Site icon Vistara News

Honour Killing : ತಂಗಿ, ಅಮ್ಮನನ್ನೇ ಕೆರೆಗೆ ತಳ್ಳಿ ಕೊಂದ ಧೂರ್ತ; ಅನ್ಯ ಕೋಮಿನ ಯುವಕನ ಪ್ರೇಮ ಕಾರಣ!

Honour Killing Dhanushri and Nitin

ಮೈಸೂರು: ಮೈಸೂರು ಜಿಲ್ಲೆಯಲ್ಲೊಂದು (Mysore News) ಹೃದಯ ವಿದ್ರಾವಕ (Heart touching Incident) ಘಟನೆ ನಡೆದಿದೆ. ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ (Young Man kills sister and mother) ಮಾಡಿದ್ದಾನೆ. ಇದೊಂದು ಗೌರವ ಹತ್ಯೆ (Honour Killing) ಎಂದು ಹೇಳಲಾಗಿದೆ.

ಹುಣಸೂರು ತಾಲ್ಲೂಕು ಮರೂರು ಗ್ರಾಮದಲ್ಲಿ ನಿತಿನ್‌ ಎಂಬಾತ ತನ್ನ ತಂಗಿ ಧನುಶ್ರೀ (19) ಮತ್ತು ತಾಯಿ ಅನಿತಾ (43) ಅವರನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಧನುಶ್ರೀ ಅನ್ಯ ಕೋಮಿನ ಯುವಕನ ಜತೆ ಆತ್ಮೀಯವಾಗಿದ್ದಾಳೆ ಎಂಬುದರಿಂದ ಸಿಟ್ಟಿಗೆದ್ದಿದ್ದ ನಿತಿನ್‌ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ, ಇದನ್ನು ತಪ್ಪಿಸಲು ಬಂದ ತಾಯಿ ಕೂಡಾ ನೀರಿನಲ್ಲಿ ಶವವಾಗಿದ್ದಾರೆ.

ಕಾಲೇಜಿನಲ್ಲಿ ಓದುತ್ತಿರುವ ಧನುಶ್ರೀ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದು ಊರಿನಲ್ಲೂ ಸುದ್ದಿಯಾಗಿತ್ತು. ಅಣ್ಣ ನಿತಿನ್‌ ಇದನ್ನು ಆಕ್ಷೇಪಿಸಿದ್ದ. ಈ ವಿಚಾರದಲ್ಲಿ ಅಣ್ಣ ತಂಗಿಯರ ನಡುವೆ ವೈ ಮನಸ್ಸು ಬೆಳೆದಿತ್ತು.

ಎಷ್ಟು ಹೇಳಿದರೂ ತನ್ನ ಮಾತನ್ನು ಕೇಳದೆ ಅನ್ಯ ಕೋಮಿನ ಯುವಕನ ಜತೆಗಿನ ಸುತ್ತಾಟವನ್ನೇ ಮುಂದುವರಿಸಿದ ತಂಗಿಯ ಮೇಲೆ ಸಿಟ್ಟುಗೊಂಡ ನಿತಿನ್‌ ಆಕೆಯ ಪಾಠ ಕಲಿಸಲು ಮುಂದಾಗಿದ್ದಾನೆ. ತಾಯಿ ಹಾಗೂ ತಂಗಿಯನ್ನು ಜತೆಯಾಗಿ ಬೈಕ್‌ನಲ್ಲಿ ಕರೆದೊಯ್ದ ನಿತಿನ್ ಒಂದು ಕೆರೆ ಬಳಿ ಬೈಕ್ ನಿಲ್ಲಿಸಿದ. ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ ಎನ್ನಲಾಗಿದೆ.

ಈ ವಿಷಯವನ್ನು ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಸೇರಿದ್ದಾರೆ. ನಿತಿನ್‌ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಇದೀಗ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming : 29ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ 12 ವರ್ಷದ ಬಾಲಕಿ; ಏನಾಗಿತ್ತು ಆಕೆಗೆ?

Exit mobile version