Site icon Vistara News

Pralhad Joshi : ಲೋಕ ಕದನದಲ್ಲಿ ಡಿಜಿಟಲ್‌ ಜತೆ ಬಿಜೆಪಿ ಹೆಜ್ಜೆ, ಬೂತ್‌ ಮಟ್ಟದಿಂದಲೇ ತಯಾರಿ

Pralhad Joshi digital BoothPralhad Joshi digital Booth

ಹುಬ್ಬಳ್ಳಿ: ಲೋಕಸಭೆ ಚುನಾವಣೆ (Lok Sabha Election 2024) ಐತಿಹಾಸಿಕ ಗೆಲುವಿಗೆ ಬಿಜೆಪಿ ಬೂತ್ ಮಟ್ಟದಿಂದಲೇ ತಯಾರಿ ನಡೆಸಲು ಡಿಜಿಟಲ್ (BJP Goes Digital) ಜತೆ ಹೆಜ್ಜೆ ಹಾಕಿದ್ದು, ಕಾರ್ಯಕರ್ತರೆಲ್ಲ ಇದಕ್ಕೆ ಸಾಥ್ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಕರೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಧಾರವಾಡ ವಿಧಾನಸಭಾ-74 ಕ್ಷೇತ್ರದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.

ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಈಗಾಗಲೇ 12 ಪ್ರಮುಖ ಕಾರ್ಯಕರ್ತರನ್ನು ಒಳಗೊಂಡ ಬೂತ್ ಮಟ್ಟದ ಕಮಿಟಿ (Booth Committee) ರಚಿಸಲಾಗಿದೆ. ಒಂದು ವೇಳೆ ಎಲ್ಲಿ ಬೂತ್ ಕಮಿಟಿ ಇಲ್ಲದ ಕಡೆ ಮೊದಲು ಕಾರ್ಯಕರ್ತರನ್ನು ಸಂಘಟಿಸಿ ಬೂತ್ ಮಟ್ಟದ ಕಮಿಟಿ ರಚಿಸಬೇಕು ಎಂದು ಪಕ್ಷದ ಸ್ಥಳೀಯ ಪ್ರಮುಖರಿಗೆ ತಿಳಿಸಿದರು.

ಹೀಗಿದೆ ಬೂತ್ ಮಟ್ಟದಲ್ಲಿ ಡಿಜಿಟಲ್ ವ್ಯವಸ್ಥೆ

ಬಿಜೆಪಿ ಈಗಾಗಲೇ ಬೂತ್ ಮಟ್ಟದಲ್ಲಿ ಪ್ರತಿ ಕಾರ್ಯಕರ್ತರನ್ನು ಮತ್ತು ಕೇಂದ್ರ ಸರ್ಕಾರದ ಫಲಾನುಭವಿಗಳನ್ನು ಡಿಜಿಟಲ್ ವ್ಯವಸ್ಥೆಯೊಳಗೆ ತರಲು ಶ್ರಮಿಸುತ್ತಿದೆ ಎಂದು ಹೇಳಿದರು.

ಬೂತ್ ಮಟ್ಟದ ಕಮಿಟಿಯಲ್ಲಿ ಇರುವವರ ಮೊಬೈಲ್ ನಂಬರ್ ಅನ್ನು ಆಯಾ ಕ್ಷೇತ್ರದ ಸಂಸದರ ಕಚೇರಿ ನಂಬರ್ ಗೆ ಲಿಂಕ್ ಆಗಿರುತ್ತದೆ. ವಾಟ್ಸಾಪ್ ಗ್ರೂಪ್ ರಚನೆಯಾಗುತ್ತದೆ. ಬೂತ್ ಕಮಿಟಿ ಸದಸ್ಯರು ಕೈಗೊಂಡ ಕಾರ್ಯ ಚಟುವಟಿಕೆಗಳ ಫೋಟೋ, ವಿಡಿಯೋವನ್ನು ಇದರಲ್ಲಿ ಅಪ್ ಲೋಡ್ ಮಾಡಬೇಕು. ಅಲ್ಲದೇ, ಕೇಂದ್ರ ಸರ್ಕಾರದ ಯೋಜನೆ ಫಲಾನುಭವಿಗಳನ್ನೂ ಸಂಘಟಿಸುವ ಕೆಲಸ ಮಾಡಬೇಕು ಎಂದು ಸಚಿವರು ಕರೆ ನೀಡಿದರು.

