Site icon Vistara News

Hindu activist Murder : ತಿ. ನರಸೀಪುರದಲ್ಲಿ ವೇಣುಗೋಪಾಲ್‌ ನಾಯಕ್‌ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್‌ ಅನುಮತಿ

tribute Meeting

ಬೆಂಗಳೂರು: ತಿ.ನರಸೀಪುರದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದ ಪಕ್ಕದ ಆವರಣದಲ್ಲಿ ಆಯೋಜಿಸಲಾದ ವೇಣುಗೋಪಾಲ್‌ ನಾಯಕ್‌ (Venugopal Nayak) ಶ್ರದ್ಧಾಂಜಲಿ ಸಭೆಗೆ ರಾಜ್ಯ ಹೈಕೋರ್ಟ್‌ (Karnataka High court) ಷರತ್ತುಬದ್ಧ ಅನುಮತಿ (Conditional Permission) ನೀಡಿದೆ. ಮಂಗಳವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದ ಈ ಸಭೆಗೆ ಸ್ಥಳೀಯ ಪೊಲೀಸರ ಶಿಫಾರಸಿನ ಆಧಾರದಲ್ಲಿ ತಹಸೀಲ್ದಾರ್‌ ಅವರು ಈ ಸಭೆಗೆ ಅನುಮತಿ ನಿರಾಕರಿಸಿದ್ದರು. ಶ್ರದ್ಧಾಂಜಲಿ ಸಮಿತಿಯು ಹೈಕೋರ್ಟ್‌ ಮೆಟ್ಟಿಲೇರಿದ ಬಳಿಕ ನ್ಯಾಯಾಲಯ ಸಭೆಗೆ ಅನುಮತಿ ನೀಡಿದೆ.

ಜುಲೈ 8ರಂದು ತಿ.ನರಸೀಪುರದಲ್ಲಿ ನಡೆದ ಹನುಮ ಜಯಂತಿಯ ನೇತೃತ್ವವನ್ನು ವಹಿಸಿದ್ದ ಯುವ ಬ್ರಿಗೇಡ್‌ ಕಾರ್ಯಕರ್ತ (Hindu activist Murder) ವೇಣುಗೋಪಾಲ ನಾಯಕ್‌ ಅವರನ್ನು ಮರುದಿನ ರಾತ್ರಿ ಕೊಲೆ ಮಾಡಲಾಗಿತ್ತು. ಇದು ಕಾಂಗ್ರೆಸ್‌ ನಾಯಕರ ಆಪ್ತರೇ ನಡೆಸಿದ ಕೊಲೆ ಎಂದು ಬಿಜೆಪಿ ಆರೋಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ಇಲಾಖೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ವೇಣುಗೋಪಾಲ್‌ ನಾಯಕ್‌ ಅವರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಲು ತಿ. ನರಸೀಪುರದ ಗುಂಜ ನರಸಿಂಹ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ ಶ್ರೀರಾಮುಲು, ಯುವಾ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಮಾಜಿ ಶಾಸಕ ಎನ್‌ ಮಹೇಶ್‌ ಭಾಗವಹಿಸುವುದೆಂದು ನಿರ್ಧರಿಸಲಾಗಿತ್ತು.

ಅನುಮತಿ ನಿರಾಕರಿಸಿದ ಪೊಲೀಸರು

ಈ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲು ಪೊಲೀಸರ ಅನುಮತಿ ಕೋರಿ ವೀರಾಂಜನೇಯ ಧರ್ಮ ಜಾಗೃತಿ ಬಳಗದ ವತಿಯಿಂದ ವೆಂಕಟೇಶ್‌ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ, ಪೊಲೀಸರು ಇದಕ್ಕೆ ಅನುಮತಿ ಕೊಟ್ಟಿರಲಿಲ್ಲ.

ತಿ. ನರಸೀಪುರದಲ್ಲಿ ಕೊಲೆ ನಡೆದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸ್ಥಿತಿ ಇದೆ. ಈ ಸಭೆಯನ್ನು ನಡೆಸಲು ನೀವು ಸರ್ಕಾರದಿಂದ ಇಲ್ಲವೇ ತಾಲೂಕು ದಂಡಾಧಿಕಾರಿಯವರಿಂದ ಅನುಮತಿ ಪಡೆದಿಲ್ಲ. ಜತೆಗೆ ಕಾರ್ಯಕ್ರಮ ಆಯೋಜಿಸಿರುವ ಶ್ರೀ ವೀರಾಂಜನೇಯ ಧರ್ಮ ಜಾಗೃತಿ ಬಳಗವು ನೋಂದಾಯಿತ ಸಂಸ್ಥೆ ಎಂಬುದರ ಬಗ್ಗೆ ಯಾವುದೇ ದಾಖಲಾತಿಯನ್ನು ನೀಡಿಲ್ಲ ಎಂದು ಇಲಾಖೆ ಹೇಳಿತ್ತು. ಹೀಗಾಗಿ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ಕೊಡಲಾಗದು ಎಂದು ಸ್ಪಷ್ಟಪಡಿಸಿತ್ತು.

ತಹಸೀಲ್ದಾರ್‌ ಅವರಿಂದಲೂ ಅವಕಾಶ ಸಿಗಲಿಲ್ಲ

ಈ ನಡುವೆ, ಧರ್ಮ ಜಾಗೃತಿ ಸಮಿತಿಯು ತಿ. ನರಸೀಪುರ ತಹಸೀಲ್ದಾರ್‌ ಅವರಿಗೆ ಮನವಿಯನ್ನು ಸಲ್ಲಿಸಿತ್ತು. ಆದರೆ, ಅವರು ಕೂಡಾ ಅನುಮತಿ ನಿರಾಕರಿಸಿದ್ದರು. ಇದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನವಾಗಿದ್ದು, ಅದರ ಆವರಣದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗದು ಎಂದು ತಹಸೀಲ್ದಾರ್‌ ತಿಳಿಸಿದ್ದರು.

ಎರಡೂ ಕಡೆಯಿಂದ ಅವಕಾಶ ನಿರಾಕರಿಸಲ್ಪಟ್ಟಾಗ ಧರ್ಮ ಜಾಗೃತಿ ಬಳಗವು ರಾಜ್ಯ ಹೈಕೋರ್ಟ್‌ ಮೊರೆ ಹೊಕ್ಕಿತ್ತು. ವಕೀಲರಾದ ಅರುಣ್‌ ಶ್ಯಾಂ ಅವರು ಧರ್ಮ ಜಾಗೃತಿ ಬಳಗದ ಪರವಾಗಿ ವಾದ ಮಾಡಿದರು. ಹೈಕೋರ್ಟ್‌ ಈ ವಾದವನ್ನು ಆಲಿಸಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಕಾರ್ಯಕ್ರಮವನ್ನು ಸಂಜೆ 4 ಗಂಟೆಯಿಂದ 6 ಗಂಟೆಯೊಳಗೆ ಮುಗಿಸಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: Murder Case : ನನ್ನ ಗಂಡ ಹುಲಿ ಥರ ಇದ್ದ ಸರ್‌, ಮುಖ ಮತ್ತು ತಲೆಗೆ ಸಾಬನಿಂದ ಚುಚ್ಚಿಸಿ ಕೊಂದ್ರು; ವೇಣುಗೋಪಾಲ್‌ ಪತ್ನಿ

Exit mobile version