Site icon Vistara News

National Youth Festival | ಮೋದಿ ನೇತೃತ್ವದಲ್ಲಿ ಭಾರತ ಸಶಕ್ತ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

national-youth-festival-pralhad joshi speech

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಅತ್ಯಂತ ಸಶಕ್ತವಾಗಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟನೆ ಮಾಡಿದ ನಂತರ, ನೆರೆದಿದ್ದ ಸಾವಿರಾರು ಯುವಕರನ್ನುದ್ದೇಶಿಸಿ ಮಾತನಾಡಿದರು.

ವಿಶ್ವದಲ್ಲಿ ಭಾರತದ ಕೀರ್ತಿಪತಾಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹಾರಿಸಿದ್ದಾರೆ. ಜಗತ್ತಿನಲ್ಲೆ ಅತ್ಯಂತ ಯುವ ದೇಶ ಭಾರತ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಲಿಷ್ಠ ಹಾಗೂ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುವ ರಾಷ್ಟ್ರವಾಗಿ ಇಂಗ್ಲೆಂಡನ್ನು ಹಿಂದಿಕ್ಕಿದೆ. ಸ್ಟಾರ್ಟಪ್‌ನಲ್ಲಿ, ಒಲಿಂಪಿಕ್‌ನಲ್ಲಿ ಭಾರತ ಮುಂದುವರಿಯುತ್ತಿದೆ. ಹುಬ್ಬಳ್ಳಿ ಧಾರವಾಡ ಭಾಗದದಲ್ಲಿ ಐಐಐಟಿ ಸಿಕ್ಕಿದೆ. ಇಲ್ಲಿ ಒಂದು ಉತ್ತಮ ವಿಮಾನ ನಿಲ್ದಾಣವಾಗಿ ನೇರವಾಗಿ ದೆಹಲಿಯೊಂದಿಗೆ ಸಂಪರ್ಕ ಸಿಕ್ಕಿದೆ. ಈ ಸಂದರ್ಭದಲ್ಲಿ ಇದೇ ಭಾಗದಲ್ಲಿ ಯುವ ಜನೋತ್ಸವ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಒಂಭತ್ತು ಕಿಲೋಮೀಟರ್‌ ಅಂತರದಲ್ಲಿ ಒಂದಿಂಚೂ ಜಾಗವಿಲ್ಲದಂತೆ ಸ್ವಾಗತ ಕೋರಿದ್ದು ಸಂತೋಷವಾಗಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಉತ್ತಮ ಜೀವನ ನಡೆಸುವುದು ಹೇಗೆ ಎನ್ನುವುದನ್ನು ಸ್ವಾಮಿ ವಿವೇಕಾನಂದರು ಹೇಳಿದರು. ಜನಸಂಖ್ಯೆ ಎನ್ನುವುದು ಹೊರೆ ಎಂದು ಪರಿಗಣಿಸುತ್ತಿದ್ದ ನಮ್ಮ ದೇಶದಲ್ಲಿ, ಜನಸಂಕ್ಯೆ ಎನ್ನುವುದು ನಮ್ಮ ಶಕ್ತಿ ಎಂದು ಹೇಳಿದವರು ನರೇಂದ್ರ ಮೋದಿ. ಭಾರತದಲ್ಲಿ 40% ಯುವಕರಿದ್ದು, ಅವರನ್ನು ಬಡಿದೆಬ್ಬಿಸಿ ಕಾರ್ಯಕ್ರಮ ನೀಡಿದ್ದಾರೆ. ಹೊಸ ಶಿಕ್ಷಣ ನೀತಿ ಮೂಲಕ ಹೊಸ ದಾರಿ ನೀಡಿದ್ದಾರೆ. ಸ್ಕಿಲ್‌ ಇಂಡಿಯಾ, ಮುದ್ರಾ, ಫಿಟ್‌ ಇಂಡಿಯಾ, ಖೇಲೊ ಇಂಡಿಯಾ, ಜೀತೋ ಇಂಡಿಯಾ ಮೂಲಕ ಒಲಿಂಪಿಕ್‌ನಲ್ಲೂ ಹೆಚ್ಚು ಪದಕ ಗೆಲ್ಲಲು ಕಾರಣರಾಗಿದ್ದಾರೆ.

ಅಂತಹ ಪ್ರಧಾನಿಯವರು ನಮ್ಮ ನಡುವೆ ಇರುವುದು ಕರ್ನಾಟಕವಷ್ಟೆ ಅಲ್ಲದೆ ಇಡೀ ಭಾರತದ ಯುವಕರಿಗೆ ಸ್ಪೂರ್ತಿಯಾಗಿದೆ. ಕರ್ನಾಟಕ ಸರ್ಕಾರ ಯುವಕರಿಗೆ ಯುವಶಕ್ತಿ ಯೋಜನೆ ಮೂಲಕ ಐದು ಲಕ್ಷ ಯುವಕರಿಗೆ ಉದ್ಯೋಗ ನೀಡುವ ನಿರ್ಧಾರ ಮಾಡಿದ್ದೇವೆ. 75 ಯುವಕರನ್ನು ಒಲಿಂಪಿಕ್‌ಗೆ ತಯಾರಿ ಮಾಡಲು ದತ್ತು ಪಡೆದಿದ್ದೇವೆ. ಈ ರಾಷ್ಟ್ರೀಯ ಯುವ ಮೇಳ ಅತ್ಯಂತ ಯಶಸ್ವಿಯಾಗಲಿ. ನರೇಂದ್‌ ರಮೋದಿಯವರ ಆಗಮನದಿಂದ ಇಡೀ ಕರ್ನಾಟಕದ ಯುವಕರು ಅತ್ಯಂತ ಹರ್ಷವನ್ನು ಹೊಂದಿದ್ದಾರೆ ಎಂದರು.

ಇದನ್ನೂ ಓದಿ | National Youth Festival : ಮೋದಿಗೆ ಹೂವಿನ ಹಾರ ಕೊಡಲು ಬ್ಯಾರಿಕೇಡ್‌ ಹಾರಿಬಂದ ಬಾಲಕ; ಭದ್ರತಾ ಸಿಬ್ಬಂದಿ ತಬ್ಬಿಬ್ಬು!

Exit mobile version