಸ್ಥಿತಿ ಅಂದ್ರು ಜನ
ಬೆಂಗಳೂರು: ನಟನೆಗಿಂತ ಇತ್ತೀಚೆಗೆ ವಿವಾದಗಳಿಂದಲೇ ಜಾಸ್ತಿ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj) ಅವರೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಚಂದ್ರಯಾನ 3 (Chandrayaan 3) ಮಿಷನ್‌ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್‌ (K Sivan) ಅವರನ್ನು ಅಣಕ ಮಾಡಲು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಫೋಟೊ ಹಂಚಿಕೊಂಡ ಕಾರಣ ಜನ ಅವರಿಗೆ ಟೀಕೆಗಳ ಮೂಲಕ ಚಳಿ ಬಿಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಚಂದ್ರಯಾನ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

4. ಮೈಚಳಿ ಬಿಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು 224 ಕ್ಷೇತ್ರದಲ್ಲಿ ಪ್ರತಿಭಟಿಸಿ; ಕೋರ್‌ ಕಮಿಟಿಯಲ್ಲಿ ಬಿಎಸ್‌ವೈ ಗುಡುಗು
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್‌ ಹಸ್ತ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿಯಿಂದ ಕೆಲವು ಹಾಲಿ ಹಾಗೂ ಮಾಜಿ ಶಾಸಕರು ಪಕ್ಷ ಬಿಡುತ್ತಾರೆ ಎಂಬ ಬಗ್ಗೆಯೂ ಸುದ್ದಿಯಾಗಿತ್ತು. ಅಲ್ಲದೆ, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ (BJP Politics) ಎಂಬಂತೆ ಚರ್ಚೆ ಹುಟ್ಟಿಕೊಂಡ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (Former CM BS Yediyurappa) ಅಖಾಡಕ್ಕೆ ಧುಮುಕಿದ್ದರು. ಈಗ ಬಿಜೆಪಿ ಕೋರ್ ಕಮಿಟಿ ಸಭೆ (BJP core committee meeting) ನಡೆಸಿ, ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ಆಗುತ್ತಿರುವ ತಾತ್ಸಾರದ ವಿರುದ್ಧ ಕೆಂಡಕಾರಿದ್ದಾರೆ. ಆಡಳಿತ ಪಕ್ಷಕ್ಕೆ ನಾವೇ ಆಹಾರವಾಗುವುದು ಎಂದರೆ ಏನು? ಅವರ ವೈಫಲ್ಯ ಮುಚ್ಚಿಕೊಳ್ಳಲು ಆಪರೇಷನ್‌ ಭೂತವನ್ನು ಛೂ ಬಿಟ್ಟಿದ್ದಾರೆ. ಇನ್ನಾದರೂ ಸಜ್ಜಾಗಿ, ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಿ, ಈಗ ಸರ್ಕಾರದ ಚಳಿ ಬಿಡಿಸುವ ಕಾಲ ಬಂದಿದೆ. ಸರ್ಕಾರದ ವೈಫಲ್ಯವನ್ನು 224 ಕ್ಷೇತ್ರದಲ್ಲೂ ಜನರಿಗೆ ಮುಟ್ಟಿಸಲು ಪ್ರತಿಭಟನೆ ನಡೆಸಿ ಎಂದು ಕರೆ ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

5.ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಒಲಿದ ಅದೃಷ್ಟ, ಇಲ್ಲಿದೆ ಪಟ್ಟಿ
ಮುಂಬೈ: ಆಗಸ್ಟ್‌ 30ರಿಂದ ಆರಂಭವಾಗುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ (Asia Cup 2023) ಭಾರತ ತಂಡವನ್ನು ಪ್ರಕಟಿಸಲಾಗಿದೆ. 17 ಆಟಗಾರರಿರುವ ಟೀಮ್‌ ಇಂಡಿಯಾವನ್ನು ಆಯ್ಕೆ ಸಮಿತಿಯು ಘೋಷಿಸಿದ್ದು, ಕನ್ನಡಿಗರಾದ ಕೆ.ಎಲ್‌.ರಾಹುಲ್‌ (K L Rahul) ಹಾಗೂ ಪ್ರಸಿದ್ಧ್‌ ಕೃಷ್ಣ ಸ್ಥಾನ ಪಡೆದಿದ್ದಾರೆ. ಐಪಿಎಲ್‌ ವೇಳೆ ಗಾಯಗೊಂಡಿದ್ದ ಕೆ.ಎಲ್‌.ರಾಹುಲ್‌ ಅವರು ಚೇತರಿಸಿಕೊಂಡಿದ್ದು, ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: KL Rahul : ತಂಡಕ್ಕೆ ಆಯ್ಕೆಗೊಂಡರೂ ರಾಹುಲ್​ ತಂಡದಲ್ಲಿ ಸ್ಥಾನ ಪಡೆಯೋದು ಡೌಟು?

6. Nag Panchami : ಹಾವಿನ ಡಾಕ್ಟ್ರ ಮನೆಯಲ್ಲಿ ಹಾವಿಗೇ ಪೂಜೆ; ಜಲಾಭಿಷೇಕ, ಆರತಿಗೆ ಫುಲ್‌ ಖುಷ್‌!

7. Mobile App : ಈ ಆ್ಯಪ್​ಗಳು ನಿಮ್ಮ ಮೊಬೈಲ್​ನಲ್ಲಿ ಇದ್ದರೆ ತಕ್ಷಣ ಡಿಲೀಟ್​ ಮಾಡಿ ಎನ್ನುತ್ತಿದೆ ಗೂಗಲ್​ ಪ್ಲೇಸ್ಟೋರ್​​

8. Donald Trump: ಗೆದ್ದು ಬಂದರೆ ಭಾರತಕ್ಕೆ ಸೇಡಿನ ತೆರಿಗೆ ವಿಧಿಸುವೆ: ಡೊನಾಲ್ಡ್‌ ಟ್ರಂಪ್

9. Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಲಷ್ಕರೆ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಮಟಾಶ್

10. ಅಜ್ಜಿ I Love you! ಒಂಟಿಯಾಗಿರುವೆ ಜಂಟಿಯಾಗು ಎಂದು ಪಟಾಯಿಸಿದ್ದ ಅಜ್ಜ ಕೈಕೊಟ್ಟʼನಲ್ಲʼ!
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version