ನವ ದೆಹಲಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ನಿಲ್ದಾಣ ಇದೀಗ ವಿಶ್ವದಲ್ಲೇ ಅತಿ ಉದ್ದದ ಪ್ಲಾಟ್ ಫಾರ್ಮ್ ಎಂಬ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. (South Western Railway) ಈ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣವು 1,507 ಮೀಟರ್ ಉದ್ದವಿದ್ದು, 2023ರ ಜನವರಿ 12ರಂದು ಗಿನ್ನೆಸ್ ದಾಖಲೆ ಸೃಷ್ಟಿಸಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.
ವಿಶ್ವದ ಎರಡನೇ ಅತಿ ಉದ್ದದ ರೈಲ್ವೆ ನಿಲ್ದಾಣವು ಉತ್ತರಪ್ರದೇಶದ ಗೋರಖ್‌ಪುರ ನಗರದಲ್ಲಿದೆ. ಅದು 1366 ಮೀಟರ್ ಉದ್ದವಿದೆ. ಮೂರನೇ ಅತಿ ಉದ್ದದ ರೈಲ್ವೆ ನಿಲ್ದಾಣವು ಕೇರಳದ ಕೊಲ್ಲಂನಲ್ಲಿದೆ. ಇದು 1.180 ಮೀಟರ್ ಉದ್ದವಿದೆ.