ವಿಜಯನಗರ: ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ವಿಚಾರದಲ್ಲಿ ಅವರ ಸಹೋದರ, ಶಾಸಕ ಕರುಣಾಕರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ʼಅದಕ್ಕೆ ನಾನೇನು ಮಾಡಲಿ?ʼ ಎಂದು ಮರುಪ್ರಶ್ನಿಸಿದ್ದಾರೆ.
ಜನಾರ್ದನ ರೆಡ್ಡಿ ಪಕ್ಷ ಕಟ್ಟಿದ್ರೆ ನಾನೇನು ಮಾಡಲಿ? ಅವರ ಹೊಸ ಪಕ್ಷ ನನಗೇನು ಸಂಬಂಧ? ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ ಕರುಣಾಕರ ರೆಡ್ಡಿ. ರೆಡ್ಡಿ ಜೊತೆಗೆ ಹೋಗ್ತೀರಾ ಅನ್ನುವ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿಲ್ಲ. ʼನಾನು 25 ವರ್ಷದಿಂದ ಬಿಜೆಪಿಯಲ್ಲಿದ್ದೇನೆ. ಅದೇ ಉತ್ತರʼ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | Janardhan Reddy | ಜನಾರ್ದನ ರೆಡ್ಡಿ ಎಂಟ್ರಿಗೆ ಗಂಗಾವತಿಯಲ್ಲಿ ಗಡಗಡ: ಹೊಸ ಪಕ್ಷಕ್ಕೆ ರಾಜ್ಯ ಬಿಜೆಪಿ ನಾಯಕರ ಪ್ರತಿಕ್ರಿಯೆಗಳು ಇಲ್ಲಿವೆ