Site icon Vistara News

Karnataka Election: ನೆಹರು, ಇಂದಿರಾ ಮಂಗಳೂರು ವಿಮಾನ ನಿಲ್ದಾಣ, ಬಂದರು ನಿರ್ಮಿಸಿದ್ರು, ಮೋದಿ ಅದಾನಿಗೆ ಮಾರಿದ್ರು

Karnataka Election Results: victory for Karnataka giving priority to the idea of progress; says Priyanka Gandhi

Karnataka Election Results: victory for Karnataka giving priority to the idea of progress; says Priyanka Gandhi

ಮಂಗಳೂರು, ಕರ್ನಾಟಕ: ಇತ್ತ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ಪ್ರಚಾರ ಮಾಡುತ್ತಿದ್ದರೆ, ಅತ್ತ ಕರಾವಳಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಮತದಾರರನ್ನು ಸೆಳೆಯುವ ಕೆಲಸ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಲ್ಕಿಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು(Karnataka Election 2023).

ನಮಸ್ಕಾರ ತುಳುನಾಡು, ಮಾತೆರೆಗ್ಲ ಎನ್ನ ಸೊಲ್ಮೆಲು ಎಂದು ಮಾತ ಆರಂಭಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಇದು ದೈವ ಭೂಮಿ, ಧರ್ಮದ ಮಣ್ಣು, ಜೈನ ಧರ್ಮದ ಪವಿತ್ರ ಬೀಡು ಮೂಡಬಿದ್ರೆ. ಬಪ್ಪನಾಡು, ಕಟೀಲು ದುರ್ಗಾಪರಮೇಶ್ವರಿ ದೇವರ ಆಶೀರ್ವಾದ ಈ ಭೂಮಿಗಿದೆ. ಧರ್ಮದ ಊರಾಗಿರೋ ಇಲ್ಲಿಂದ ಒಂದು ಒಳ್ಳೆಯ ಸಂದೇಶ ದೇಶಕ್ಕೆ ಸಿಕ್ಕಿದೆ. ಸತ್ಯ ನಿಮ್ಮ ಹೃದಯದಲ್ಲಿರಬೇಕು, ಸತ್ಯದ ಭಾವದ ಜೊತೆ ಸೇವೆ ಮಾಡಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಲ್ಕಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತಯಾಚನೆ ಮಾಡಿದರು

ಇದು ಸೇವೆ ಮತ್ತು ಸತ್ಯ, ಸೇವೆಯ ಮನೋಭಾವನೆ ಇರಬೇಕು. ನೀವೆಲ್ಲರೂ ಕಷ್ಟ ಪಟ್ಟು ಕೆಲಸ ಮಾಡ್ತೀರ, ನೌಕರಿ ಮಾಡ್ತೀರ. ಇದೆಲ್ಲವೂ ದೇಶದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚುನಾವಣೆಯ ಸಮಯ, ಪಕ್ಷದ ಪ್ರಮುಖರು ನಿಮ್ಮ ಎದುರು ಬರ್ತಿದಾರೆ. ಇಲ್ಲಿಯೂ ಒಂದು ಖಾಲಿ ಜಾಗದಲ್ಲಿ ‌ಮೋದಿ ಸಭೆ ಆಗಿತ್ತು. ಆದರೆ ಈ ಸರ್ಕಾರ ನಿಮಗಾಗಿ ಏನು ಮಾಡಿದೆ? ಯಾವ ಯೋಜನೆ ತಂದಿದೆ? ಮೋದಿ ಚುನಾವಣೆ ಹೊತ್ತಲ್ಲಿ ಬಂದು ಆತಂಕವಾದ ಮತ್ತು ಸುರಕ್ಷತೆ ಬಗ್ಗೆ ಮಾತನಾಡ್ತಾರೆ. ಆದರೆ ಕರ್ನಾಟಕದಲ್ಲಿ ಇದೆಲ್ಲಾ ನಡೆಯಲ್ಲ ಅನಿಸುತ್ತದೆ ನನಗೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.

ಭಾಷಣ ತಯಾರು ಮಾಡುವ ಅಧಿಕಾರಿ ಉದ್ಯೋಗದ ಬಗ್ಗೆ ಹೇಳ್ತಾನೆ. ಆದರೆ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯೇ ಆಗಿಲ್ಲ, ಮಾತನಾಡೋದು ಹೇಗೆ. ಕೊನೆಗೆ ಆತಂಕವಾದ, ಸುರಕ್ಷತೆಯ ಭಾಷಣ ಮಾಡಿ ಹೋಗ್ತಾರೆ. ಪ್ರಧಾನಿಯವರಿಗೆ ರೈತರ ಆತ್ಮಹತ್ಯೆಯ ಬಗ್ಗೆ ಗೊತ್ತಿದ್ಯಾ? ಕರ್ನಾಟಕದಲ್ಲಿ ಮತ್ತೊಂದು ಆತಂಕ ಇದೆ, ಇಲ್ಲಿ 40% ಸರ್ಕಾರದ ಆತಂಕ ಇದೆ. ಜನರನ್ನು ಲೂಟಿ ಮಾಡುವ ಬಿಜೆಪಿ ಸರ್ಕಾರದ ಬಗ್ಗೆ ಆತಂಕ ಇದೆ. 40% ಸರ್ಕಾರ ಪ್ರತೀ ಸರ್ಕಾರಿ ಹುದ್ದೆಗೂ ರೇಟ್ ಫಿಕ್ಸ್ ಮಾಡ್ತಿದೆ, ಇದರ ಆತಂಕವಿದೆ. ಭ್ರಷ್ಟಾಚಾರದ ಆತಂಕ ಇಡೀ ರಾಜ್ಯದಲ್ಲಿ ಇದೆ. ಇವತ್ತು ಇಡೀ ಕರ್ನಾಟಕದಲ್ಲಿ ಇದರ ಆತಂಕ ಇದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.

ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್‌, ಕೆನರಾ ಬ್ಯಾಂಕ್ ಎಲ್ಲವನ್ನೂ ವಿಲೀನ ಮಾಡಿದ್ರು. ಇಂದಿರಾ ಗಾಂಧಿ ನವ ಮಂಗಳೂರು ಬಂದರು ನಿರ್ಮಾಣ ಮಾಡಿದರು. ನೆಹರೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ರು. ಆದರೆ ಮೋದಿ ಎರಡನ್ನೂ ಅದಾನಿ ಮಾರಾಟ ಮಾಡಿದರು. ಇದೆಲ್ಲವನ್ನೂ ಒಂದಿಬ್ಬರು ಜನರಿಗೆ ಮಾರಾಟ ಮಾಡೋದು ಆತಂಕ ಅಲ್ವಾ? ಇದೆಲ್ಲವೂ ಬಿಜೆಪಿಯ ಭ್ರಷ್ಟಾಚಾರದ ಬಹುದೊಡ್ಡ ಆತಂಕ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.

ಚುನಾವಣೆ ಹೊತ್ತಲ್ಲಿ ಅಭಿವೃದ್ಧಿ, ಉದ್ಯೋಗದ ಮಾತು ಆಡಲ್ಲ. ಅದರ ಬದಲು ಧರ್ಮದ ಭಾಷಣ ಮಾಡುವ ಕೆಲಸ ಆಗ್ತಿದೆ. ಚುನಾವಣೆ ಭವಿಷ್ಯ ಬದಲಿಸಲು ಇರೋ ಒಂದು ಅವಕಾಶ. ಬೆಂಗಳೂರು ‌ಮತ್ತು ಕರ್ನಾಟಕದ ಹಲವು ಜಾಗಗಳು ಜಗತ್ತಿನಲ್ಲೇ ಪ್ರಸಿದ್ದವಾಗಿದೆ. ಕರ್ನಾಟಕ ಶಿಕ್ಷಣದ ಪ್ರಸಿದ್ದ ಕೇಂದ್ರ, ಇಲ್ಲಿ ಉದ್ಯೋಗ ಸೃಷ್ಟಿಸಲು ಅವಕಾಶ ಇದೆ. ಬೆಂಗಳೂರು ಸೇರಿ ಬೇರೆ ಜಿಲ್ಲೆಯ ಯುವಕರಿಗೆ ಉತ್ತಮ ಶಿಕ್ಚಣ ಇದೆ. ಆದರೆ ಇಲ್ಲಿ ಉದ್ಯೋಗ ಸಿಗದೇ ಜಗತ್ತಿನ ಬೇರೆ ಕಡೆ ಹೋಗಿ ಕೆಲಸ ಮಾಡುತ್ತಿದ್ದಾರೆಂದು ಪ್ರಧಾನಿ ಮೋದಿ ಅವರು ಹೇಳಿದರು.

ಇದನ್ನೂ ಓದಿ: Karnataka Election 2023: ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಸೋನಿಯಾ ಗಾಂಧಿ ಎಂಟ್ರಿ, ಶೆಟ್ಟರ್ ಪರ ಕ್ಯಾಂಪೇನ್

ಚುನಾವಣೆ ಹೊತ್ತಲ್ಲಿ ನಿಮ್ಮ ಅಗತ್ಯಗಳಿಗಾಗಿ ಮತ ಚಲಾಯಿಸಿ. ರಾಜ್ಯದ ಬಿಜೆಪಿ ಸರ್ಕಾರ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? ಇವರ 40% ಸರ್ಕಾರ, ಗುತ್ತಿಗೆದಾರರ ಸಂಘವೇ ದೂರು ನೀಡಿದೆ. ಕೆಎಂಎಫ್ ಸದೃಢವಾಗಿದೆ. ಈಗ ಗುಜರಾತ್ ನ‌ ಅಮುಲ್ ಜತೆ ವಿಲೀನ ಮಾಡಲು ಯತ್ನಿಸ್ತಾ ಇದ್ದಾರೆ. ಕಾಂಗ್ರೆಸ್ ಕೆಲವು ಗ್ಯಾರಂಟಿಗಳನ್ನ ಕೊಟ್ಟಿದೆ, ಆದರೆ ಅದಕ್ಕೆ ಹಣ ಎಲ್ಲಿಂದ ತರ್ತಾರೆ ಅಂತ ಪ್ರಶ್ನೆಸ್ತಿದಾರೆ? ಆದರೆ ನಮ್ಮ ಸರ್ಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ ಎಂದರು.

Exit mobile version