Site icon Vistara News

Indi election Results: ಇಂಡಿ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ್‌

yashwantray gouda patil won indi constituency

2023ರ ಚುನಾವಣೆಯ ಅಭ್ಯರ್ಥಿಗಳು

ಬೆಂಗಳೂರು, ಕರ್ನಾಟಕ: ಕಾಂಗ್ರೆಸ್‌ನ ಹಾಲಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು 10,109 ಮತಗಳ ಅಂತರದಲ್ಲಿ ಮತ್ತೆ ಗೆಲುವು ಕಂಡಿದ್ದಾರೆ. ಜೆಡಿಎಸ್ ಬಿ ಡಿ ಪಾಟೀಲ್ 60658 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದರೆ, ಬಿಜೆಪಿಯ ಅಭ್ಯರ್ಥಿ 39367 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಯಶವಂತರಾಯ ಗೌಡ ಪಾಟೀಲ್ ಅವರಿಗೆ 70767 ಮತಗಳು ಬಂದಿವೆ(Indi election Results).

2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?

ಇಂಡಿ ಕೂಡ ವಿಜಯಪುರ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕೂಡ ಕಾಂಗ್ರೆಸ್‌ನ ಭದ್ರಕೋಟೆಯಾದರೂ ಜನತಾ ಪರಿವಾರ, ಸ್ವತಂತ್ರ ಪಾರ್ಟಿ ಅಭ್ಯರ್ಥಿಗಳು ಇಲ್ಲಿ ಗೆದ್ದಿದ್ದಾರೆ. ಮೂರ್ನಾಲ್ಕು ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 2013 ಮತ್ತು 2018ರ ಚುನಾವಣೆಲ್ಲಿ ಕಾಂಗ್ರೆಸ್ ಗೆದ್ದಿದೆ. ಕಳೆದ ಬಾರಿ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ್ ಅವರು 50501 ಮತಗಳನ್ನು ಪಡೆದುಕೊಂಡು, 9938 ಮತಗಳ ಅಂತರದಲ್ಲಿ ಜೆಡಿಎಸ್‌ನ ಬಿ ಡಿ ಪಾಟೀಲ್(ಹಣಜಗಿ) ವಿರುದ್ಧ ಜಯ ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ 40463 ಮತ ಪಡೆದಿದ್ದರು. ಇನ್ನು ಬಿಜೆಪಿಯ ದಯಾಸಾಗಾರ್ ಬಾಪುರಾಯ ಪಾಟೀಲ್ 38941, ಸ್ವತಂತ್ರ ಅಭ್ಯರ್ಥಿ ರವಿಕಾಂತ್ ಪಾಟೀಲ್ 31425 ಮತಗಳನ್ನು ಪಡೆದುಕೊಂಡಿದ್ದರು.

Exit mobile version