ಬಳ್ಳಾರಿ, ಕರ್ನಾಟಕ: ಬಳ್ಳಾರಿ ಮೋತಿ ಸರ್ಕಲ್‌ನಲ್ಲಿ ಕಾಂಗ್ರೆಸ್ (Congress) ಬಹಿರಂಗ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರು ತಮ್ಮ ಮಾತುಗಳ ಮೂಲಕ ಅಲ್ಲಿ ನೆರೆದಿದ್ದ ಸಾವಿರಾರು ಜನರ ಮನಸ್ಸು ಗೆದ್ದರು. ”ದ್ವೇಷದ ಮಾರುಕಟ್ಡೆಯಲ್ಲಿ, ಪ್ರೀತಿಯ ಅಂಗಡಿಯನ್ನು ಓಪನ್ ಮಾಡಲು ಬಂದಿದ್ದೇನೆ,” ಎಂಬ ರಾಹುಲ್ ಗಾಂಧಿ (Rahul Gandhi) ಅವರ ಮಾತಿಗೆ ನೆರೆದಿದ್ದ ಜನರು ತಲೆದೂಗಿದರು. ಬಿಜೆಪಿ ಶಾಸಕರ ವ್ಯಾಪಾರ ಮಾಡಿ ಸರ್ಕಾರ ಕಿತ್ತುಕೊಂಡಿದ್ದರು. ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ. ಅವರಿಗೆ 40 ಸಂಖ್ಯೆ ಭಾರೀ ಇಷ್ಟು. ಅವರನ್ನು 40 ಶಾಸಕರಿಗಷ್ಟೇ ನಿಲ್ಲಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದರು(Karnataka Election 2023).
ಭಾರತ ಜೋಡೋ ಯಾತ್ರೆಯಲ್ಲಿ ಬಳ್ಳಾರಿ ಜನರು ಶಕ್ತಿ ತುಂಬಿದ್ದೀರಿ. ಸರಕಾರ ಬಂದ ಮೇಲೆ ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ಆದ್ಯತೆ ಕೊಡುತ್ತೇವೆ. ಬೇರೆಯವರಂತೆ ನಾನಲ್ಲ, ನಾನು ಏನು ಹೇಳುತ್ತೇನೆ, ಅದನ್ನೆ ಮಾಡುತ್ತೇನೆ. ಮೋದಿಯವರು ಹೋದಲ್ಲಿ ಸುಳ್ಳು ಹೇಳ್ತಾರೆ, ನಾನು ಸುಳ್ಳು ಹೇಳಲ್ಲ. ಸುಳ್ಳು ಮತ್ತು ಪೊಳ್ಳು ಭರವಸೆಯನ್ನು ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ಜೆ ಕೊಟ್ಟಿರುವುದು ನಾವೇ. ಅದು ಬಿಜೆಪಿ ಮಾಡಿಲ್ಲ. ಈ ವಿಶೇಷ ಸ್ಥಾನಮಾನದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಬಳ್ಳಾರಿಯಲ್ಕಿ ಅಪೆರಲ್ ಪಾರ್ಕ್ ಮತ್ತು ಜೀನ್ಸ್ ಸೆಂಟರ್ ಗೆ ಬಜೆಟ್ ನಲ್ಲಿ 5000 ಸಾವಿರ ಕೋಟಿ ಮೀಸಲು ಇಡುತ್ತೇವೆ ಎಂದು ರಾಹುಲ್ ಗಾಂಧಿ ಅವರ ಭರವಸೆ ನೀಡಿದರು.
ಸಭೆಯಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಅಲ್ಲಂ ವೀರಭದ್ರಪ್ಪ, ನಗರ ಅಭ್ಯರ್ಥಿ ನಾರಾ ಭಾರತರೆಡ್ಡಿ, ಗ್ರಾಮೀಣ ಅಭ್ಯರ್ಥಿ ಬಿ.ನಾಗೇಂದ್ರ, ಸಿರುಗುಪ್ಪ ಅಭ್ಯರ್ಥಿ ಬಿ.ಎಂ.ನಾಗರಾಜ್ ಇದ್ದರು.
ಇದನ್ನೂ ಓದಿ: Rahul Gandhi: ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ; ಸತ್ಯ ಹೇಳಿದ್ದಕ್ಕೆ ಮನೆಬಿಡಬೇಕಾಯಿತು ಎಂದ ಕಾಂಗ್ರೆಸ್ ನಾಯಕ!
ಮಳೆಯಲ್ಲೇ ಭಾಷಣ ಕೇಳಿದ ಜನ, ನಮಾಜ್ ವೇಳೆ ಮಾತು ನಿಲ್ಲಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲು ಆರಂಭಿಸುತ್ತಿದ್ದಂತೆ ಮಳೆ ಸುರಿಯಲಾರಂಭಿಸಿತೆ. ಇದೇ ವೇಳೆ, ಮಸೀದಿಯಿಂದ ನಮಾಜ್ ಕೂಡ ಕೇಳಿಸುತ್ತಿದಂತೆ ರಾಹುಲ್ ಗಾಂಧಿ ತಮ್ಮ ಮಾತುಗಳನ್ನು ನಿಲ್ಲಿಸಿದರು. ತಲಾಪ್ ಕಟ್ಟ ಮಸೀದಿಯಿಂದ ಮಗ್ರಿಬ್ ಅಜಾನ್ ಟೈಮ್ ನಲ್ಲಿ ಭಾಷಣ ನಿಲ್ಲಿಸಿದರು. ಆ ಮೂಲಕ ನೆರೆದ ಮುಸ್ಲಿಂ ಬಾಂಧವರ ಮೆಚ್ಚುಗೆಗೆ ಪಾತ್ರರಾದರು. ಮಳೆಯಲ್ಲಿಯೇ ನಿಂತು ಭಾಷಣ ಕೇಳಿದ ಜನರು. ರಾಹುಲ್ ಗಾಂಧಿ ಕೊನೆಗೆ ಧನ್ಯವಾದ ಹೇಳಿದರು.