ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ನನಗಿಂತ ಹೆಚ್ಚು ಅವಕಾಶವನ್ನು ಪಕ್ಷ ಕೊಟ್ಟಿದೆ. ಸತತವಾಗಿ 32 ವರ್ಷಗಳ ಕಾಲ ಈಶ್ವರಪ್ಪ ಅವರಿಗೆ ಅವಕಾಶ ಕೊಡಲಾಗಿದೆ. ಅವರ ಬಗ್ಗೆ ನಾನು ಯಾವುದೇ ಟೀಕೆ ಮಾಡಲಾರೆ. ನನಗಿಂತ ಅನೇಕ ಜನರು ಅರ್ಹರು ಇದ್ದಾರೆ. ಆದರೆ, ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ತಮ್ಮ ಬದಲು ಮಗನಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದಾಗ ನಾನು ಕೇಳಿದ್ದೇನೆ. ಅವರ ಮಗನಿಗಿಂತ ಹೆಚ್ಚು ಅರ್ಹತೆ ನನಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆಯವರಂತೆ ಲಜ್ಜೆ, ನಾಚಿಕೆ ಬಿಡದೆ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇನೆ. ಒಂದೇ ಒಂದು ಆಪಾದನೆ ನನ್ನ ಮೇಲೆ ಇಲ್ಲ. ಈಗ ನಾನು ನಂತರ ನನ್ನ ಸಂತತಿ ಅನ್ನೋದು ಸರಿಯಲ್ಲ. ಅದನ್ನು ಖಂಡಿಸಿ ನಾನು ರಂಗ ಪ್ರವೇಶ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Vastu Tips : ಕಚೇರಿಯ ವಾಸ್ತು ಹೀಗಿದ್ದರೆ ಯಶಸ್ಸು ಖಚಿತವಂತೆ!
ಸೀಟ್ ಕೇಳಿದರೆ ಇಷ್ಟು ಸಿಟ್ಟಾ?
ಸೀಟ್ ಕೇಳಿದರೆ ಇಷ್ಟೊಂದು ಆಕ್ರೋಶ ವ್ಯಕ್ತಪಡಿಸುತ್ತಾರಾ? ಅದೂ ಕೆಳಮಟ್ಟದ ಪ್ರತಿಕ್ರಿಯೆಯನ್ನು ನೀಡುತ್ತಾರಾ? ಸೀಟ್ ಕೇಳುವ ಅರ್ಹತೆ ನನಗೆ ಇಲ್ಲವೇ? ಕಾಂಗ್ರೆಸ್ ಗಟ್ಟಿ ನೆಲ ಹೊಸನಗರದಲ್ಲಿ ಬಿಜೆಪಿ ಧ್ವಜ ಹಾರಿಸಿದ ಹೆಮ್ಮೆ ನನಗಿದೆ. ಬಂಗಾರಪ್ಪ ವಿರುದ್ಧ ಗೆಲುವು ಸಾಧಿಸಿದ ಹೆಮ್ಮೆ ನನಗಿದೆ. ಸವಾಲು ಇದ್ದಲ್ಲಿ ಹೋರಾಡಿ ಗೆದ್ದು ಬಂದಿದ್ದೇನೆ. ಯಾವುದೇ ಆಯಕಟ್ಟಿನ ಸುರಕ್ಷಿತ ಸ್ಥಳ ನೋಡಿ ನಾನಿಲ್ಲ. ಗೂಟ ಹೊಡೆದುಕೊಂಡು ಕೂತಿಲ್ಲ ಎಂದು ಈಶ್ವರಪ್ಪ ಅವರ ಹೆಸರು ಹೇಳದೆ ತಿವಿದರು.