Pralhad Joshi : ಕಾರ್ಯಕರ್ತರಿಗೆ ಇದು ಟಾಸ್ಕ್‌

ಬಿಜೆಪಿ ಕಾರ್ಯಕರ್ತರಿಗೆ ಡಿಜಿಟಲ್ ವ್ಯವಸ್ಥೆಯಡಿ ಸಂಘಟನೆ ಟಾಸ್ಕ್ ಕೊಟ್ಟಿದೆ. ಪ್ರತಿ ಕಾರ್ಯಕರ್ತರೂ ಇದನ್ನು ಒಂದು ಟಾಸ್ಕ್ ಆಗೇ ಸ್ವೀಕರಿಸಬೇಕು. ಇದಕ್ಕಾಗಿ ಬಿಜೆಪಿ ತಾಂತ್ರಿಕ ಟೀಮ್ ನಿಮಗೆ ಸಾಥ್ ನೀಡಲಿದೆ. ಅಗತ್ಯ ತರಬೇತಿ ಸಹ ನೀಡಲಿದೆ ಎಂದು ತಿಳಿಸಿದರು.

ಫಲಾನುಭವಿಗಳನ್ನು ಡಿಜಿಟಲ್‌ ವ್ಯವಸ್ಥೆಗೆ ತರಲು ಏಪ್ರಿಲ್ 8 ಕೊನೆ ದಿನ

ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆ ಫಲಾನುಭವಿಗಳನ್ನು ಡಿಜಿಟಲ್ ವ್ಯವಸ್ಥೆಗೆ ತರಲು ಏಪ್ರಿಲ್ 8ರಂದು ಡೆಡ್ ಲೈನ್ ಇದೆ. ಅಷ್ಟರೊಳಗೆ ಬೂತ್ ಕಮಿಟಿ ಸದಸ್ಯರು ಕ್ರಿಯಾಶೀಲರಾಗಿ ಕಾರ್ಯಕರ್ತರ ಸಂಘಟನೆ ಮತ್ತು ಯೋಜನೆ ಫಲಾನುಭವಿಗಳನ್ನು ಸಂಘಟಿಸುವಲ್ಲಿ ಮುಂದಾಗಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಸಲಹೆ ನೀಡಿದರು.

ವಿಕಸಿತ ಭಾರತ ನಿರ್ಮಾಣವೇ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದ್ದು, ಇದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ 400 ಮೀರಿ ಕರ್ನಾಟಕದ 28 ಕ್ಷೇತ್ರಗಳನ್ನು ಗೆಲ್ಲಲು ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ : Pralhad Joshi : ಮೇಕೆದಾಟು ವಿರೋಧಿ ಡಿಎಂಕೆಯನ್ನು ಕೈ ಬಿಡುತ್ತದೆಯೇ ಕಾಂಗ್ರೆಸ್: ಪ್ರಹ್ಲಾದ್‌ ಜೋಶಿ ಪ್ರಶ್ನೆ

ಧಾರವಾಡ -74 ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್‌ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಪ್ರತಿ ವಾರ್ಡ್‌ಗಳಿಂದ‌ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಮತ್ತೆ ಮೋದಿ ಪ್ರಧಾನಿಯಾಗಿಸಲು ಬಿಜೆಪಿ ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಂಡಲ ಅಧ್ಯಕ್ಷ ಬಸವರಾಜ ಗರಗ, ಪಾಲಿಕೆ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version