ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಇಬ್ಬರ ಗುರುತನಗನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರೂ ಆರೋಪಿಗಳನ್ನು ಶುಕ್ರವಾರ ಸಂಜೆಯೊಳಗೆ ಪತ್ತೆ ಹಚ್ಚುವುದಾಗಿ ಪೊಲೀಸರು “ವಿಸ್ತಾರ ನ್ಯೂಸ್”ಗೆ ಮಾಹಿತಿ ನೀಡಿದ್ದಾರೆ.
‘ಚೋಟಾ ಪಾಕಿಸ್ತಾನ’ ಎಂದು ವರ್ಣಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಈಗಾಗಲೆ ವೈರಲ್ ಆಗಿದೆ. ಕವಲಂದೆಯಲ್ಲಿ ರಂಜಾನ್ ವೇಳೆ ನಮಾಜ್ ಮುಗಿಸಿ ಒಂದು ಕಡೆ ಜನರು ಸೇರಿದ್ದರು. ಈ ವೇಳೆ, ಕವಲಂದೆ ಗ್ರಾಮದಲ್ಲಿ ಚೋಟಾ ಪಾಕಿಸ್ತಾನ್ ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. ಪ್ರಾರ್ಥನೆ ಮುಗಿಸಿ ಹಿಂತಿರುಗಿದ ನಂತರ ರಸ್ತೆಯ ಪಕ್ಕದಲ್ಲಿ ನಿಂತಿದ್ದರು. “ನಾರಾ ಇ ತಕ್ಬೀರ್ ಅಲ್ಲಾಹು ಅಕ್ಬರ್” ಎಂದು ಕೂಗುತ್ತಿರುವ ಪುರುಷರ ಗುಂಪನ್ನು ಈ ವಿಡಿಯೋದಲ್ಲಿ ನೋಡಬಹುದು. ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯೊಬ್ಬರು, “ಇದು ಛೋಟಾ ಪಾಕಿಸ್ತಾನ್” ಎಂದಿದ್ದಾರೆ. ಜನಸಂದಣಿಯಲ್ಲಿದ್ದ ವ್ಯಕ್ತಿಯೊಬ್ಬ, “ನಮ್ಮ ಹಳ್ಳಿಯಲ್ಲಿ ಸಭೆಯನ್ನು ನೋಡು” ಎಂದು ಹೇಳಿದಾಗ, ಇನ್ನೊಬ್ಬರು “ಯೇ ಭಿ ಪಾಕಿಸ್ತಾನ್ ಹೇ, ಚೋಟಾ. ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್, ಟೀಕ್ ಹೈ” ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ವಿಷಯದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರೊಂದಿಗೆ ಮಾತನಾಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ವೀಡಿಯೋವನ್ನು ಯಾರು ಚಿತ್ರೀಕರಿಸಿದ್ದಾರೆ ಎಂಬುದು ಅಸ್ಪಷ್ಟವಾಗಿದ್ದು, ಅದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗಿದೆ. ಇಬ್ಬರು ಆರೋಪಿಗಳನ್ನು ಫಯಾಜ್ ಮತ್ತು ಹಸನ್ ಎಂದು ಗುರುತಿಸಲಾಗಿದೆ. ಸಂಜೆಯೊಳಗೆ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನೋ ಓದಿ: ಖಡಕ್ ಸಿಎಂ ಅಂದರೆ ಏನು?: ಪ್ರತಿಪಕ್ಷಗಳಿಗೆ ಬಸವರಾಜ ಬೊಮ್ಮಾಯಿ ಪ್ರಶ್ನೆ