Site icon Vistara News

Karnataka Election 2023: ನಾನು ಸಿಎಂ ರೇಸ್‌ನಲ್ಲಿ ಇಲ್ಲ; ಮುಖ್ಯಮಂತ್ರಿ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸಿದ್ದು, ಡಿಕೆಶಿಗೆ ಖರ್ಗೆ ಖಡಕ್‌ ವಾರ್ನಿಂಗ್

AICC president mallikarjun Kharge

ಕೋಲಾರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಯಾರೇ ಮುಖ್ಯಮಂತ್ರಿಯಾಗಲಿ, ನನಗೆ ಅದು ಬೇಕಿಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಾಯಕರು ಮುಖ್ಯಮಂತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಜನರ ಬಗ್ಗೆ ತಲೆಕೆಡಿಸಿಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ನಾಯಕರಿಗೆ ಖಡಕ್‌ ಸೂಚನೆಯನ್ನು ನೀಡಿದ್ದಾರೆ. ಈ ಮೂಲಕ ಪಕ್ಷವನ್ನು ಗೆಲ್ಲಿಸಿಕೊಂಡು ಬರುವಲ್ಲಿ ಶ್ರಮವಹಿಸಿ ಎಂಬ ಸಂದೇಶವನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಅಭಿಲಾಷೆ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಇನ್ನಿತರ ನಾಯಕರಿಗೆ ನೀಡಿದ್ದಾರೆ.

ಕೋಲಾರದಲ್ಲಿ ಏರ್ಪಡಿಸಲಾಗಿದ್ದ ಜೈ ಭಾರತ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯುವ ಕೆಲಸ ಆಗಬೇಕು. ನಾನಂತೂ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟ ಸಂದೇಶವನ್ನು ಪಕ್ಷದ ನಾಯಕರಿಗೆ ನೀಡಿದರು.

ಇದನ್ನೂ ಓದಿ: Karnataka Election 2023: ಪಕ್ಷ ಸ್ಥಾನಮಾನ ಕೊಟ್ಟಿದ್ದರೂ ಯಡಿಯೂರಪ್ಪ ಏಕೆ ಕೆಜೆಪಿ ಕಟ್ಟಿದ್ದರು: ಬಿಎಸ್‌ವೈಗೆ ಶೆಟ್ಟರ್‌ ತಿರುಗೇಟು

ಕೋಲಾರ ಬಂಗಾರದ ಜಿಲ್ಲೆಯಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ಕೆಸಿ ವ್ಯಾಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಈ ಭಾಗದ ನೂರಾರು ಕೆರೆಗಳು ತುಂಬಿವೆ. ಇದರಿಂದ ನೀರಾವರಿ ಕೃಷಿ ಆಗುತ್ತಿದೆ ಎಂದು ತಿಳಿಸಿದರು.

ಕೃಷ್ಣಪ್ಪ ಅವರ ಕಾಲದಲ್ಲಿ ಹಾಲಿನ ಡೈರಿಯನ್ನು ಶುರು ಮಾಡಲಾಗಿತ್ತು. ಕೋಲಾರ ಹಾಲು, ನೀರು, ರೇಷ್ಮೆ , ಬಂಗಾರಕ್ಕೆ ಪ್ರಸಿದ್ಧವಾಗಿದೆ. ಇಂತಹ ನಾಡಿನಿಂದ ಚುನಾವಣಾ ಪ್ರಚಾರವನ್ನು ಶುರು ಮಾಡುತ್ತಿದ್ದೇವೆ. ರಾಜ್ಯದಲ್ಲಿ ಜನರು 40 ಪರ್ಸೆಂಟ್‌ ಕಮಿಷನ್ ವಿರುದ್ಧ ಬೇಸತ್ತು ಬಿಜೆಪಿ ಬಿಟ್ಟು ಬಂದು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ಡಿಕೆಶಿ, ಸಿದ್ದರಾಮಯ್ಯಗೆ ಪರೋಕ್ಷವಾಗಿ ಖರ್ಗೆ ನೀಡಿದ ಸೂಚನೆ ಏನು?

