Site icon Vistara News

ಎನ್‌ಐಎ, ಪೊಲೀಸ್‌ ದಾಳಿಗೆ ಅಡ್ಡಿಪಡಿಸಿದ್ದೇ ಬಂಧನಕ್ಕೆ ಕಾರಣ: ಗೃಹ ಸಚಿವ ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ದೇಶದಲ್ಲಿ ಭಯೋತ್ಪಾಕ ಚಟುವಟಿಕೆ ಸಂಬಂಧ ಕೆಲವು ದಿನಗಳ ಹಿಂದೆ ಎನ್‌ಐಎ ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದಾಗ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆಗಳ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಕಾರಣದಿಂದ ಅವರನ್ನು ರಾಜ್ಯಾದ್ಯಂತ ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಈ ಎರಡು ಸಂಘಟನೆಗಳ ಮುಖ್ಯಸ್ಥರು ಮತ್ತು ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರನ್ನು ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.

ಎನ್‌ಐಎ ದಾಳಿ ಹಾಗೂ ಪೊಲೀಸರು ಶಂಕಿತ ಉಗ್ರರ ಸೆರೆ ಹಿಡಿಯುವ ವೇಳೆ ಇವರು ಪ್ರತಿಭಟನೆ ಮೂಲಕ ಆತಂಕದ ವಾತಾವರಣವನ್ನುಂಟು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಂದೆಯೂ ಸಹ ಶಾಂತಿಭಂಗ ಉಂಟು ಮಾಡಬಹುದು ಎಂಬ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ | NIA Raid | ಪಿಎಫ್ಐ ಹೆಡೆಮುರಿ ಕಟ್ಟಿದ ಆಪರೇಷನ್ ಆಕ್ಟೋಪಸ್! ಸೂತ್ರಧಾರರು ಯಾರು?

Exit mobile version