Site icon Vistara News

Independence Day | ಕಲಘಟಗಿಯಲ್ಲಿ ಬೃಹತ್ ತಿರಂಗಾ ಜಾಥಾ; 9 ಕಿ.ಮೀ. ಧ್ವಜ ಹಿಡಿದ ಜನಸಾಗರ!

Independence Day

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಬೃಹತ್ ತಿರಂಗಾ ಜಾಥಾ ನಡೆದಿದ್ದು, ಒಂಭತ್ತು ಕಿಲೋಮೀಟರ್ ಧ್ವಜ ಹಿಡಿದ ನಾಗರಿಕರು ಬೃಹತ್‌ ಮೆರವಣಿಗೆ ನಡೆಸಿದರು. ಇಡೀ ರಸ್ತೆಗೆ ರಸ್ತೆಯೇ ಜನಸಾಗರದ ನಡುವೆ ತುಂಬಿ ಹೋಗಿತ್ತು. ತಿರಂಗಾ ಯಾತ್ರೆಯ ಜಾತ್ರೆ ನೆರವೇರಿತ್ತು.

ವಿಶ್ವ ದಾಖಲೆಯತ್ತ ಹೆಜ್ಜೆ ಹಾಕಿದ ಜನಸ್ತೋಮ

ವಿಶ್ವ ದಾಖಲೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಸಂಕಲ್ಪವನ್ನು ತೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೊಂದು ಐತಿಹಾಸಿಕ ದಾಖಲೆ ಕಾರ್ಯಕ್ರಮವಾಗಿದೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್ ಕಲಘಟಗಿಯಲ್ಲಿ ಹೇಳಿದ್ದಾರೆ.

40 ಸಾವಿರಕ್ಕೂ ಹೆಚ್ಚು ಜನ ಭಾಗಿ

ಈ ಬೃಹತ್‌ ಜಾಥಾದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ನಾಗರಿಕರು ಭಾಗಿಯಾಗಿದ್ದಾರೆ. 9 ಕಿ.ಮೀ. ಉದ್ದದ ಧ್ವಜವನ್ನು ಹಿಡಿದು ರಸ್ತೆಯುದ್ದಕ್ಕೂ ಜನಸಾಗರ ಸಾಗಿತ್ತು. ಈ ವೇಳೆ 30೦ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗಿಯಾಗಿದ್ದರೆ, 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭ ಹೊತ್ತು ಮೆರವಣಿಗೆಗೆ ಮತ್ತಷ್ಟು ಮೆರಗು ತಂದರು.

9 ಕಿಲೋ ಮೀಟರ್ ಉದ್ದಕ್ಕೆ ಸುಮಾರು 6 ವೇದಿಕೆಗಳ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ವೇದಿಕೆಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಲಘಟಗಿ ಇತಿಹಾಸದಲ್ಲಿಯೇ ಇದೊಂದು ವಿಭಿನ್ನ ಪ್ರಯತ್ನವಾಗಿದೆ. ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಬ್ರಿಡ್ಜ್‌ನಿಂದ ತಿರಂಗಾ ಯಾತ್ರೆ ಪ್ರಾರಂಭವಾಗಿ 9 ಕಿ.ಮೀ. ದೂರದ ಗಳಗಿನಗಟ್ಟಿ ಕ್ರಾಸ್‌ವರೆಗೆ ಯಶಸ್ವಿಯಾಗಿ ನಡೆಯಿತು.

ಇದನ್ನೂ ಓದಿ | Independence Day | ಯಾದಗಿರಿಯಲ್ಲಿ ಕೆರೆ ದಡದ ಮೇಲೆ ಹಾರಿದ ತ್ರಿರ್ವಣ ಧ್ವಜ!

Exit mobile version