Site icon Vistara News

Modi in Karnataka: ಕಾಂಗ್ರೆಸ್‌ನಿಂದ ಬಸವೇಶ್ವರರಿಗೆ ಅವಮಾನ: ರಾಹುಲ್‌ ಭಾಷಣ ಉಲ್ಲೇಖಿಸಿದ ಮೋದಿ

modi-in-karnataka-modi critisises rahul gandhi remarks in london

#image_title

ಹುಬ್ಬಳ್ಳಿ: ಭಾರತದ ಪ್ರಜಾಪ್ರಭುತ್ವವನ್ನು ಆಗಾಗ್ಗೆ ಕಟಕಟೆಯಲ್ಲಿ ನಿಲ್ಲಿಸುವವರಿಂದ ಜಾಗೃತವಾಗಿರಿ ಎನ್ನುವ ಮೂಲಕ, ಇತ್ತೀಚೆಗೆ ಲಂಡನ್‌ನಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.

ಐಐಟಿ-ಧಾರವಾಡ ಕ್ಯಾಂಪಸ್ ಹೊರಗಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಐಐಟಿ ಧಾರವಾಡ ಲೋಕಾರ್ಪಣೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಲೋಕಾರ್ಪಣೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್‌ ವಿದ್ಯುದೀಕರಣ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಉದ್ಘಾಟನೆ, ಜಯದೇವ ಆಸ್ಪತ್ರೆಯ ಶಂಕುಸ್ಥಾಪನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆ, ಹೈಟೆಕ್ ಕ್ರೀಡಾ ಸಂಕೀರ್ಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಗವಾನ್‌ ಬಸವೇಶ್ವರರ ನೆಲದಲ್ಲಿ ನಿಂತು ಮತ್ತಷ್ಟು ಧನ್ಯತೆಯ ಭಾವ ಮೂಡುತ್ತಿದೆ. ಬಸವೇಶ್ವರರ ಅನೇಕ ಕೊಡುಗೆಗಳಲ್ಲಿ ಪ್ರಮುಖವಾದದ್ದು ಅನುಭವ ಮಂಟಪದ ಸ್ಥಾಪನೆ. ಈ ಲೋಕತಾಂತ್ರಿಕ ವ್ಯವಸ್ಥೆಯನ್ನು ವಿಶ್ವದೆಲ್ಲೆಡೆ ಅಧ್ಯಯನ ಮಾಡಲಾಗುತ್ತಿದೆ. ಭಾರತ ಕೇವಲ ಅತಿ ದೊಡ್ಡ ಪ್ರಜಾಪ್ರಭುತ್ವವಲ್ಲ, ಪ್ರಜಾಪ್ರಭುತ್ವದ ತಾಯಿ. ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆ ಲೋಕಾರ್ಪಣೆಯ ಅವಕಾಶ ಸಿಕ್ಕಿತ್ತು. ಇದು ಲೋಕತಂತ್ರದ ವೈಭವಕ್ಕೆ ಸಾಕ್ಷಿ ಎಂದರು.

ಇತ್ತೀಚೆಗೆ ಲಂಡನ್‌ನಲ್ಲಿ ಭಾರತದ ಕುರಿತು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಮಾತನ್ನು ಮೋದಿ ಪರೋಕ್ಷವಾಗಿ ಉಲ್ಲೇಖಿಸಿದರು. ಆದರೆ ಇಂದು ಲಂಡನ್‌ನಲ್ಲೇ ನಿಂತು ಭಾರತದ ಪ್ರಜಾತಂತ್ರದ ಕುರಿತು ಪ್ರಶ್ನೆಗಳನ್ನು ಎತ್ತಲಾಯಿತು. ವಿಶ್ವದ ಯಾವುದೇ ಶಕ್ತಿ ಭಾರತದ ಲೋಕತಾಂತ್ರಿಕ ಪರಂಪರೆಗೆ ಹಾನಿ ಮಾಡಲಾಗದು. ಆದರೂ ಕೆಲವರು ಭಾರತದ ಲೋಕತಂತ್ರವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇಂತಹವರು ಬಸವೇಶ್ವರರಿಗೆ ಅವಮಾನ ಮಾಡುತ್ತಿದ್ದಾರೆ. ಕರ್ನಾಟಕದ ಜನರೆ, ಭಾರತದ ಮಹಾನ್‌ ಪರಂಪರೆಯ, 130 ಕೋಟಿ ಜನರಿಗೆ ಅವಮಾನ ಮಾಡುತ್ತಿದ್ದಾರೆ. ಇಂತಹ ಜನರಿಂದ ಕರ್ನಾಟಕದ ಜನರು ಜಾಗೃತರಾಗಿರಬೇಕು ಎಂದರು ಕಾಂಗ್ರೆಸ್‌ ಕುರಿತು ಮಾತನಾಡಿದರು.

