ಹುಬ್ಬಳ್ಳಿ: ಫೆಬ್ರವರಿ 6 ರಂದು ನಡೆಯಲಿರುವ ಇಂಡಿಯಾ ಎನರ್ಜಿ ವೀಕ್ , ಅಂತರರಾಷ್ಟ್ರೀಯ ಸಮ್ಮೇಳನವಿದ್ದು, ಇದರ ಉದ್ಘಾಟನೆಗೆ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಬೊಮ್ಮಾಯಿ ಉತ್ತರಿಸಿದರು.
ಬೆಂಗಳೂರಿನ ಕಾರ್ಯಕ್ರಮವನ್ನು ಮುಗಿಸಿ ತುಮಕೂರಿನಲ್ಲಿ ಎಚ್ಎಎಲ್ನ ಹೆಲಿಕಾಪ್ಟರ್ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : Budget 2023: ಜನ ಸಾಮಾನ್ಯರ ಪರ ಬಜೆಟ್: ಪ್ರಧಾನಿ ನರೇಂದ್ರ ಮೋದಿ ಭರವಸೆ
ಮಹದಾಯಿ ಯೋಜನೆ ತೀರ್ಪಿನ ಬಗ್ಗೆ ಗೋವಾ ಮುಖ್ಯಮಂತ್ರಿ ಅಸಮಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ನ ಆದೇಶದ ಮೇಲೆ ಟ್ರಿಬ್ಯುನಲ್ ರಚನೆಯಾಗಿ, ಹತ್ತು ವರ್ಷಗಳ ಕಾಲ ಎಲ್ಲ ಆಯಾಮಗಳಲ್ಲಿ ಪರಿಶೀಲನೆಯನ್ನು ನಡೆಸಿ ಟ್ರಿಬ್ಯುನಲ್ ತೀರ್ಪು ನೀಡಲಾಗಿದೆ. ಆ ತೀರ್ಪಿನ ಅನುಷ್ಠಾನದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ 2017 ರಲ್ಲಿ ಮಾಡಿತ್ತು. ಡಿಪಿಆರ್ ಅನುಮೋದನೆಯಾಗಿದ್ದು, ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಕಾನೂನು ಹೋರಾಟದ ನಂತರವೇ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಎಚ್. ವಿಶ್ವನಾಥ್ ಅವರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿ, ನಾನೆಂದೂ ಅವರ ಮಾತಿಗೆ ಉತ್ತರವನ್ನು ಕೊಟ್ಟಿಲ್ಲ. ಅವರ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.