ಹುಬ್ಬಳ್ಳಿ: ಬಾವ-ಬಾಮೈದನ ಜಗಳದಲ್ಲಿ ಐವರು ಸಾರ್ವಜನಿಕರು ಗಾಯಗೊಂಡ ಘಟನೆ ನಗರದ ವಿದ್ಯಾನಗರದಲ್ಲಿ ನಡೆದಿದೆ. ಕೌಟುಂಬಿಕ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದರಿಂದ ಬಾಮೈದನಿಗೆ ಕಾರು ಡಿಕ್ಕಿ ಹೊಡಿಸಿ ಬಾವ ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಬಾಮೈದ ತಪ್ಪಿಸಿಕೊಂಡಿದ್ದು, ರಸ್ತೆ ಬದಿ ನಿಂತಿದ್ದ ಐವರಿಗೆ ಕಾರು ಡಿಕ್ಕಿಯಾಗಿದೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಐಶ್ವರ್ಯ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರವಾಗಿ ಐಶ್ವರ್ಯ ಪತಿ ವಿನೋದ್ ಹಾಗೂ ಐಶ್ವರ್ಯ ಸಹೋದರ ರಾಹುಲ್ ನಡುವೆ ಜಗಳ ನಡೆದಿತ್ತು. ಶನಿವಾರವು ಇಬ್ಬರ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದಿದೆ. ನಂತರ ಬಾಮೈದನಿಗೆ ಕಾರು ಡಿಕ್ಕಿ ಹೊಡೆಸಲು ಹೋದ ಬಾವ, ಪಾದಚಾರಿಗಳಿಗೆ ಗುದ್ದಿದ್ದಾನೆ.
ಇದನ್ನೂ ಓದಿ | Rambhapuri Shri : ಮಠಾಧಿಪತಿ ವಿವಾದ ; ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ತೂರಿದ ಮಹಿಳೆ
ಸ್ಥಳದಿಂದ ರಾಹುಲ್ ತಪ್ಪಿಸಿಕೊಂಡು ತಪ್ಪಿಸಿಕೊಂಡು ಓಡಿದ್ದು, ಕಾರು ಡಿಕ್ಕಿಯಾಗಿದ್ದರಿಂದ ರಸ್ತೆ ಬದಿ ನಿಂತಿದ್ದ ಸಾರ್ವಜನಿಕರು ಗಾಯಗೊಂಡಿದ್ದಾರೆ. ಮಂಜುನಾಥ ಪೂಜಾರಿ, ಪ್ರಶಾಂತ ಭೂತೆ, ಅಶ್ವಿನಿ ಯಲಿಗಾರ, ಲಕ್ಷ್ಮೀ ಬೆಳವಡಿ, ಇಸ್ಮಾಯಿಲ್ ಯಾದವಾಡ ಎಂಬುವವರು ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣಿಗೆ ಶರಣಾದ ಮಹಿಳಾ ಪೊಲೀಸ್
ರಾಮನಗರ: ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ (Police Constable) ಆತ್ಮಹತ್ಯೆ. ಮಾಡಿದ್ದಾರೆ (Self Harming). ಬೆಂಗಳೂರು ನಗರ ವ್ಯಾಪ್ತಿಯ (Bangalore News) ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡುತಿದ್ದ ಮಹಿಳಾ ಕಾನ್‌ಸ್ಟೇಬಲ್ ಮಂಜುಶ್ರೀ (27) ಆತ್ಮಹತ್ಯೆ ಮಾಡಿಕೊಂಡವರು.
ಮಂಜುಶ್ರೀ ಅವರು ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವಸಂದ್ರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ಆಗಿದ್ದಾರೆ. ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ. ಮಾಡಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Bigg Boss Contestant : ಸುಳ್ಳು ದೂರು ಕೊಟ್ಟು ತಗಲಾಕೊಂಡ ಬಿಗ್‌ಬಾಸ್ ಸ್ಪರ್ಧಿ; ಜೈಲೇ ಗತಿನಾ!
ಮಂಜುಶ್ರೀ ಅವರದು ಬಡ ಕುಟುಂಬವಾಗಿದ್ದು, ಉತ್ತಮ ಬದುಕನ್ನು ಅರಸಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದರು. ಮನೆಗೆ ಆಸರೆಯಾಗಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಊರಿನ ಮನೆಗೆ ಬಂದು ಪ್ರಾಣ ಕಳೆದುಕೊಂಡಿದ್ದಾರೆ. ಮೃದು ಸ್ವಭಾವದ ಈಕೆ ಯಾವುದೋ ಕಾರಣದಿಂದ ನೊಂದು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಹೇಳಲಾಗಿದೆ.