ಹುಬ್ಬಳ್ಳಿ: ನರೇಂದ್ರ ಮೋದಿ ಸರ್ಕಾರ ಜಾರಿ ಮಾಡಿದ ಅನೇಕ ಯೋಜನೆಗಳು ತಮ್ಮದೇ ಎಂದು ಅನೇಕರು ಜಾಹೀರಾತು ನೀಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ಐಐಟಿ-ಧಾರವಾಡ ಕ್ಯಾಂಪಸ್ ಹೊರಗಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಐಐಟಿ ಧಾರವಾಡ ಲೋಕಾರ್ಪಣೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಲೋಕಾರ್ಪಣೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿದ್ಯುದೀಕರಣ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ, ಜಯದೇವ ಆಸ್ಪತ್ರೆಯ ಶಂಕುಸ್ಥಾಪನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆ, ಹೈಟೆಕ್ ಕ್ರೀಡಾ ಸಂಕೀರ್ಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾತು ಮುಂದುವರಿಸಿದ ಪ್ರಲ್ಹಾದ ಜೋಶಿ, ಬಡತನವನ್ನು ಹೋಗಲಾಡಿಸಲು ಪ್ರತಿ ಕ್ಷಣವೂ ದುಡಿಯುತ್ತಿರುವವರು ಪ್ರಧಾನಿ ನರೇಂದ್ರ ಮೋದಿ. ಜನವರಿ 12ರಂದು ಇದೇ ಮಹಾನಗರದಲ್ಲಿ ಪ್ರಧಾನಿಯವರ ಪ್ರವಾಸ ಆಗಿತ್ತು, ಈಗ ಮತ್ತೆ ಆಗಮಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಮುಳುಗಿದ್ದ ಭಾರತಕ್ಕೆ ಹೊಸ ಕಲ್ಪನೆ, ಯೋಜನೆ ಕೊಟ್ಟವರು ಪ್ರಧಾನಿ ನರೇಂದ್ರ ಮೋದಿ. ಅವರ ಕೈಯಿಂದ ಧಾರವಾಡದ ಐಐಟಿ ಉದ್ಘಾಟನೆ ಆಗಿದೆ. ಬಹಳಷ್ಟು ಜನರು ಜಾಹೀರಾತು ನೀಡುತ್ತಿದ್ದಾರೆ. ಬೆಂಗಳೂರು-ಮೈಸೂರು, ಐಐಟಿ ಮಾಡಿದ್ದು ತಾವು ಎಂದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸಮಯದಲ್ಲಿ ಒಮ್ಮೆ ಪ್ರಸ್ತಾವನೆ ಆಗಿದ್ದು ಬಿಟ್ಟರೆ ಐಐಡಿ ಬರಲು ನರೇಂದ್ರ ಮೋದಿ ಮಾತ್ರ ಕಾರಣ. 2019ರಲ್ಲಿ ಐಐಟಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇಂದು ಅವರೇ ಉದ್ಘಾಟನೆ ಮಾಡುತ್ತಿದ್ದಾರೆ.
ಈ ಎಲ್ಲ ಯೋಜನೆಗಳಿಗೆ ನರೇಂದ್ರ ಮೋದಿ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎಂದು ಶ್ಲಾಘಿಸಿದರು.
ಇದನ್ನೂ ಓದಿ: Modi in Karnataka: ಮೋದಿ, ಮೋದಿ, ಮೋದಿ! 26 ಬಾರಿ ಮೋದಿ ಹೆಸರು ಹೇಳಿದ ಬೊಮ್ಮಾಯಿ!!