ನನಗೇ ಟಿಕೆಟ್ ಸಿಗಲಿದೆ
ನಾನು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಕೊಡುವ ಅಧಿಕಾರ ಇರುವ ಪಕ್ಷದ ಎಲ್ಲರನ್ನೂ ನಾನು ಭೇಟಿಯಾಗಿದ್ದೇನೆ. ನನಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಮೋದಿಯ ಆಶಯಕ್ಕೆ ತಕ್ಕಂತೆ ಮಾತನಾಡುವ ನನಗೆ ಟಿಕೆಟ್ ಸಿಗಲಿದೆ. ನನಗಲ್ಲದೆ ಬೇರೆಯವರಿಗೆ ಟಿಕೆಟ್ ಕೊಟ್ಟರೆ ತಾತ್ವಿಕವಾಗಿ ವಿರೋಧಿಸುತ್ತೇನೆ. ಚುಕ್ಕೆ ರಹಿತ ನನ್ನನ್ನು ಪಕ್ಷ ಗುರುತಿಸುತ್ತದೆ. ಕಪ್ಪು ಚುಕ್ಕೆ ಹೊಂದಿದವರನ್ನಲ್ಲ ಅನ್ನುವ ಭರವಸೆ ಇದೆ. ಟೀಕೆ ಮಾಡುವವರು ಬಿಜೆಪಿ ಅನುಯಾಯಿಗಳು ಅಲ್ಲ. ಅವರು ಯಾರದ್ದೋ ಅನುಯಾಯಿಗಳು ಅನ್ನಿಸುತ್ತದೆ. ಇನ್ನೊಬ್ಬರಿಗೆ ಎಂಎಲ್ಸಿ ಕೊಟ್ಟು ಮಂತ್ರಿ ಮಾಡಲಿ. ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.
ನನ್ನ ಫ್ಲೆಕ್ಸ್ ಗಮನ ಸೆಳೆದಿದೆ
ನಾನು ಹಾಕಿರುವ ಫ್ಲೆಕ್ಸ್ ನಿರೀಕ್ಷೆಗೆ ಮೀರಿ ಎಲ್ಲರ ಗಮನ ಸೆಳೆದಿದೆ. ಅದನ್ನು ನೋಡಿ ಹಲವರು ಕಮೆಂಟ್ ಮಾಡಿದ್ದಾರೆ. ಅದನ್ನು ಸ್ವಾಗತ ಮಾಡಿ ಶಿವಮೊಗ್ಗದಲ್ಲಿ ಶಾಂತಿ ಬೇಕು ಅಂತ ಹೇಳಿದ್ದಾರೆ. ನನ್ನ ಮಾತು ಸರಿಯಾಗಿದೆ ಎಂಬುದು ಜನರ ಪ್ರತಿಕ್ರಿಯೆಯಿಂದ ಗೊತ್ತಾಗಿದೆ. ನಾನು ಸರಿಯಾದ ಹೆಜ್ಜೆ ಇಟ್ಟಿದ್ದೇನೆ ಎಂಬುದು ತಿಳಿದಿದೆ. ಜನರ ನಾಡಿಮಿಡಿತದ ಧ್ವನಿಯಾಗಿ ರಾಜ್ಯದ ಗಮನ ಸೆಳೆದಿದೆ. ಆದರೆ, ಅದು ಯಾರ ವಿರುದ್ಧವೂ ಆಗಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಇದನ್ನೂ ಓದಿ: Google service down : ಗೂಗಲ್ ಸೇವೆಯಲ್ಲಿ ವ್ಯತ್ಯಯ, ಯೂಟ್ಯೂಬ್, ಡ್ರೈವ್, ಜಿಮೇಲ್‌ಗೆ ಅಡಚಣೆ, ಬಳಕೆದಾರರ ಪರದಾಟ
ಬೇರೆಯವರಿಗೆ ಟಿಕೆಟ್ ಕೊಟ್ಟರೆ ನನ್ನ ವಿರೋಧ
ನಿತ್ಯಸಮಂಗಲಿಯ ನಾಯಕನಾಗಲು ತಯಾರಿದ್ದೇನೆ
