ಹುಬ್ಬಳ್ಳಿ: ಪ್ರೀತಿಸಿದ ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಸಿಟ್ಟಾದ ಯುವಕನೊಬ್ಬ ಕೊಡಲಿಯಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯ ವರೂರಿನ ಜಗದೀಶ್ ಡಾಬಾದಲ್ಲಿ ಯುವಕನ ಬರ್ಬರ ಹತ್ಯೆ (murder Case) ನಡೆದಿದೆ. ಸುಧೀರ್ ಹುಲಗೂರು (31) ಹತ್ಯೆಯಾದನು. ಸಾಗರ್ ಗಾಬಣ್ಣವರ್ ಕೊಲೆ ಆರೋಪಿ.
ಸಾಗರ್ ಪ್ರೀತಿಸುತ್ತಿದ್ದ ಹುಡುಗಿಯನ್ನು ಸುಧೀರ್ ಚುಡಾಯಿಸಿದ್ದ. ಇದೇ ವಿಚಾರಕ್ಕೆ ಸಾಗರ್ ಹಾಗೂ ಸುಧೀರ್ ನಡುವೆ ಡಾಬಾದಲ್ಲಿ ಗಲಾಟೆ ಶುರುವಾಗಿತ್ತು. ಮಾತಿಗೆ ಮಾತು ಬೆಳೆದಾಗ ಸಿಬ್ಬಂದಿ ಸಮಾಧಾನ ಮಾಡಿ ಹೊರಕಳಿಸಿದ್ದರು. ಡಾಬಾದಲ್ಲಿ ಊಟ ಮಾಡಿ ಹೊರಬರುತ್ತಿದ್ದ ಸುಧೀರ್ ಮೇಲೆ ಸಾಗರ್ ಒಮ್ಮೆಲೆ ದಾಳಿ ಮಾಡಿದ್ದ. ಕೊಡಲಿ ಬೀಸಿ ಸುಧೀರ್ನನ್ನು ಕೊಲೆ ಮಾಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಸಾಗರ್ನನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಿದ್ದಾರೆ.
ಇದನ್ನೂ ಓದಿ: Road Accident : ಕಾರಿನ ಡೋರ್ ಬಡಿದು ನಿಮ್ಹಾನ್ಸ್ ನೌಕರ ಸಾವು; ಯುವಕರಿಬ್ಬರ ಜೀವ ತೆಗೆದ ಬೈಕ್
ಯುವಕನ ಕೊಂದು ಪೊಲೀಸರಿಗೆ ಶರಣಾದ ರೌಡಿಶೀಟರ್
ಪೆರೇಡ್ಗೆ ಗೈರು ಹಾಜರಾಗಿದ್ದ ರೌಡಿಶೀಟರ್ ಯುವಕನನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ತಮಿಳುನಾಡಿನ ಬೆರಿಕೆ ಗ್ರಾಮದಲ್ಲಿ ಮಾಲೂರು ರೌಡಿಶೀಟರ್ ಪ್ರತಾಪ್ ಕಾರ್ತಿಕ್ ಎಂಬಾತನನ್ನು ಕೊಲೆ ಮಾಡಿದ್ದಾನೆ.
ಕೋಲಾರದ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಅನಕರಳ್ಳಿ ಗ್ರಾಮದ ಪ್ರತಾಪ್ ಹಿಂದೊಮ್ಮೆ ಅರಿಳೇರಿಯ ಗಿರೀಶ್ ಎಂಬಾತನ ಕೊಲೆ ಮಾಡಿ ಜೈಲು ಸೇರಿದ್ದ. ಇತ್ತೀಚೆಗೆ ಬಿಡುಗಡೆಯಾಗಿ ಬಂದಿದ್ದ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಶುಕ್ರವಾರ ಮಾಲೂರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ಗಳ ಪೆರೇಡ್ ಮಾಡಲಾಗಿತ್ತು. ಪೆರೇಡ್ಗೆ ಗೈರು ಹಾಜರಾದ ದಿನವೇ ತಮಿಳುನಾಡು ಬೇರಿಕೆ ಗ್ರಾಮದಲ್ಲಿ ಬಳಿ ಕಾರ್ತಿಕ್ ಎಂಬಾತನನ್ನು ಪ್ರತಾಪ್ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾನೆ. ಬೇರಿಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