Site icon Vistara News

ತಂಗಿಯನ್ನು ಚುಡಾಯಿಸಿದ್ದಕ್ಕೆ ಚಾಕು ಹಾಕಿದ ಸಹೋದರರು; ಚಿಕಿತ್ಸೆ ಫಲಿಸದೇ ಮೃತಪಟ್ಟ ಯುವಕ

murder Tn

ಹುಬ್ಬಳ್ಳಿ: ತಂಗಿಯನ್ನು ಚುಡಾಯಿಸಿದ್ದಾನೆಂಬ ಸಿಟ್ಟಿನಿಂದ ಆಕೆಯ ಸಹೋದರರು ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಈ ಪ್ರಕರಣ ನಡೆದಿದ್ದು, ಇರಿತಕ್ಕೊಳಗಾದ ಯುವಕ ಶುಕ್ರವಾರ ಮೃತಪಟ್ಟಿದ್ದಾನೆ. ಕಿರಣ ಭಜಂತ್ರಿ, ಅಭಿಷೇಕ್ ಭಜಂತ್ರಿ ಎಂಬ ಸಹೋದರರಿಂದ ಕೊಲೆಯಾದ ಯುವಕನ ಹೆಸರು ಚಂದ್ರಶೇಖರ್.

ಇದನ್ನೂ ಓದಿ | ಹುಬ್ಬಳ್ಳಿಯ ಕಿಮ್ಸ್‌ನಲ್ಲೆ ಮಗು ಪ್ರತ್ಯಕ್ಷ: ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಯುವತಿಯ ಸಹೋದರರು ಚಂದ್ರಶೇಖರ್‌ನ ದೇಹದ ವಿವಿಧ ಭಾಗಗಳಿಗೆ ಚಾಕುವಿನಿಂದ ಇರಿದಿದ್ದರು. ಪರಿಣಾಮ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆಗೆ ಸ್ಪಂದಿಸದೇ ಚಂದ್ರಶೇಖರ್ ಮೃತಪಟ್ಟಿದ್ದಾನೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | “ಬಡ್ಡೀಸ್‌ʼ ಚಿತ್ರ ತಂಡದ ವಾಹನದ ಮೇಲೆ ಉರುಳಿದ ವಿದ್ಯುತ್‌ ಕಂಬ

Exit mobile version