ಮೈಸೂರು: ವಿಧಾನಸೌಧವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬ್ಯಾಂಕ್ ಎಂದು ಹೇಳುವ ಮೂಲಕ ಅಪಮಾನ ಮಾಡಿದ್ದಾರೆ ಎಂಬ ಕೂಗು ಕೇಳಿಬಂದಿದೆ. ಮೂರು ದಿನಗಳ ಹಿಂದೆ ವಿಧಾನಸೌಧದಲ್ಲಿ ಸಹಾಯಕ ಎಂಜಿನಿಯರ್ ಜಗದೀಶ್ ದಾಖಲೆ ಇಲ್ಲದ (Illegal cash found) ೧೦.೫ ಲಕ್ಷ ರೂಪಾಯಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಸಿಎಂ, ವಿಧಾನಸೌಧವನ್ನು ಕಾಂಗ್ರೆಸ್ ಬ್ಯಾಂಕ್ ರೀತಿಯಾಗಿ ಮಾಡಿಕೊಂಡಿತ್ತು. ಆ ಮೂಲಕ ಅದು ಭ್ರಷ್ಟಾಚಾರದ ಸೌಧ ಆಗಿತ್ತು ಎಂದು ಹೇಳಿದ್ದಾರೆ.
ವಿಧಾನಸೌಧ ಗೇಟ್ ಬಳಿ ಜಗದೀಶ್ ಬಳಿ ಪತ್ತೆಯಾಗಿದ್ದ ಹಣಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷಗಳು ಮುಗಿಬಿದ್ದಿದ್ದಲ್ಲದೆ, ೪೦ ಪರ್ಸೆಂಟ್ ಸರ್ಕಾರ ಎಂಬ ಆರೋಪಕ್ಕೆ ಇದೇ ಸಾಕ್ಷಿ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ವಿಧಾನಸೌಧವು ಕಾಂಗ್ರೆಸ್ ಬ್ಯಾಂಕ್ ಆಗಿತ್ತು. 2018ರಲ್ಲೇ ಭ್ರಷ್ಟಾಚಾರದ ಸೌಧವಾಗಿತ್ತು. ಆಗಿನ ಸಚಿವ ಪುಟ್ಟರಂಗ ಶೆಟ್ಟಿ ಅವರ ಕೊಠಡಿಯಲ್ಲಿ ಸಿಕ್ಕಿದ್ದ 25 ಲಕ್ಷ ರೂಪಾಯಿ ಸಿಕ್ಕಿತ್ತು. ಅದರ ಕತೆ ಏನಾಗಿದೆ ಎಂದು ಸುದ್ದಿಗಾರರಿಗೆ ಪ್ರಶ್ನೆ ಮಾಡಿದರು.
ಪುಟ್ಟರಂಗ ಶೆಟ್ಟಿ ಅವರ ಕೊಠಡಿಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ತನಿಖೆಯನ್ನೇ ಮಾಡಲಾಗಿಲ್ಲ. ಆ ಪ್ರಕರಣವನ್ನು ಹಾಗೆಯೇ ಮುಚ್ಚಿ ಹಾಕಲಾಗಿದೆ. ಈಗ ಅವರೆಲ್ಲರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ | Sania Mirza | ದುಬೈ ಚಾಂಪಿಯನ್ಶಿಪ್ ಬಳಿಕ ಸಾನಿಯಾ ಮಿರ್ಜಾ ಟೆನಿಸ್ಗೆ ವಿದಾಯ!