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹೋದ ಕಡೆಯಲ್ಲೆಲ್ಲ ಕಾಂಗ್ರೆಸ್‌ಗೆ ಬೈದುಕೊಂಡು ಒಂಬತ್ತು ವರ್ಷಗಳ ಕಾಲ‌ ಕಳೆದರು. ಕಾಂಗ್ರೆಸ್‌ ನಾಯಕರ ಕಾಲದಲ್ಲಿ ಪಬ್ಲಿಕ್ ಸೆಕ್ಟರ್ ಬಂತು. ಆದರೆ, ಇವರು ಉದ್ಯಮಿ ಗೌತಮ್ ಅದಾನಿಗೆ ಅನುಕೂಲ ಮಾಡಿಕೊಟ್ಟರು. ಇನ್ನು ಅದಾನಿ ಆದಾಯ ಹೇಗೆ ಹೆಚ್ಚಳ ಆಯಿತು? ಮೋದಿಯವರೇ ನೀವು ಹೊರಗಡೆ ಹೋದಾಗ ನಿಮ್ಮನ್ನು ಅದಾನಿ ಎಲ್ಲೆಲ್ಲಿ ಭೇಟಿಯಾಗಿದ್ದರು? ಪಾರ್ಲಿಮೆಂಟ್‌ನಲ್ಲಿ 1 ಗಂಟೆಗೆ 28 ನಿಮಿಷಗಳ ಮಾತನಾಡಿದ್ದೆ. ಬಿಜೆಪಿ ಸಂಸದರು ಗಲಾಟೆ ಮಾಡಿದರು. ಮೋದಿ ಅಲ್ಲಿಯೇ ಕುಳಿತು, ತಮ್ಮ ಸಂಸದರಿಗೆ ಗಲಾಟೆ ಮಾಡಬೇಡಿ, ಸುಮ್ಮನೆ ಇರಿ ಎಂದು ಹೇಳಿಲ್ಲ ಎಂದು ಹೇಳಿದರು.

ರಾಹುಲ್‌ ಗಾಂಧಿ ಮನೆ ಕಿತ್ತುಕೊಂಡರು

ಇದೇ ಕೋಲಾರದಲ್ಲಿ ರಾಹುಲ್‌ ಗಾಂಧಿಯವರು ಮಾತನಾಡಿದ್ದರು. ಆದರೆ, ಈ ಬಗ್ಗೆ ಗುಜರಾತ್‌ನಲ್ಲಿ ಎಫ್‌ಐಆರ್ ಹಾಕಲಾಯಿತು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುತ್ತಿದ್ದಂತೆ 24 ಗಂಟೆಯಲ್ಲಿ ರಾಹುಲ್‌ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಲಾಯಿತು. ಮನೆ, ಟೆಲಿಫೋನ್ ಎಲ್ಲವನ್ನೂ ಕಿತ್ತುಕೊಂಡರು ಎಂದು ಖರ್ಗೆ ಕಿಡಿಕಾರಿದರು.

ಇದನ್ನೂ ಓದಿ: Karnataka Election 2023: ಚಾಮರಾಜನಗರ ಬಂಡಾಯ ಶಮನಗೊಳಿಸಿದ ಬಿ.ಎಲ್‌. ಸಂತೋಷ್‌; ಸೋಮಣ್ಣಗೆ ಬೆಂಬಲ ಘೋಷಿಸಿದ ನಾಗಶ್ರೀ

ಜಗತ್ತಿನಲ್ಲಿಯೇ ಐತಿಹಾಸಿಕ ಕಾರ್ಯಕ್ರಮ

ರಾಹುಲ್ ಗಾಂಧಿ ಧೈರ್ಯವಾಗಿ ಮಾತನಾಡುತ್ತಾರೆ. ದೇಶದಲ್ಲಿ ಯಾರಾದರೂ ಧೈರ್ಯವಾಗಿ ಮಾತನಾಡುತ್ತಿದ್ದಾರೆಂದರೆ ಅದು ರಾಹುಲ್ ಗಾಂಧಿ ಮಾತ್ರ. ಪಾರ್ಲಿಮೆಂಟ್‌ನಲ್ಲಿ ಆಡಳಿತ ಪಕ್ಷದವರ ತಲೆಕೆಳಗಾಗುವಂತೆ ಮಾತನಾಡುತ್ತಾರೆ. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸಿದರು. ರೈತರು, ಮಹಿಳೆಯರು, ಪತ್ರಕರ್ತರು, ಯುವಕರನ್ನು ಭೇಟಿ ಮಾಡಿದ್ದಾರೆ. ಇದು ದೇಶದಲ್ಲಷ್ಟೇ ಅಲ್ಲ, ಜಗತ್ತಿನಲ್ಲಿಯೇ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

Exit mobile version