Site icon Vistara News

70 ವರ್ಷ ದಾಂಪತ್ಯ ನಡೆಸಿ ಸಾವಿನಲ್ಲೂ ಒಂದಾದ ಸತಿ-ಪತಿ; ಕಂಬನಿ ಮಿಡಿದ ಹುಬ್ಬಳ್ಳಿಯ ಶಿರಗುಪ್ಪಿ ಜನ

ವೃದ್ಧ ದಂಪತಿ

ಹುಬ್ಬಳ್ಳಿ: ಜಿಲ್ಲೆಯ ಶಿರಗುಪ್ಪಿ ಗ್ರಾಮದ ವೃದ್ಧ ದಂಪತಿ ಸುದೀರ್ಘ ಸಾಂಸಾರಿಕ ಜೀವನ ನಡೆಸಿ ಸಾವಿನಲ್ಲೂ ಒಂದಾಗಿದ್ದಾರೆ. ಶಿವಪುತ್ರಪ್ಪ ನೆಲಗುಡ್ಡ (91) ಮತ್ತು ಬಸಮ್ಮ (88) ದಂಪತಿ ಒಂದೇ ದಿನ ನಿಧನ ಹೊಂದಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಸಾವಿನ ವಿಷಯ ಕೇಳುತ್ತಿದ್ದಂತೆ ಕುಸಿದು ಬಿದ್ದ ಬಸಮ್ಮ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಜೋಡಿ 70 ವರ್ಷಗಳ ಸುದೀರ್ಘ ಕಾಲ ಒಟ್ಟಿಗೆ ಜೀವನ ಕಳೆದಿದ್ದರು. ಒಮ್ಮೆಯೂ ವೈಮನಸ್ಸಿಲ್ಲದೆ ದಾಂಪತ್ಯ ಜೀವನ ನಡೆಸಿದ್ದರು. ಹಿರಿಯ ದಂಪತಿಗಳ ಸಾವಿನಲ್ಲೂ ಒಂದಾಗಿದ್ದು ಕಂಡು ಗ್ರಾಮಸ್ಥರು ಮಮ್ಮಲನೆ ಮರಗಿದರು.

ಕುಟುಂಬಸ್ಥರು ಹಾಗೂ ಸಬಂಧಿಗಳು ಮೃತ ದಂಪತಿಯನ್ನು ಅಕ್ಕಪಕ್ಕ ಕೂರಿಸಿ ಪೂಜೆ ಮಾಡಿ, ತುಂಬು ಜೀವನ ನಡೆಸಿದ ದಂಪತಿಯನ್ನು ಒಟ್ಟಿಗೆ ಕೂರಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಬಂಧು ಮಿತ್ರರು ಎಲ್ಲರೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ | Acid attack | ಆ್ಯಸಿಡ್‌ ದಾಳಿಗೆ ಒಳಗಾದ ಯುವತಿಗೆ ಸರಕಾರಿ ಉದ್ಯೋಗ, ಮನೆ: ಸಿಎಂ ಬೊಮ್ಮಾಯಿ ಭರವಸೆ

Exit mobile version