Site icon Vistara News

National Youth Festival | ಆ ನರೇಂದ್ರನ ಕನಸು ಈ ನರೇಂದ್ರನಿಂದ ನನಸಾಗುತ್ತಿದೆ: ಕೇಂದ್ರ ಸಚಿವ ಅನುರಾಗ್‌ ಠಾಕೂರ್‌

national-youth-festival-anurag thakur speech

ಹುಬ್ಬಳ್ಳಿ: ಆ ನರೇಂದ್ರ(ಸ್ವಾಮಿ ವಿವೇಕಾನಂದರು) ಭಾರತದ ಬಗ್ಗೆ ಕಂಡ ಕನಸುಗಳು ಈ ನರೇಂದ್ರನ (ನರೇಂದ್ರ ಮೋದಿ) ಮೂಲಕ ನನಸಾಗುತ್ತಿದೆ ಎಂದು ಎಂದು ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದರು.

ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಮಹೋತ್ಸವವು ನಮ್ಮ ದೇಶದ ವೈವಿಧ್ಯತೆಯನ್ನು ಒಂದೆಡೆ ತರುತ್ತದೆ. ಯುವಕರ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯೇ ಉಪಸ್ಥಿತರಿರುವುದು ಮತ್ತಷ್ಟು ಶೋಭೆ ತಂದಿದೆ. ಗೀತಾ, ರಾಮಾಯಣ ಓದುವ ಮೊದಲು ಫುಟ್‌ಬಾಲ್‌ ಓದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ದೇಹ ಹಾಗೂ ಬುದ್ಧಿ ಸಶಕ್ತವಾಗಿದ್ದರೆ ಮಾತ್ರವೇ ಆ ಉಪದೇಶಗಳು ಅರ್ಥವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಫಿಟ್‌ ಇಂಡಿಯಾ ಅಭಿಯಾನದ ಮೂಲಕ ಇಂತಹ ಕಾರ್ಯಕ್ಕೆ ಕರೆ ನೀಡಿದರು.

ಅಭಿವೃದ್ಧಿ ಹೊಂದಿದ ದೇಶಗಳೂ ಸಾಧಿಸಲಾಗದಂತಹ ಯುಪಿಐ-ಭೀಮ್‌ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು,. ಮೋದಿ ನೇತೃತ್ವದ ಭಾರತ. ಅಮೃತ ಕಾಲದಲ್ಲಿ ಯುವಕರ ಪಾತ್ರ ಮಹತ್ವದ್ದು. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸಬೇಕೆಂದರೆ ನಮ್ಮ ಇತಿಹಾಸದ ಮೇಲೆ ಗೌರವವಿರಬೇಕು, ಹಕ್ಕುಗಳ ಜತೆಗೆ ಕರರ್ತವ್ಯ ನಿಭಾಯಿಸಬೇಕು, ಎಲ್ಲ ಯೋಜನೆಗಳಲ್ಲೂ ಭಾಗವಹಿಸಬೇಕು. ವಿಕಸಿತ ಯುವ-ವಿಕಸಿತ ಭಾರತ ಎಂಬ ಘೋಷವಾಕ್ಯದೊಂದಿಗೆ ನಾವು ಹೊರಟಿದ್ದೇವೆ.

ಮೋದಿಯವರ ನಾಯಕತ್ವದಲ್ಲಿ ಜಿ20 ಆಯೋಜನೆಯು ಭಾರತಕ್ಕೆ ಲಭಿಸಿದೆ. ಯುವಕರನ್ನು ತೊಡಗಿಸಿಕೊಂಡು, ಅವರ ಆಲೋಚನೆಗಳನ್ನು ವಿಶ್ವದೆತ್ತರಕ್ಕೆ ಕೊಂಡೊಯ್ಯುತ್ತೇವೆ. ಯುಕ್ರೇನ್‌ನಲ್ಲಿ ಸಿಲುಕಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಒಂದು ಸಣ್ಣ ಅಪಾಯವೂ ಇಲ್ಲದಂತೆ ವಾಪಸ್‌ ಕರೆತರಲಾಯಿತು. ನಶಾ ಮುಕ್ತ, ಭ್ರಷ್ಟಾಚಾರ ಮುಕ್ತ ಹಾಗೂ ಸ್ವಚ್ಛ ಭಾರತ ನಿರ್ಮಾಣಕ್ಕೆ ಎಲ್ಲ ಯುವಕರೂ ಕೈಜೋಡಿಸಬೇಕು. ಒಬ್ಬ ನರೇಂದ್ರರ ಕನಸು ಮತ್ತೊಬ್ಬ ನರೇಂದ್ರರ ಮೂಲಕ ನೆರವೇರುತ್ತಿದೆ ಎಂದರು.

ಇದನ್ನೂ ಓದಿ | National Youth Festival : ಹುಬ್ಬಳ್ಳಿಯಲ್ಲಿ ಮೋದಿ ರೋಡ್‌ ಶೋ ನೋಡಲು ಮರವೇರಿದ ಬಾಗಲಕೋಟೆಯ 80ರ ವೃದ್ಧ

Exit mobile version