ಹುಬ್ಬಳ್ಳಿ: ಕಿಮ್ಸ್‌ನಲ್ಲಿ ನಾಪತ್ತೆಯಾಗಿದ್ದ ಮಗು ಅಲ್ಲೇ ಪತ್ತೆಯಾಗಿದೆ. ಪೊಲೀಸರು ಮಗುವಿನ ಪತ್ತೆಗಾಗಿ ಮೂರು ತಂಡ ರಚಿಸಿ ಬಲೆ ಬೀಸಿದ್ದರು. ಪೊಲೀಸ್ ತನಿಖೆ ಚುರುಕಾದ ಹಿನ್ನೆಲೆಯಲ್ಲಿ ಆರೋಪಿಗಳು ಭಯಗೊಂಡು, ಕಿಮ್ಸ್ ಆವರಣದಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಪ್ರಕರಣದ ಕುರಿತು ಸಮಗ್ರ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ʼಮಗು ಸಿಕ್ಕಿದ್ದು ನಮಗೆ ಖುಷಿಯಾಗಿದೆ. ಇದನ್ನು ಕಳ್ಳತನ ಮಾಡಿದವನನ್ನು ಪೊಲೀಸರು ಬಂಧಿಸಬೇಕಿದೆʼ ಎಂದು ಮಗುವಿನ ತಂದೆ ಹುಸೇನ್ ಶೇಖ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ಜುಗುರಾಜ್ ಕೊಲೆ ಪ್ರಕರಣ: ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ
40 ದಿನದ ಮಗು ಹೆಮೊರಾಜಿಕಲ್ ಡಿಸೀಸ್ ಆಫ್ ನ್ಯೂ ಬಾರ್ನ್ ರೋಗದಿಂದ ಬಳಲುತ್ತಿತ್ತು. ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಕಿಮ್ಸ್‌ಗೆ ದಾಖಲು ಮಾಡಲು ವೈದ್ಯರು ಹೇಳಿದ್ದರು. ಜೂನ್ 10ರಂದು ಕಿಮ್ಸ್‌ಗೆ ತಮ್ಮ ಮಗುವನ್ನು ಕುಂದಗೋಳದ ನೆಹರೂ ನಗರದ ಮಹಿಳೆ ಉಮ್ನೇ ಜೈನಾಬ್ ಶೇಖ್ ದಾಖಲಿಸಿದ್ದರು. ಅವರ ಕೈಯಲ್ಲಿದ್ದ ಮಗುವನ್ನು ಖದೀಮರು ಕದ್ದೊಯ್ದಿದ್ದರು.
ಈ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಇದೀಗ, ಮಗುವನ್ನು ಅಪಹರಿಸಿದ ಮತ್ತು ಅದನ್ನು ಮತ್ತೆ ಆಸ್ಪತ್ರೆಯ ಆವರಣದಲ್ಲಿ ತಂದಿಟ್ಟ ದುಷ್ಕರ್ಮಿಗಳು ಯಾರು ಎಂಬ ಕುತೂಹಲ ಮೂಡಿದೆ. ಪೊಲೀಸರು ಮಗು ಅಪಹರಣಕಾರರ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು