Site icon Vistara News

Hukkeri Election Results: ಹುಕ್ಕೇರಿಯಲ್ಲಿ ಬಿಜೆಪಿಯ ನಿಖಿಲ್ ಕತ್ತಿಗೆ ಗೆಲುವು, ಮತ್ತೆ ಸೋತ ಎ ಬಿ ಪಾಟೀಲ್

nikhil katti winner the hukkeri constituency assembly election

ಬೆಂಗಳೂರು, ಕರ್ನಾಟಕ: ಹುಕ್ಕೇರಿ ಮತಕ್ಷೇತ್ರವು ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಹಲವು ಅವಧಿಗೆ ಈ ಕ್ಷೇತ್ರವನ್ನು ಉಮೇಶ್ ಕತ್ತಿ ಅವರು ಪ್ರತಿನಿಧಿಸಿದ್ದರು. ಈ ಬಾರಿ ಬಿಜೆಪಿಯು ನಿಖಿಲ್ ಕತ್ತಿ ಅವರಿಗೆ ಟಿಕೆಟ್ ನೀಡಿತ್ತು. ನಿಖಿಲ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಎ ಬಿ ಪಾಟೀಲ್ ವಿರುದ್ದ 42,487 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಾಟೀಲ್ ಅವರು 61,013 ಮತಗಳನ್ನು ಪಡೆದುಕೊಂಡರೆ, ನಿಖಿಲ್ ಅವರು 103500 ಮತಗಳನ್ನು ಸಂಪಾದಿಸಿದ್ದಾರೆ(Hukkeri Election Results).

2023ರ ಚುನಾವಣಾ ಅಭ್ಯರ್ಥಿಗಳು

ಬಿಜೆಪಿಯಿಂದ ನಿಖಿಲ್ ಕತ್ತಿ ಅವರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಎ ಬಿ ಪಾಟೀಲ್ ಅವರ ಕಣದಲ್ಲಿದ್ದಾರೆ. ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ಎ ಬಿ ಪಾಟೀಲ್ ಮತ್ತು ದಿವಂಗತ ಉಮೇಶ್ ಕತ್ತಿ ಅವರು ಮುಖಾಮುಖಿಯಾಗಿದ್ದರು. ಈ ಬಾರಿ ಜೆಡಿಎಸ್‌ನಿಂದ ಬಸವರಾಜ್ ಮಲಗೌಡ ಪಾಟೀಲ್ ಅವರು ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ; ಪ್ರದೀಪ್ ಈಶ್ವರ್ ರೋಡ್ ಶೋ, ಎಲ್ಲಿ ಹೋದ್ರು ಸುಧಾಕರ್​?

2018ರ ಚುನಾವಣೆ ಫಲಿತಾಂಶ ಏನಾಗಿತ್ತು?

ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಹುಕ್ಕೇರಿ ಕ್ಷೇತ್ರ ಕೂಡ ಒಂದು. ಕತ್ತಿ ಕುಟುಂಬದ ಹಿಡಿತ ಹೊಂದಿರುವ ಈ ಕ್ಷೇತ್ರದಲ್ಲಿ 2018ರಲ್ಲಿ ಉಮೇಶ್ ಕತ್ತಿ ಅವರು ಆಯ್ಕೆಯಾಗಿದ್ದರು. 83588 ಮತಗಳನ್ನು ಪಡೆದುಕೊಂಡ ಉಮೇಶ್ ಕತ್ತಿ ಅವರು ಕಾಂಗ್ರೆಸ್ ಪಕ್ಷದ ಅಪ್ಪಯ್ಯಗೌಡ ಬಸಗೌಡ ಪಾಟೀಲ್ ಅವರನ್ನು 15,385 ಮತಗಳಿಂದ ಸೋಲಿಸಿದ್ದರು. ಉಮೇಶ್ ಕತ್ತಿ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದಾರೆ.

Read more: Haveri Election Results: ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ವಿಜಯ

Exit mobile version