ಹುಬ್ಬಳ್ಳಿ; ಹುಬ್ಬಳ್ಳಿ- ಬೆಂಗಳೂರು – ಹುಬ್ಬಳ್ಳಿ ಜನಶತಾಬ್ದಿ ರೈಲು (Hubli-Bangalore Janashatabdi train) ಇನ್ನು ಮುಂದೆ ಪ್ಲಾಟ್ ಫಾರ್ಮ್ 2ರಿಂದ ಸಂಚರಿಸಲಿದೆ. ರೇಲ್ವೆ ಸಂಖ್ಯೆ 12079/80 ಹುಬ್ಬಳ್ಳಿ-ಬೆಂಗಳೂರು- ಹುಬ್ಬಳ್ಳಿ ಮಧ್ಯೆ ಸಂಚರಿಸುವ ಜನಶತಾಬ್ದಿ ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ 2ನೇ ಪ್ಲಾಟ್ ಫಾರ್ಮ್ ನಿಂದ (second platform) ಸಂಚರಿಸುವಂತೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.
ಮಾರ್ಚ್ 1 ರಿಂದ ಬದಲಾವಣೆ: ಈ ಬದಲಾವಣೆ ಮಾರ್ಚ್ 1ರಿಂದ ಜರಿಯಾಗಲಿದೆ. ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ರೈಲ್ವೆ ಇಲಾಖೆ, ಈ ರೈಲು ಸಂಚಾರದ ವ್ಯವಸ್ಥೆಯನ್ನು ಸುಗಮಗೊಳಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ (Pralhad Joshi).
ರೈಲ್ವೆ ಅಧಿಕಾರಿಗಳೊಂದಿಗೆ ಸಚಿವ ಜೋಶಿ ಚರ್ಚೆ
ಈ ಜನಶತಾಬ್ದಿ ರೈಲು ಸದ್ಯ ಕಾರಣಾಂತರದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಮೂರನೇ ದ್ವಾರದ ಆರನೇ ಪ್ಲ್ಯಾಟ ಫಾರ್ಮನಿಂದ ಸಂಚರಿಸುತ್ತಿತ್ತು. ಇದರಿಂದ ಹುಬ್ಬಳ್ಳಿಯ ಜನರಿಗೆ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ಇದನ್ನು ಗಮನಿಸಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು, ಹುಬ್ಬಳ್ಳಿ ಭಾಗದಿಂದ ಸಂಚರಿಸುವ ಪ್ರಯಾಣಿಕರಿಗೆ ಈ ರೈಲು ಪ್ರಮುಖವಾಗಿದ್ದು, ಪ್ಲಾಟ್ ಫಾರ್ಮ್ ಬದಲಾವಣೆ ಮಾಡುವಂತೆ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಿದ್ದಾರೆ.
ಸಚಿವರ ಸೂಚನೆ ಮೇರೆಗೆ ರೇಲ್ವೆ ಅಧಿಕಾರಿಗಳು ಜನಶತಾಬ್ದಿ ರೈಲನ್ನು ಹುಬ್ಬಳ್ಳಿ ರೈಲು ನಿಲ್ದಾಣದ ಪ್ರಮುಖ ದ್ವಾರದಿಂದ ಅಂದರೆ ಎರಡನೇ ಪ್ಲಾಟ್ ಫಾರ್ಮನಿಂದ ಸಂಚರಿಸುವಂತೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : Pralhad Joshi : ರಾಜ್ಯಕ್ಕೆ ಹೆಚ್ಚುವರಿ ರಾ.ಹೆ. ಪ್ರಾದೇಶಿಕ ಕಚೇರಿ; ಗಡ್ಕರಿ ಮುಂದೆ ಪ್ರಲ್ಹಾದ್ ಜೋಶಿ ಬೇಡಿಕೆ
ಟ್ವಿಟರ್‌ನಲ್ಲಿ ಮಾಹಿತಿ ನೀಡಿದ ಸಚಿವ ಪ್ರಲ್ಹಾದ್ ಜೋಶಿ
ರೈಲು ಸಂಖ್ಯೆ 12079/80 ಹುಬ್ಬಳ್ಳಿ-ಬೆಂಗಳೂರು- ಹುಬ್ಬಳ್ಳಿ ಮಧ್ಯ ಸಂಚರಿಸುವ ಜನ ಶತಾಬ್ದಿ ರೈಲು ಕಾರಣಾಂತರದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಮೂರನೇ ದ್ವಾರದ ಆರನೇ ಪ್ಲ್ಯಾಟ್ ಫಾರ್ಮ್ ನಿಂದ ಸಂಚರಿಸುತ್ತಿತ್ತು. ಹುಬ್ಬಳ್ಳಿಯ ಜನರಿಗೆ ಸಂಚಾರಕ್ಕೆ ಅತ್ಯಂತ ಪ್ರಮುಖ ರೈಲು ಇದಾಗಿದ್ದು, ಆರನೇ ಪ್ಲ್ಯಾಟ್ ಫಾರ್ಮ್, ಮೂರನೇ ದ್ವಾರದಿಂದ ಜನರಿಗೆ ಸಂಚರಿಸುವಲ್ಲಿ ತೊಂದರೆಯಾಗುತ್ತಿರುವುದನ್ನು ಗಮನಿಸಿ ನಾನು ಸಂಬಂಧ ಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಈ ರೈಲನ್ನು ನಿಲ್ದಾಣದ ಪ್ರಮುಖ ದ್ವಾರದಿಂದ ಚಲಿಸಿಲು ಸೂಚಿಸಿದ್ದು ಅದರಂತೆ ಬರುವ ಮಾರ್ಚ್ ಒಂದರಿಂದ ಜನ ಶತಾಬ್ದಿ ರೈಲು ಎರಡನೇ ಪ್ಲ್ಯಾಟ್ ಫಾರ್ಮ್ ನಿಂದ ಸಂಚರಿಸಲಿದೆ. ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಸಂಚಾರದ ವ್ಯವಸ್ಥೆಯನ್ನು ಸುಗಮಗೊಳಿಸಿದ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದಗಳು.
ರೈಲು ಸಂಖ್ಯೆ 12079/80 ಹುಬ್ಬಳ್ಳಿ-ಬೆಂಗಳೂರು- ಹುಬ್ಬಳ್ಳಿ ಮಧ್ಯ ಸಂಚರಿಸುವ ಜನ ಶತಾಬ್ದಿ ರೈಲು ಕಾರಣಾಂತರದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಮೂರನೇ ದ್ವಾರದ ಆರನೇ ಪ್ಲ್ಯಾಟ್ ಫಾರ್ಮ್ ನಿಂದ ಸಂಚರಿಸುತ್ತಿತ್ತು.
— Pralhad Joshi (@JoshiPralhad) February 22, 2024
ಹುಬ್ಬಳ್ಳಿಯ ಜನರಿಗೆ ಸಂಚಾರಕ್ಕೆ ಅತ್ಯಂತ ಪ್ರಮುಖ ರೈಲು ಇದಾಗಿದ್ದು, ಆರನೇ ಪ್ಲ್ಯಾಟ್ ಫಾರ್ಮ್, ಮೂರನೇ ದ್ವಾರದಿಂದ ಜನರಿಗೆ… pic.twitter.com/84FTXldyLy