ಮಂಡ್ಯ: ಜಿಲ್ಲೆಯ ಮದ್ದೂರಿನ ಹೊಳೆಬೀದಿಯ ಮನೆಯಲ್ಲಿ ಮಹಿಳೆಯೊಬ್ಬರು ತನ್ನ ಮೂರು ಮಕ್ಕಳಿಗೆ ವಿಷ ಉಣಿಸಿ ತಾನೂ ನೇಣಿಗೆ ಶರಣಾದ (Mass suicide) ವಿದ್ಯಮಾನಕ್ಕೆ ಮಹಿಳೆಯ ಗಂಡನ ಆಕ್ರಮ ಸಂಬಂಧ, ಪರಸ್ತ್ರೀ ವ್ಯಾಮೋಹವೇ ಕಾರಣ ಎಂದು ತಿಳಿದುಬಂದಿದೆ.
ಕಾರು ಮೆಕ್ಯಾನಿಕ್ ಆಗಿರುವ ಅಖಿಲ್ ಅಹಮದ್ ಎಂಬವರ ಪತ್ನಿಯಾಗಿರುವ ಉಸ್ನಾ ಕೌಸರ್ (30 ವರ್ಷ) ಅವರೇ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡವರು. ಹ್ಯಾರಿಸ್ (೭), ಅಲೀಸಾ (4) ಅನಮ್ ಫಾತಿಮಾ (2) ಅಮ್ಮನೊಂದಿಗೆ ಪ್ರಾಣ ಕಳೆದುಕೊಂಡ ಪುಟಾಣಿಗಳು. ಕೌಸರ್ ಒಂದು ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದ ಅಖಿಲ್ ಅಹಮದ್‌ಗೆ ಬೇರೆ ಮಹಿಳೆಯ ಜತೆ ಸಂಬಂಧವಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ಕೌಸರ್ ಮತ್ತು ಗಂಡನ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು. ಈ ನಡುವೆ, ಬೇರೆ ಮಹಿಳೆಯ ಬೆತ್ತಲೆ ಚಿತ್ರ ಹಾಗೂ ಅಖಿಲ್ ಅಹಮದ್ ಇದ್ದ ಫೋಟೊಗಳು ಪತ್ತೆಯಾಗಿದ್ದವು. ಇದಾದ ಬಳಿಕ ಜಗಳ ಜೋರಾಗಿತ್ತು. ಎರಡೂ ಕಡೆಯವರು ಇವರಿಬ್ಬರ ನಡುವೆ ರಾಜೀ ಸಂಧಾನಕ್ಕೆ ಯತ್ನಿಸಿದ್ದರು. ಆಗ ಅಖಿಲ್ ಇನ್ನು ಮುಂದೆ ಬೇರೆ ಸಂಬಂಧ ಬಿಡುತ್ತೇನೆ ಎಂದು ಹೇಳಿದ್ದ.
ಈ ನಡುವೆ, ಗುರುವಾರ ಉರೂಸ್ ಹಿನ್ನೆಲೆಯಲ್ಲಿ ಮನೆಗೆ ಬೇಗ ಬರುತ್ತೇನೆ ಎಂದು ಹೇಳಿ ಹೋಗಿದ್ದ ಅಖಿಲ್. ಆದರೆ, ಬಂದಿರಲಿಲ್ಲ. ಇದರಿಂದ ಕೌಸರ್‌ಗೆ ಸಿಟ್ಟುಬಂದಿತ್ತು. ಬಳಿಕ ಕೌಸರ್ ಮತ್ತು ಅಖಿಲ್ ನಡುವೆ ಫೋನ್‌ನಲ್ಲಿ ಮತ್ತೆ ಜಗಳ ಮಾಡಿಕೊಂಡಿದ್ದಾರೆ.
ಗಂಡನ ಮಾತುಗಳಿಂದ ಬೇಸತ್ತ ಕೌಸರ್ ಕ್ಲಿನಿಕ್‌ನಿಂದ ಬಂದವಳೇ ಮಕ್ಕಳಿಗೆ ಅನ್ನದಲ್ಲಿ ವಿಷ ಹಾಕಿ ಬಳಿಕ ತಾನು ನೇಣಿಗೆ ಶರಣಾಗಿದ್ದಾನೆ. ಈ ನಡುವೆ ಅಖಿಲ್ ಅಹಮದ್‌ನೇ ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪ ಮಾಡಿದ್ದಾರೆ.
ಅಖಿಲ್ ಅಹಮದ್ ಹಾಗೂ ಕುಟುಂಬ ಈಗ ತಲೆಮರೆಸಿಕೊಂಡಿದೆ. ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Mass suicide | ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ನೇಣಿಗೆ ಶರಣಾದ ತಾಯಿ, ಮದ್ದೂರಿನಲ್ಲಿ ಘೋರ ದುರಂತ