ಧಾರವಾಡ ಐಐಟಿಯು, ಸಂಕಲ್ಪದಿಂದ ಸಿದ್ಧಿ ಎಂಬ ಬಿಜೆಪಿ ಸರ್ಕಾರದ ಕಾರ್ಯವೈಖರಿಯ ಉದಾಹರಣೆ. ನಾಲ್ಕು ವರ್ಷದ ಹಿಂದೆ ಈ ಸಂಸ್ಥೆಗೆ ಶಿಲಾನ್ಯಾಸ ಮಾಡಲಾಗಿತ್ತು. ನಡುವೆ ಕೊರೊನಾ ಸಹ ಆಗಮಿಸಿತು. ಆದರೂ ಐಐಟಿ ಧಾರವಾಡ ಸಿದ್ಧವಾಗಿದೆ ಎನ್ನುವುದು ಸಂತಸವಾಗುತ್ತಿದೆ. ಶಿಲಾನ್ಯಾಸದಿಂದ ಲೋಕಾರ್ಪಣೆವರೆಗೆ ಡಬಲ್‌ ಇಂಜಿನ್‌ ಸರ್ಕಾರ ಇದೇ ವೇಗದಲ್ಲಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: Modi in Karnataka: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು: ಪ್ರಧಾನಿ ನರೇಂದ್ರ ಮೋದಿ ಉಲ್ಲೇಖ

ಈ ಹಿಂದೆ ಹೀಗೆ ಇರಲಿಲ್ಲ. ಶಿಲಾನ್ಯಾಸ ಮಾಡಿ ಕಲ್ಲು ಹಾಕಿ ಮರೆತು ಹೋಗುವ ಸಮಯ ಮುಗಿದಿದೆ ಎಂದು ಈ ಹಿಂದಿನ ಸರ್ಕಾರಗಳನ್ನು ಟೀಕಿಸಿದರು. ಯುವ ಭಾರತವು ಈ ಆಲೋಚನೆಯನ್ನು ಹಿಂದೆ ತಳ್ಳಿ ಮುಂದೆ ಸಾಗುತ್ತಿದೆ. ಉತ್ತಮ ಶಿಕ್ಷಣ ಎಲ್ಲರಿಗೂ ಸಿಗಬೇಕು. ಎಷ್ಟು ಉತ್ತಮ ಸಂಸ್ಥೆಗಳಿರುತ್ತವೆಯೋ ಅಷ್ಟೇ ಉತ್ತಮ ಶಿಕ್ಷಣ ಜನರಿಗೆ ತಲುಪುತ್ತದೆ. ಇದೇ ಕಾರಣಕ್ಕೆ ಕಳೆದ 9 ವರ್ಷದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದೆ. 70 ವರ್ಷದಲ್ಲಿ ಕೇವಲ 360 ಮೆಡಿಕಲ್‌ ಕಾಲೇಝ್‌ ಇತ್ತು, ಆದರೆ ಕೇವಲ 9 ವರ್ಷದಲ್ಲಿ 250 ಮೆಡಿಕಲ್‌ ಕಾಲೇಜ್‌ ಆರಂಭಿಸಲಾಗಿದೆ ಎಂದರು.

ಪೂರ್ಣ ಕರ್ನಾಟಕದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಕುರಿತು ಬಹಳ ನಂಬಿಕೆ ಹೊಂದಲಾಗಿದೆ. ಈಗ ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿಯಲ್ಲಿ ಸಿಗುತ್ತಿದೆ. ಇಂದು ಹುಬ್ಬಳ್ಳಿಯಲ್ಲಿ ಹೊಸ ಶಾಖೆಯ ಶಿಲಾನ್ಯಾಸ ಮಾಡಲಾಗಿದೆ. ಆಧುನಿಕ ಮೂಲಸೌಕರ್ಯ ಕೇವಲ ಕಣ್ಣಿಗೆ ಚೆನ್ನಾಗಿ ಕಾಣಲು ಮಾತ್ರ ಅಲ್ಲ, ಜೀವನವನ್ನು ಉತ್ತಮಗೊಳಿಸುವ ಮಾರ್ಗ ಎಂದು ಹೇಳಿದರು. ಕರ್ನಾಟಕದ ಅಭಿವೃದ್ಧಿ ಆಗಬೇಕೆಂದರೆ ಡಬಲ್‌ ಇಂಜಿನ್‌ ಶಕ್ತಿ ಸಿಗಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.

Exit mobile version