ಶಿವಮೊಗ್ಗ ಶಾಂತಿಯಿಂದ ಇರಬೇಕು. ಕೆಲವರ ಹಿತಾಸಕ್ತಿಗಾಗಿ ಶಿವಮೊಗ್ಗ ಸ್ಪಂದಿಸದಿರಲಿ. ಆ ಆಶಯವನ್ನು ಬ್ಯಾನರ್‌ನಲ್ಲಿ ವ್ಯಕ್ತಪಡಿಸಿದ್ದೇನೆ. ಕೆಲವರು ನನ್ನ ಶುಭಾಶಯಕ್ಕೆ ಟೀಕೆಯನ್ನೂ ಮಾಡಿದ್ದಾರೆ. ನನ್ನ ನಿಲುವನ್ನು ವಿರೋಧಿಸಿದವರೂ ಇದ್ದಾರೆ. ಕೆಲವರು ಅದನ್ನು ಮನೋರಂಜನೆಯಾಗಿ ನೋಡಿದ್ದಾರೆ. ನಾನು ಅಧಿಕಾರದ ನಿತ್ಯ ಸುಮಂಗಲಿ ಅಂದಿದ್ದಾರೆ. ಸತ್ಯ ಹೇಳಿದವನನ್ನು ಅಷ್ಟೊಂದು ಕೀಳು ಮಟ್ಟಕ್ಕೆ ಇಳಿಸುವುದೇ? ನಿತ್ಯ ಸುಮಂಗಲಿ ಆಗಲು, ನಿತ್ಯಸಮಂಗಲಿಯ ನಾಯಕನಾಗಲು ತಯಾರಿದ್ದೇನೆ. ಯಾರೋ ನಾಯಕನನ್ನು ಮೆಚ್ಚಿಸಲು ಶ್ವಾನದ ಬಾಲದಂತೆ ಅಲ್ಲಾಡಿಸುತ್ತಿದ್ದಾರೆ ಎಂದು ಆಯನೂರು ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ವಿಚಾರವಾಗಿ ಆಯನೂರು ಮಂಜುನಾಥ್ ಹೇಳಿದ್ದೇನು?
ಶಿವಮೊಗ್ಗ ಏರ್ಪೋರ್ಟ್ ನಾನು ಬಿತ್ತಿದ್ದ ಬೀಜ
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ನಾನು ಕನಸನ್ನು ಕಂಡಿದ್ದೆ. ಇದು ನಾನು ಬಿತ್ತಿದ್ದ ಬೀಜ. ಅನಂತ್ ಕುಮಾರ್ ಸಚಿವರಾಗಿದ್ದಾಗ ಇದಕ್ಕೆ ಚಾಲನೆ ಸಿಕ್ಕಿತು. ಆದರೆ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ನನ್ನ ವೇಗಕ್ಕೆ ತಡೆಯೊಡ್ಡಿತು. ವಿಐಎಸ್ಎಲ್ ಸೇಲ್ ಆಡಳಿತಕ್ಕೆ ಒಳಪಟ್ಟಿದ್ದು ನಾನು ಸಂಸದನಾಗಿದ್ದಾಗ. ನನ್ನ ಬಗ್ಗೆ ಗೊತ್ತಿಲ್ಲದವರು ಬಿಸ್ಕೆಟ್‌ಗಾಗಿ ಮಾತನಾಡುತ್ತಿದ್ದಾರೆ. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬಿಂಬಿಸಬೇಡಿ. ಪ್ರಧಾನಿ ನರೇಂದ್ರ ಮೋದಿ ಜಿಂದಾಬಾದ್ ಅಂದರೆ ಸಾಲದು. ಅವರ ಹೇಳಿಕೆ ವಿರುದ್ಧವಾಗಿ ನಡೆದುಕೊಳ್ಳುವುದು ತಪ್ಪಲ್ಲವೇ? ಎಲ್ಲ ಬಾಂಧವರೂ ಒಟ್ಟಾಗಿ ಇರಬೇಕು ಅಂತ ಮೋದಿ ಹೇಳಿದ್ದಾರೆ. ಸರಸಂಘ ಚಾಲಕರು ಕೂಡ ಅದನ್ನೇ ಹೇಳಿದ್ದಾರೆ. ಅದರ ವಿರುದ್ಧವಾಗಿ ಶಿವಮೊಗ್ಗದಲ್ಲಿ ನಡೆಸಿಕೊಂಡಾಗ ಖಂಡಿಸಿದ್ದೇನೆ. ಸಾಮಾಜಿಕ ಜಾಲತಾಣದ ದಾಳಿಯನ್ನು ನಾನು ಎದುರಿಸುತ್ತೇನೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಜಾತಿ ಜಾತಿಗಳ ಮೆರವಣಿಗೆ ಆಗಬಾರದು. ಸಚಿವರೇ ಹೋಗಿ ಮನವಿ ಕೊಡುವುದು. ಸರ್ಕಾರವೇ ಮನವಿ ಪಡೆಯುವುದು. ಇದು ಸಂವಿಧಾನ ವಿರೋಧಿ ಅಲ್ಲವೇ? ಈ ಬಗ್ಗೆ ಸದನದಲ್ಲಿ ನಾನು ಹೇಳಿದ್ದೇನೆ. ಅಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಅಂದಿನ ಗೃಹ ಮಂತ್ರಿ, ಇಂದಿನ ಸಿಎಂ ನನ್ನ ಮಾತನ್ನು ಪುರಸ್ಕರಿಸಿದ್ದರು. ನಾನು ಗುಂಪು ಕಟ್ಟಿಕೊಂಡಿಲ್ಲ. ಹೀಗಾಗಿ ಏಕಾಂಗಿ ಸುದ್ದಿಗೋಷ್ಠಿ ಮಾಡಿದ್ದೇನೆ. ಮೋದಿ, ಸರಸಂಘಚಾಲಕರ ಆಶಯವನ್ನು ಪ್ರತಿಪಾದಿಸಿದ್ದೇನೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗ ಏರ್ಪೋರ್ಟ್ ಬಗ್ಗೆ ಆಯನೂರು ಮಾತು
ಇದನ್ನೂ ಓದಿ: Shravanabelagola Swameeji : ಶ್ರೀಗಳ ನಿಧನಕ್ಕೆ ಹೃದಯಾಘಾತ ಕಾರಣವಲ್ಲ, ನಿಜವಾದ ಕಾರಣ ಹೇಳಿದ ಜಿಲ್ಲಾಧಿಕಾರಿ
ಧರ್ಮ ಮೀರುವವನು ಅಚ್ಛಾ ಮುಸಲ್ಮಾನನೂ ಅಲ್ಲ, ಹಿಂದುವೂ ಅಲ್ಲ
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಕರೆ ಮಾಡಿದ್ದರು. ಅದೇನು ಮಾತುಕತೆ ನಡೆದಿದೆ ಎಂಬುದು ಇಲ್ಲಿ ಬೇಡ. ನಾನು ನನಗೆ ಟಿಕೆಟ್ ಕೇಳಿದ್ದೇನೆ, ನನ್ನ ಮಗನಿಗಲ್ಲ. ಆಜಾನ್ ಕೂಗಲು ಒಂದು ಜಾಗವಿದೆ. ಅದಕ್ಕೂ ಒಂದು ನೀತಿ ನಿಯಮ ಇದೆ. ಡಿಸಿ ಕಚೇರಿಯಲ್ಲಿ ಆಜಾನ್ ಕೂಗಿದ್ದೂ ಹರಕುಬಾಯಿ. ಧರ್ಮ ಮೀರಿ ಹೋಗುವವನು ಅಚ್ಛಾ ಮುಸಲ್ಮಾನನೂ ಅಲ್ಲ, ಹಿಂದುವೂ ಅಲ್ಲ. ಅವನೊಬ್ಬ ಕಚ್ಚಾ ಮನುಷ್ಯ ಎಂದು ಹೇಳಿದರು.