ಹುಬ್ಬಳ್ಳಿ: ಒಂದು ದಶಕದಿಂದ ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗಿದ್ದ ಭೈರಿದೇವರಕೊಪ್ಪ ದರ್ಗಾವನ್ನು ಇಂದು ಬಿಗಿ ಭದ್ರತೆಯಲ್ಲಿ ತೆರವು ಮಾಡಲಾಗುತ್ತಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಹುಬ್ಬಳ್ಳಿ- ಧಾರವಾಡ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇರುವ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾ ರಸ್ತೆ ಅತಿಕ್ರಮ ಮಾಡಿ ನಿರ್ಮಿಸಿದ್ದಲ್ಲದೆ, ಬಿಆರ್‌ಟಿಎಸ್ ರಸ್ತೆ ಕಾಮಗಾರಿಗೆ ಅಡ್ಡಿಯಾಗಿತ್ತು. ಕಳೆದ ಒಂದು ದಶಕದಿಂದ ತೆರವಿಗೆ ತಡೆ ಹಾಕಲಾಗಿತ್ತು. ದರ್ಗಾ ತೆರವಿಗೆ ಕಾಂಗ್ರೆಸ್ ಸೇರಿದಂತೆ ಮುಸ್ಲಿಮ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ದರ್ಗಾ ತೆರವು ಕಾರ್ಯಾಚರಣೆ ಆರಂಭವಾಗಿದೆ. ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಗೂ ತಗಡಿನ ಮರೆ ಹಾಕಲಾಗಿದೆ. ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ದರ್ಗಾ ತೆರವಿನ ದೃಶ್ಯ ಸೆರೆ ಹಿಡಿಯದಂತೆ ಮಾಧ್ಯಮಗಳಿಗೆ ನಿರ್ಬಂಧ ಹಾಕಲಾಗಿದೆ. ಡಿಸಿಪಿ ಸಾಹಿಲ್ ಬಾಗ್ಲಾ ಮತ್ತು ಬ್ಯಾಕೋಡ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ | ಕಿತ್ತಾಟವಿಲ್ಲದೆ ಸ್ಥಳಾಂತರಗೊಂಡ ದರ್ಗಾ; ಕಾಳಿ ಮಾತೆ ದೇಗುಲದ ಗೋಪುರ ಧ್ವಜ ಹಾರಿಸಿದ ಪ್ರಧಾನಿ