ಚಿಕ್ಕಬಳ್ಳಾಪುರ: ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ಇತ್ತೀಚೆಗೆ ನಡೆದ ನಾಗಪೂಜೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಜೀವಂತ ಹಾವು ಹಿಡಿದು ಪೂಜೆ ಸಲ್ಲಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಅವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಾಗಿದೆ.
ಚಿಕ್ಕಬಳ್ಳಾಪುರದ ಉರಗ ಪ್ರೇಮಿ ಪೃಥ್ವಿರಾಜ್ ಎನ್ನುವವರು ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರು ಹಾವನ್ನು ಯಾವುದೇ ಅನುಮತಿ ಪಡೆಯದೆ ಪೂಜೆಯಲ್ಲಿ ಬಳಕೆ ಮಾಡಿದ್ದಲ್ಲದೆ, ಅದನ್ನು ಕೈಯಲ್ಲಿ ಹಿಡಿದು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಜೀವಂತ ಹಾವನ್ನು ಲಕ್ಷಾಂತರ ಜನರ ಮಧ್ಯೆ ಜಗ್ಗಿ ವಾಸುದೇವ್ ಪೂಜೆಗೆ ಬಳಸುವುದರಿಂದ ಅದನ್ನು ಸ್ಫೂರ್ತಿಯಾಗಿ ಪಡೆದ ಭಕ್ತರು ಹಾವುಗಳಿಗೆ ಹಿಂಸೆ ಕೊಡುವ ಸಾಧ್ಯತೆ ಬಗ್ಗೆ ಕಳವಳ ವ್ಯಕ್ತವಾಗಿದೆ.
ಇದನ್ನೂ ಓದಿ | Murugha Sree case | ಅಡುಗೆ ಸಹಾಯಕಿ, ಮಕ್ಕಳು ನಾಳೆ ಚಿತ್ರದುರ್ಗಕ್ಕೆ, ಶ್ರೀಗಳ ಪದತ್ಯಾಗಕ್ಕೆ ಹೆಚ್ಚಿದ ಒತ್ತಡ