Site icon Vistara News

Hubli-Dharwad-Central Results: ಜಗದೀಶ್ ಶೆಟ್ಟರ್‌ಗೆ ಸೋಲು, ಗೆಲುವಿನ ಟೆಂಗಿನಕಾಯಿ ಒಡೆದ ಮಹೇಶ್!

hubballi assembly constituency winner Mahesh Tenginkai

#image_title

ಬೆಂಗಳೂರು, ಕರ್ನಾಟಕ: ಇಡೀ ದೇಶದ ಗಮನ ಸೆಳೆದಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 35ಕ್ಕೂ ಅಧಿಕ ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಕೊನೆ ಗಳಿಗೆಯಲ್ಲಿ ಟಿಕೆಟ್ ಕೊಡಲಿಲ್ಲ ಎಂದು ಆರೋಪಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸೋಲು ಅನುಭವಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿಯ ಘಟಾನುಘಟಿಗಳು ನಾಯಕರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಶೆಟ್ಟರ್ ಅವರು ಗೆಲುವಿನ ಭರವಸೆ ಹೊಂದಿದ್ದರು. ಆದರೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ನಿರ್ಧಾರ ಅಲ್ಲಿನ ಜನರಿಗೆ ಸೂಕ್ತ ಎನಿಸಲಿಲ್ಲ ಕಾಣುತ್ತಿದೆ.

2023ರ ಚುನಾವಣೆಯ ಅಭ್ಯರ್ಥಿಗಳು

ಬಿಜೆಪಿಯಿಂದ ಟಿಕೆಟ್‌ ನೀಡದ್ದಕ್ಕಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಹಾಲಿ ಶಾಸಕ ಕಾಂಗ್ರೆಸ್‌ ಸೇರಿ ಹಸ್ತದ ಗುರುತಿನಿಂದ ಕಣದಲ್ಲಿದ್ದಾರೆ. ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಹಾಗೂ ಜೆಡಿಎಸ್‌ನಿಂದ ಮಹಾಂತ್ ಒಡೆಯರ್ ಅವರು ಸ್ಪರ್ಧಿಸಿದ್ದರು.

2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?

ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರವು ಧಾರವಾಡ ಜಿಲ್ಲೆಯ ಮಾತ್ರವಲ್ಲದೇ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಇಲ್ಲಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. 2018ರಲ್ಲಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅವರು 75,794 ಮತಗಳನ್ನು ಪಡೆದುಕೊಂಡು, 21306 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಇವರ ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಡಾ. ಮಹೇಶ್ ನಲವಾಡ್ ಅವರು 54488 ಮತಗಳನ್ನು ಪಡೆದುಕೊಂಡರೆ, ಜೆಡಿಎಸ್‌ನ ರಾಜಣ್ಣ ಎಂ ಕೋರವ್ ಅವರು 10,754 ಮತಗಳನ್ನು ಗಳಿಸಿದ್ದರು. ಈ ಬಾರಿ ಇಲ್ಲಿ ಚಿತ್ರಣ ಬದಲಾಗಿದೆ. ಬಿಜೆಪಿಯಲ್ಲಿದ್ದ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಬಂದಿದ್ದಾರೆ.

Read more: Hiriyur Election Results : ಹಿರಿಯೂರಿನಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಜಯಭೇರಿ

Exit mobile version