Site icon Vistara News

Pralhad Joshi : ತೀಸ್ರೀ ಬಾರ್ ಮೋದಿ ಸರ್ಕಾರ್ ಗ್ಯಾರಂಟಿ ಗಾಡಿ ಸಂಚಾರ ಶುರು

Pralhad Joshi BJP Abhiyana

ಹುಬ್ಬಳ್ಳಿ: “ವಿಕಸಿತ ಭಾರತ-ಪ್ರಗತಿಶೀಲ ಧಾರವಾಡ” ಧ್ಯೇಯ ವಾಕ್ಯದೊಂದಿಗೆ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವು ಮೋದಿ ಗ್ಯಾರಂಟಿ ಗಾಡಿ (Modi Guarantee Vehicle) ಸಂಚಾರ ಆರಂಭಿಸಿದೆ. “ತೀಸ್ರೀ ಬಾರ್ ಮೋದಿ ಸರ್ಕಾರ್” (Teesri Baar Modi Sarkaar) ಸ್ಲೋಗನ್ ನೊಂದಿಗೆ ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೋದಿ ಗ್ಯಾರಂಟಿ ಗಾಡಿ ಸಂಚಾರಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಹುಬ್ಬಳ್ಳಿ- ಧಾರವಾಡದ ಜನತೆ ಆಶೀರ್ವಾದಿಂದ ಸಿಕ್ಕ ಅವಕಾಶವನ್ನು ಜನರ‌ ಸೇವೆಗೆ, ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಿಲ್ಲೆಯ ಪ್ರಗತಿಗೆ ಶ್ರಮಿಸಿದ್ದೇನೆ ಎಂದು ಇದೇ ವೇಳೆ ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಟ್ವೀಟ್ ಮಾಡಿದ್ದಾರೆ.

Pralhad Joshi Arogya Shibira

ಇದೀಗ ನಾವು ಮಾಡಿದ ಪ್ರಗತಿಪರ ಕೆಲಸಗಳನ್ನು ಜನರ ಮುಂದಿಡುವ ಸಮಯ ಬಂದಿದೆ. ಹೀಗಾಗಿ ಮೋದಿ ಗ್ಯಾರಂಟಿ ಗಾಡಿ ಜಿಲ್ಲೆಯಾದ್ಯಂತ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಶಾಸಕರಾದ ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ಹು-ಧಾ ಮಹಾನಗರ ಪಾಲಿಕೆ ಮಹಾಪೌರರಾದ ವೀಣಾ ಬರದ್ವಾಢ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪಾಲಿಕೆ ಸದಸ್ಯರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಜೊತೆಗೂಡಿ ಮೋದಿ ಗ್ಯಾರಂಟಿ ಗಾಡಿಗೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ : Pralhad Joshi: ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ತಾವರಗೇರಿಯಲ್ಲಿ ಬೃಹತ್‌ ಉಚಿತ ವೈದ್ಯಕೀಯ ಶಿಬಿರ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯು ಆರೋಗ್ಯವಂತ ಭಾರತವನ್ನು ನಿರ್ಮಿಸಲು ಶ್ರಮಿಸುತ್ತಿದ್ದು, ಈ ಯೋಜನೆಯಂತೆಯೇ ನಮ್ಮ ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿಯ ಸಹಯೋಗದೊಂದಿಗೆ ಭಾನುವಾರ ಕಲಘಟಗಿಯ ತಾವರಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ನಡೆಸಲಾಯಿತು.

ಶಿಬಿರದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡು ಲಭ್ಯವಿರುವ ಸೌಲಭ್ಯಗಳನ್ನು ಜನತೆ ಸದುಪಯೋಗ ಪಡಿಸಿಕೊಂಡರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತಾವರಗೇರಿ ಸಿದ್ಧಾರೂಢಮಠದ ನಿರ್ಗುಣಾನಂದ ಮಹಾಸ್ವಾಮಿಗಳು ವಹಿಸಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯರಾದ ನಾಗರಾಜ ಛಬ್ಬಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನಸವ್ವ ದೂಳಪ್ಪ ಕಾಮದೇನು, ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ನಿಂಗಪ್ಪ ದ್ಯಾಮಪ್ಪ ಸುತಗಟ್ಟಿ, ಕಲಘಟಗಿ ಮಂಡಲ ಅಧ್ಯಕ್ಷರಾದ ಬಸವರಾಜ ಶೇರೆವಾಡ ಭಾಗವಹಿಸಿದ್ದರು.

Pralhad Joshi Arogya Shibira

ಎಸ್.ಡಿ.ಎಂ.ಸಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷರಾದ ಸಿದ್ದಪ್ಪ ಹೊನ್ನಿಹಳ್ಳಿ, ದೀಶಾ ಸಮಿತಿ ಜಿಲ್ಲಾ ಪಂಚಾಯತ ಸದಸ್ಯರಾದ ಗುರುನಾಥಗೌಡ್ರ ಬಸನಗೌಡ್ರ, ಮೌನೇಶ ಬಡಿಗೇರ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಮಮತಾ ತಿಪ್ಪಣ್ಣವರ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರಾದ ಭಾರತಿ ಪುಟ್ಟಪ್ಪನವರ, ವ್ಯವಸ್ಥಾಪಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚನ್ನಬಸಪ್ಪ ತಿಪ್ಪಣ್ಣವರ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶೇಖಪ್ಪ ದ್ಯಾವಪ್ಪನವರ ಹಾಗೂ ಸರ್ವ ಸದಸ್ಯರು ಹಾಗೂ ಗ್ರಾಮದ ಗುರು ಹಿರಿಯರು ಪ್ರಮುಖರು ಉಪಸ್ಥಿತರಿದ್ದರು.

Exit mobile version