Site icon Vistara News

ಮಾಜಿ ಸಭಾಪತಿ ಕಾರು ಡಿಕ್ಕಿಯಾಗಿ ಬೈಕ್‌ ಸವಾರನ ಸ್ಥಿತಿ ಗಂಭೀರ

Horatti car accident

ಹುಬ್ಬಳ್ಳಿ: ವಿಧಾನ ಪರಿಷತ್‌ ಮಾಜಿ ಸಭಾಪತಿ ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರ ಕಾರು ಬೈಕ್‌ಗೆ ಡಿಕ್ಕಿಗಾಗಿದೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹೊರಟ್ಟಿ ಹೊರಟಿದ್ದರು. ಕಾಲೇಜು ಕ್ಯಾಂಪಸ್‌ ಬಿಡುವ ಮುನ್ನವೇ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿದೆ.

ಅಪಘಾತಕ್ಕೊಳಗಾಗಿರುವ ಕಾರು

ಗಂಭೀರವಾಗಿ ಗಾಯಗೊಂಡ ಬೈಕ್‌ ಸವಾರನನ್ನು ಸವದತ್ತಿ ಮೂಲದ ಜೆಸಿಬಿ ಆಪರೇಟರ್‌ ಕೆಂಚಪ್ಪ ಎಂದು ಗುರುತಿಸಲಾಗಿದೆ. ಕೆಂಚಪ್ಪ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಹುಬ್ಬಳ್ಳಿಯಲ್ಲಿ ದರ್ಗಾ ಗೋಡೆಗೆ ಅಪ್ಪಳಿಸಿದ ಕಾರು; ಸ್ಥಳದಲ್ಲೇ ಮೂವರ ಸಾವು

Exit mobile version